ಬೆಂಗಳೂರು: ವೆಲ್ನಿಕ್ ಇಂಡಿಯಾ ಲಿಮಿಟೆಡ್ ಕಂಪನಿಯು ದೇಶದ ಮಾರುಕಟ್ಟೆಗೆ ‘ನ್ಯೂಟ್ರಿಗೇನ್ ಪ್ಲಸ್’ ಎನ್ನುವ ಹೊಸ ಉತ್ಪನ್ನ ಬಿಡುಗಡೆ ಮಾಡಿದೆ. ತೂಕ ಹೆಚ್ಚಿಸಿಕೊಳ್ಳುವ ಆಯುರ್ವೇದಿಕ್ ಪೌಡರ್ ಇದು ಎಂದು ಕಂಪನಿ ಹೇಳಿದೆ.
29 ಬಗೆಯ ವಿಟಮಿನ್ ಮತ್ತು ಮಿನರಲ್‌ಗಳ ಜೊತೆಗೆ ಅಶ್ವಗಂಧ, ಶತಾವರಿ ಸೇರಿದಂತೆ 6 ಗಿಡಮೂಲಿಕೆಗಳನ್ನು ಸಹ ಇದು ಒಳಗೊಂಡಿದೆ. ಈ ಉತ್ಪನ್ನಕ್ಕೆ ಯಾವುದೇ ಕೃತಕ ಬಣ್ಣ ಮತ್ತು ಪರಿಮಳವನ್ನು ಸೇರಿಸಿಲ್ಲ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
‘ನಮ್ಮ ಗ್ರಾಹಕರಿಗೆ ನ್ಯೂಟ್ರಿಗೇನ್ ಪ್ಲಸ್ ಪರಿಚಯಿಸಲು ಸಂತೋಷ ಆಗುತ್ತಿದೆ. ಈ ಉತ್ಪನ್ನ ಹೊರತರಲು ನಾವು ಬಹಳ ದೀರ್ಘ ಸಮಯದಿಂದ ಕೆಲಸ ಮಾಡುತ್ತಿದ್ದೆವು. ಆಯುರ್ವೇದಿಕ್ ನ್ಯೂಟ್ರಾಸುಟಿಕಲ್ (ಆರೋಗ್ಯವರ್ಧಕ ಆಹಾರ ವಸ್ತುಗಳು) ಮಾರುಕಟ್ಟೆಯಲ್ಲಿ ಪರಿವರ್ತನೆಗೆ ಇದು ಕಾರಣವಾಗುವ ವಿಶ್ವಾಸವಿದೆ’ ಎಂದು ವೆಲ್ನಿಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುಖದೇವ್ ಗೆಹ್ಲೋಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.