ADVERTISEMENT

Vi MiFi: 4G ಪಾಕೆಟ್ ರೂಟರ್ ಪರಿಚಯಿಸಿದ ವೊಡಾಫೋನ್ ಐಡಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2022, 6:45 IST
Last Updated 28 ಮಾರ್ಚ್ 2022, 6:45 IST
   

ಬೆಂಗಳೂರು: ವೇಗದ ಇಂಟರ್‌ನೆಟ್ ಒದಗಿಸುವ ಮತ್ತು ಏಕಕಾಲಕ್ಕೆ 10 ಉಪಕರಣಗಳಲ್ಲಿ ವೈಫೈ ಬಳಸಲು ಅನುಕೂಲವಾಗುವ ವಿ MiFi ಹೊಸ ರೂಟರ್ ಅನ್ನು ವೊಡಾಫೋನ್ ಐಡಿಯಾ ‘ವಿ‘ ಪರಿಚಯಿಸಿದೆ.

ಬಳಕೆದಾರರು ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿ, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸಿಸಿಟಿವಿ, ಸ್ಮಾರ್ಟ್ ಸ್ಪೀಕರ್ಸ್ ಮತ್ತು ವಿವಿಧ ಗ್ಯಾಜೆಟ್‌ಗಳಲ್ಲಿ ಬಳಸಬಹುದು ಎಂದು ಕಂಪನಿ ಹೇಳಿದೆ.

ಪ್ರಯಾಣದ ಸಂದರ್ಭದಲ್ಲಿ, ವರ್ಕ್ ಫ್ರಮ್ ಹೋಮ್‌ ಬಳಕೆಗೆ ಹಾಗೂ ಕಚೇರಿಗಳಲ್ಲಿ ಕೂಡ ವಿ MiFi ರೂಟರ್ ಬಳಸಲು ಅನುಕೂಲ ಎಂದು ವಿ ತಿಳಿಸಿದೆ.

ADVERTISEMENT

ವಿ ಫ್ಯಾಮಿಲಿ ಪ್ಲ್ಯಾನ್ಸ್ ಮತ್ತು ವೈಯಕ್ತಿಕ ಪೋಸ್ಟ್‌ಪೇಯ್ಡ್ ಪ್ಲ್ಯಾನ್ಸ್ ಜತೆಗೆ ಹೊಸ ರೂಟರ್ ಲಭ್ಯವಿದೆ.

ವಿ MiFi, 2700ಎಂಎಎಚ್ ಬ್ಯಾಟರಿ ಹೊಂದಿದ್ದು, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಐದು ಗಂಟೆ ಬಳಸಬಹುದು.

ಹೊಸ ವಿ MiFi ರೂಟರ್ ದರ ₹2000 ಇದ್ದು, ಅದರ ಜತೆಗೆ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪಡೆದುಕೊಳ್ಳಬಹುದು. ವೈಯಕ್ತಿಕ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ₹399 ರಿಂದ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.