ADVERTISEMENT

ನಿವೃತ್ತಿ ವಯಸ್ಸು ನಿಗದಿ: ಏರ್‌ ಇಂಡಿಯಾ ಪೈಲಟ್‌ಗಳ ಅಸಮಾಧಾನ

ಪಿಟಿಐ
Published 10 ನವೆಂಬರ್ 2024, 14:08 IST
Last Updated 10 ನವೆಂಬರ್ 2024, 14:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ : ವಿಸ್ತಾರಾ ಕಂಪನಿಯು ಏರ್‌ ಇಂಡಿಯಾ ವಿಮಾನಯಾನ ಕಂಪನಿ ಜೊತೆಗೆ ವಿಲೀನವಾಗುತ್ತಿದೆ. ಈ ನಡುವೆಯೇ ಟಾಟಾ ಸಮೂಹಕ್ಕೆ ಸೇರಿದ ಈ ಎರಡು ಕಂಪನಿಯ ಪೈಲಟ್‌ಗಳ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ನಿಗದಿ‍ಪಡಿಸಿರುವ ವಯೋಮಿತಿ ಬಗ್ಗೆ ಏರ್‌ ಇಂಡಿಯಾದ ಕೆಲವು ಪೈಲಟ್‌ಗಳು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

1950ರಿಂದ ಕೇಂದ್ರ ಸರ್ಕಾರದ ಒಡೆತನದಲ್ಲಿದ್ದ ಏರ್‌ ಇಂಡಿಯಾವು, 2022ರಲ್ಲಿ ಟಾಟಾ ಸಮೂಹದ ತೆಕ್ಕೆಗೆ ಸೇರಿತು. ಈ ಪೈಲಟ್‌ಗಳ ನಿವೃತ್ತಿ ವಯಸ್ಸು 58ಕ್ಕೆ ನಿಗದಿ‍ಯಾಗಿದೆ. ವಿಸ್ತಾರಾ ಪೈಲಟ್‌ಗಳ ವಯೋನಿವೃತ್ತಿಯನ್ನು 60 ವರ್ಷಕ್ಕೆ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.

ಸಿಂಗ‍ಪುರ ಏರ್‌ಲೈನ್ಸ್‌ ಮತ್ತು ಟಾಟಾ ಸಮೂಹದ ಜಂಟಿ ಒಡೆತನದಲ್ಲಿರುವ ವಿಸ್ತಾರಾ ನವೆಂಬರ್‌ 11ರಂದು ಅಧಿಕೃತವಾಗಿ ವಿಲೀನಗೊಳ್ಳಲಿದೆ. 

ADVERTISEMENT

‘ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆ ಪರಿಹರಿಸುವ ಬಗ್ಗೆ ಆಡಳಿತ ಮಂಡಳಿಯು ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಮೂಲಗಳು ಹೇಳಿವೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ನಿಯಮಾವಳಿ ಪ್ರಕಾರ ಪೈಲಟ್‌ಗಳು 65 ವರ್ಷದವರೆಗೂ ಸೇವೆ ಸಲ್ಲಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.