ನವದೆಹಲಿ: ಕೇಂದ್ರ ಗಣಿ ಸಚಿವಾಲಯದಿಂದ ನಡೆದ ನಾಲ್ಕನೇ ಸುತ್ತಿನ ಇ–ಟೆಂಡರ್‌ನಲ್ಲಿ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ವೇದಾಂತ ಕಂಪನಿಯು 4 ಪ್ರಮುಖ ಖನಿಜ ನಿಕ್ಷೇಪಗಳ ಗಣಿಗಾರಿಕೆಗೆ ಗುತ್ತಿಗೆ ಪಡೆದಿದೆ.
ಕರ್ನಾಟಕದಲ್ಲಿ ಕೋಬಾಲ್ಟ್, ಮ್ಯಾಂಗನೀಸ್ ಮತ್ತು ಕಬ್ಬಿಣ (ಪಾಲಿಮೆಟಲ್) ಗಣಿಗಾರಿಕೆಯ ಗುತ್ತಿಗೆ ಪಡೆದಿದೆ. ಅರುಣಾಚಲ ಪ್ರದೇಶದಲ್ಲಿ ವನಾಡಿಯಮ್ ಮತ್ತು ಗ್ರಾಫೈಟ್, ವೇದಾಂತದ ಅಂಗಸಂಸ್ಥೆ ಹಿಂದುಸ್ತಾನ್ ಜಿಂಕ್ ಲಿಮಿಟೆಡ್ ಆಂಧ್ರಪ್ರದೇಶದಲ್ಲಿ ಟಂಗ್‌ಸ್ಟನ್ ಮತ್ತು ಸಂಬಂಧಿತ ಖನಿಜಗಳ ನಿಕ್ಷೇಪ ಹಾಗೂ ತಮಿಳುನಾಡಿನಲ್ಲಿ ಟಂಗ್‌ಸ್ಟನ್ ನಿಕ್ಷೇಪದ ಗುತ್ತಿಗೆ ಪಡೆದಿದೆ.
ಭಾರತೀಯ ತೈಲ ನಿಗಮವು (ಒಐಎಲ್) ಅರುಣಾಚಲ ಪ್ರದೇಶದಲ್ಲಿ ಗ್ರಾಫೈಟ್ ಮತ್ತು ವನಾಡಿಯಮ್ ನಿಕ್ಷೇಪದ ಗುತ್ತಿಗೆಯೊಂದನ್ನು ಪಡೆದಿದೆ ಎಂದು ಸರ್ಕಾರ ತಿಳಿಸಿದೆ.
ನಾಲ್ಕನೇ ಸುತ್ತಿನ ಹರಾಜಿನಲ್ಲಿ 8 ಖನಿಜ ನಿಕ್ಷೇಪಗಳ ಹರಾಜು ನಡೆಯಿತು. ಮ್ಯಾಮ್ಕೋ ಮೈನಿಂಗ್ ಪ್ರೈ.ಲಿ ಮತ್ತು ಒರಿಸ್ಸಾ ಮೆಟಾಲಿಕ್ಸ್ ಪ್ರೈ.ಲಿ ಹರಾಜಿನಲ್ಲಿ ನಿಕ್ಷೇಪ ಪಡೆದ ಕಂಪನಿಗಳಾಗಿವೆ ಎಂದು ತಿಳಿಸಿದೆ.
ಈಗಾಗಲೇ ನಡೆದ ಎರಡು ಮತ್ತು ಮೂರನೇ ಸುತ್ತಿನಲ್ಲಿ ವೇದಾಂತ ಕಂಪನಿಯು ಕರ್ನಾಟಕ ಮತ್ತು ಬಿಹಾರದಲ್ಲಿ ಎರಡು ಖನಿಜ ನಿಕ್ಷೇಪಗಳ ಗುತ್ತಿಗೆ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.