ಬೆಂಗಳೂರು: ನಗರದ ಐಭಾನ್ ಡಿಜಿಟಲ್ ಎಡ್ಜ್ ಸಂಸ್ಥೆಯು ದೇಶೀಯವಾಗಿ ತಯಾರಿಸಿದ ತಂತ್ರಜ್ಞಾನವು ವಾಹನಗಳ ನಕಲಿ ಅಥವಾ ದೋಷಪೂರಿತ ನಂಬರ್ ಪ್ಲೇಟ್‍ಗಳನ್ನು ಪತ್ತೆ ಹಚ್ಚಲು ನೆರವಾಗಲಿದೆ.
ಮುಂದಿನ ವರ್ಷದ ಏಪ್ರಿಲ್‌ನಿಂದ ಎಲ್ಲ ಹೊಸ ವಾಹನಗಳಿಗೆ ಗರಿಷ್ಠ ಸುರಕ್ಷತೆಯ ನೋಂದಣಿ ಫಲಕ (ಎಚ್‍ಎಸ್‍ಆರ್‍ಪಿ) ಅಳವಡಿಸುವುದು ಕಡ್ಡಾಯವಾಗಿದೆ. ವಾಹನ ತಯಾರಕರೇ ಇವುಗಳನ್ನು ಒದಗಿಸಬೇಕಾಗಿದೆ.
‘ಆಸ್ಟ್ರೇಲಿಯಾದ ನ್ಯಾನೊಟ್ಯಾಗ್ ಟೆಕ್ನಾಲಜೀಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಇಭಾನ್ ನ್ಯಾನೊ ಮತ್ತು ಮೈಕ್ರೊ ಡಾಟ್‍ನಿಂದ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವು ‘ಎಚ್‍ಎಸ್‍ಆರ್‍ಪಿ’ ನಕಲು ಮಾಡಲು ಸಾಧ್ಯವಾಗದಿರುವಷ್ಟು ಭದ್ರತೆ ನೀಡಲಿದೆ’ ಎಂದು ಐಭಾನ್ ಸಿಐಒ ರವಿಕುಮಾರ್ ಹೇಳಿದ್ದಾರೆ.
‘ಶೀಘ್ರದಲ್ಲಿಯೇ ಈ ಸೇವೆ ಆರಂಭಿಸಲಾಗುವುದು. ನಕಲಿ ರಿಜಿಸ್ಟ್ರೇಷನ್ ಪ್ಲೇಟ್‍ಗಳ ಹಾವಳಿ ತಡೆಗಟ್ಟಲು ಪೂರಕವಾದ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.