ಬೆಳಗಾವಿ: ಇಲ್ಲಿನ ಮಾರುಕಟ್ಟೆಯಲ್ಲಿ ಬದನೆಕಾಯಿ ಸೇರಿದಂತೆ ಇತರ ತರಕಾರಿಗಳ ಬೆಲೆ ಏರಿಕೆಯಾಗಿದೆ.
ಎರಡ್ಮೂರು ತಿಂಗಳಿಂದ ಈರುಳ್ಳಿ, ಆಲೂಗಡ್ಡೆ ದರದಲ್ಲಿ ಏರಿಕೆ ಕಂಡುಬಂದಿತ್ತು. ಆದರೆ ಈಗ ಬದನೆಕಾಯಿ ಬೆಲೆಯೂ ಕಳೆದ ವಾರಕ್ಕಿಂತ ಹೆಚ್ಚಳವಾಗಿದೆ. ಗುರುವಾರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜೆ.ಗೆ₹ 70–80 ಇತ್ತು. ಹೋದವಾರ ಸರಾಸರಿ ₹ 30ರಿಂದ ₹ 40 ಇತ್ತು. ಈಗ ಬೆಲೆ ದುಪ್ಪಟ್ಟಾಗಿದೆ. ಆವಕ ಕಡಿಮೆಯಾಗಿರುವುದು ಇದಕ್ಕೆ ಕಾರಣ.
ಪ್ರತಿ ವರ್ಷ ಸಂಕ್ರಮಣ ಹಬ್ಬದಂದು ಬದನೆಕಾಯಿ ದರ ಹೆಚ್ಚಳವಾಗುತ್ತದೆ. ಆದರೆ, ಈ ವರ್ಷ ಕೊಂಚ ಜಾಸ್ತಿಯೇ ಹೆಚ್ಚಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಗುಣಮಟ್ಟದ ಆದಾರದ ಮೇಲೆ ಬದನೆಕಾಯಿ ₹ 500–₹ 600 (10 ಕೆ.ಜಿ.ಗೆ, ಸಗಟು) ಮಾರಾಟವಾಗುತ್ತಿದೆ. ಹೀಗಾಗಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಗ್ರಾಹಕರಿಗೆ ಕಣ್ಣೀರು ತರಿಸಿದ್ದಈರುಳ್ಳಿಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವುದರಿಂದ, ದರಕೊಂಚ ಇಳಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹ 50ರಿಂದ ₹ 60ಕ್ಕೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಕೆ.ಜಿ.ಗೆ ₹ 30ರಿಂದ ₹ 40ಕ್ಕೆ (ಹಿಂದಿನ ವಾರವೂ ಅಷ್ಟೇ ಇತ್ತು) ಮಾರಾಟವಾಗುತ್ತಿದೆ.
ಟೊಮೆಟೊ ಕೆ.ಜಿ.ಗೆ ₹10ರಿಂದ ₹ 20, ಬೆಂಡೆಕಾಯಿ ₹ 40–₹ 60, ದೊಡ್ಡ ಮೆಣಸಿನಕಾಯಿ ₹ 40ರಿಂದ ₹ 60, ಮೆಣಸಿನಕಾಯಿ ₹ 30ರಿಂದ ₹ 50 ಇದೆ. ಬೀನ್ಸ್ ₹ 50ರಿಂದ ₹ 60, ಹೀರೆಕಾಯಿ ₹ 50ರಿಂದ ₹ 60, ಸೌತೆಕಾಯಿ ₹ 40ರಿಂದ ₹ 60, ಚವಳಿಕಾಯಿ ₹ 50ರಿಂದ 60ಕ್ಕೆ ಚಿಲ್ಲರೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.
ಚಳಿಗಾಲ ಆರಂಭವಾಗಿರುವುದರಿಂದ ಸೊಪ್ಪು ಹೆಚ್ಚು ಆವಕವಾಗುತ್ತಿದೆ. ಹೀಗಾಗಿ,ದರಸ್ಥಿರವಾಗಿದೆ. ಕೊತ್ತಂಬರಿ ಸೊಪ್ಪು (ಒಂದು ಕಟ್ಟು ₹ 5ರಿಂದ ₹ 10), ಮೆಂತ್ಯೆ ಸೊಪ್ಪು ₹ 10ಕ್ಕೆ (1 ಕಟ್ಟು ), ಪುದೀನಾ ₹5– ₹10, ಸಬ್ಬಸಗಿ ₹10– ₹15 (2 ಕಟ್ಟು)ಇದೆ.
ಹಣ್ಣುಗಳ ದರ ಸ್ಥಿರ: ಬಾರೆ ಹಣ್ಣಿನದರ ಕೆ.ಜಿ.ಗೆ ₹10–₹20 ಇದೆ. ಸೇಬು ಸರಾಸರಿ ₹ 50ರಿಂದ ₹120 ಇದೆ. ಹೋದ ವಾರದಷ್ಟೇ ಇದೆ. ಸೀತಾಫಲ ₹160– ₹ 200, ಪೇರಲ ₹ 60– ₹ 80, ಚಿಕ್ಕು ₹ 70– ₹80 ಇದೆ. ದಾಳಿಂಬೆ, ಮೊಸಂಬಿ, ದ್ರಾಕ್ಷಿ ಹಣ್ಣುಗಳು ಲಭ್ಯ ಇವೆ.
ಮೊಟ್ಟೆ ದರದಲ್ಲಿ ಕೊಂಚ ಮಟ್ಟಿಗೆ ಏರಿಕೆಯಾಗಿದೆ. ಡಜನ್ ಬ್ರಾಯ್ಲರ್ ಮೊಟ್ಟೆಗೆ ₹ 60 ಇದೆ. ಕೋಳಿ ಮಾಂಸ (ಕೆ.ಜೆ.ಗೆ ₹170– ₹180), ಕುರಿ ಮಾಂಸ (₹520– ₹540)ದರಹಿಂದಿನ ವಾರದಷ್ಟೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.