ನವದೆಹಲಿ: ನಷ್ಟದಲ್ಲಿರುವ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯು ಜೂನ್‌ನಲ್ಲಿಯೂಮೊಬೈಲ್ ಬಳಕೆದಾರರನ್ನು ಕಳೆದುಕೊಂಡಿದೆ. ಇದೇ ವೇಳೆ ಜಿಯೊ ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಮಾಹಿತಿ ನೀಡಿದೆ.
ವೊಡಾಫೋನ್ ಐಡಿಯಾ ಕಂಪನಿಯು ಜೂನ್‌ನಲ್ಲಿ 42.8 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡಿದೆ. ಇದರಿಂದ ಕಂಪನಿಯ ಒಟ್ಟಾರೆ ಗ್ರಾಹಕರ ಸಂಖ್ಯೆಯು 27.3 ಕೋಟಿಗೆ ಇಳಿಕೆ ಆಗಿದೆ.
ರಿಲಯನ್ಸ್ ಜಿಯೊಗೆ ಜೂನ್‌ನಲ್ಲಿ ಹೊಸದಾಗಿ 54.6 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದು, ಒಟ್ಟು ಬಳಕೆದಾರರ ಸಂಖ್ಯೆ 43.6 ಕೋಟಿಗೆ ಏರಿಕೆಯಾಗಿದೆ. ಭಾರ್ತಿ ಏರ್‌ಟೆಲ್ ಕಂಪನಿಯ ಬಳಕೆದಾರ ಸಂಖ್ಯೆಯು 38.1 ಲಕ್ಷದಷ್ಟು ಹೆಚ್ಚಾಗಿದ್ದು ಒಟ್ಟು ಬಳಕೆದಾರರ ಸಂಖ್ಯೆಯು 35.2 ಕೋಟಿಗಳಷ್ಟಾಗಿದೆ. ಮೊಬೈಲ್ ಬಳಕೆದಾರರ ಒಟ್ಟು ಸಂಖ್ಯೆಯು ಜೂನ್ ತಿಂಗಳ ಅಂತ್ಯಕ್ಕೆ 120.2 ಕೋಟಿಗಳಿಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.