ADVERTISEMENT

ವೇದಾಂತ ನಷ್ಟ ₹1,783 ಕೋಟಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 15:15 IST
Last Updated 4 ನವೆಂಬರ್ 2023, 15:15 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಉದ್ಯಮಿ ಅನಿಲ್ ಅಗರ್ವಾಲ್‌ ಒಡೆತನದ ವೇದಾಂತ ಲಿಮಿಟೆಡ್‌, ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹1,783 ಕೋಟಿ ನಷ್ಟ ಅನುಭವಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹1,808 ಕೋಟಿಯಷ್ಟು ಲಾಭ ಆಗಿತ್ತು. ಒಟ್ಟು ವರಮಾನವು ₹37,351 ಕೋಟಿಯಿಂದ ₹39,585 ಕೋಟಿಗೆ ಏರಿಕೆ ಆಗಿದೆ  ಎಂದು ಷೇರುಪೇಟೆಗೆ ತಿಳಿಸಿದೆ.

ADVERTISEMENT

2022–23ನೇ ಹಣಕಾಸು ವರ್ಷದಿಂದ ಹೊಸ ತೆರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದೇ ನಷ್ಟಕ್ಕೆ ಕಾರಣ ಎಂದು ಕಂಪನಿ ಹೇಳಿದೆ. ಸೆಪ್ಟೆಂಬರ್‌ 30ರ ಅಂತ್ಯಕ್ಕೆ ಸರಾಸರಿ ಸಾಲದ ಮೊತ್ತ ₹74,473 ಕೋಟಿಯಷ್ಟು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.