ADVERTISEMENT

ಬಂಡವಾಳ ಸಂಗ್ರಹಕ್ಕೆ ವೊಡಾಫೋನ್‌ ಐಡಿಯಾ ಸಿದ್ಧತೆ: ರವೀಂದರ್‌ ಟಕ್ಕರ್

ಪಿಟಿಐ
Published 22 ಸೆಪ್ಟೆಂಬರ್ 2021, 14:16 IST
Last Updated 22 ಸೆಪ್ಟೆಂಬರ್ 2021, 14:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ವೊಡಾಫೋನ್‌ ಐಡಿಯಾ ಕಂಪನಿಯು ಬಂಡವಾಳ ಸಂಗ್ರಹಿಸಲು ಹೊಸದಾಗಿ ಆಡಳಿತ ಮಂಡಳಿಯ ಒಪ್ಪಿಗೆ ಕೇಳಲಿದ್ದು, ಪ್ರವರ್ತಕರು ಬಂಡವಾಳ ಸಂಗ್ರಹದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ ಎಂದು ಕಂಪನಿಯ ಸಿಇಒ ರವೀಂದರ್‌ ಟಕ್ಕರ್ ಹೇಳಿದ್ದಾರೆ.

ದೂರಸಂಪರ್ಕ ವಲಯದ ಸುಧಾರಣೆ ಕುರಿತುಕೇಂದ್ರ ಸರ್ಕಾರವು ವಿವರವಾದ ಮಾರ್ಗಸೂಚಿ ನೀಡಿದ ಬಳಿಕ ಕಂಪನಿಯು ಈ ಕ್ರಮಕ್ಕೆ ಮುಂದಾಗಲಿದೆ.

ಈ ಮೊದಲು ₹ 25 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಕಂಪನಿಯು ಆಡಳಿತ ಮಂಡಳಿಯ ಒಪ್ಪಿಗೆ ಪಡೆದಿತ್ತು. ಆದರೆ, ಯಾವುದೇ ಹೂಡಿಕೆದಾರರನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.