ಲಂಡನ್: ಬ್ರಿಟಿಷ್ ದೂರಸಂಪರ್ಕ ಸೇವಾ ಕಂಪನಿ ವೊಡಾಫೋನ್ ಮುಂದಿನ ಮೂರು ವರ್ಷಗಳಲ್ಲಿ 11 ಸಾವಿರ ನೌಕರರನ್ನು ಕೆಲಸದಿಂದ ತೆಗೆಯಲಿದೆ.
ಕಂಪನಿಯ ಹೊಸ ಸಿಇಒ, ಕಂಪನಿಯನ್ನು ಇನ್ನಷ್ಟು ‘ಸರಳಗೊಳಿಸಲು’ ಬಯಸಿರುವ ಕಾರಣ ಈ ಕ್ರಮ ಅನುಸರಿಸಲು ತೀರ್ಮಾನಿಸಲಾಗಿದೆ.
11 ಸಾವಿರ ನೌಕರರನ್ನು ಕೆಲಸದಿಂದ ತೆಗೆದರೆ ವೊಡಾಫೊನ್ ಕಂಪನಿಯು ತನ್ನ ಒಟ್ಟು ನೌಕರರಲ್ಲಿ ಶೇಕಡ 10ಕ್ಕಿಂತ ಹೆಚ್ಚಿನ ನೌಕರರನ್ನು ವಜಾಗೊಳಿಸಿದಂತೆ ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.