ಬೆಂಗಳೂರು: ವೋಲ್ವೊ ಬಸಸ್ ಇಂಡಿಯಾ ಕಂಪನಿಯು ಸಂಪೂರ್ಣವಾಗಿ ತಾನೇ ಸಿದ್ಧಪಡಿಸಿರುವ ಸ್ಲೀಪರ್ ಕೋಚ್ ಬಸ್ಸುಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಹೊಸಕೋಟೆಯಲ್ಲಿ ಇರುವ ಕಂಪನಿಯ ತಯಾರಿಕಾ ಘಟಕದಲ್ಲಿ ಈ ಕೋಚ್‌ಗಳನ್ನು ತಯಾರಿಸಲಾಗಿದ್ದು, ಉತ್ತಮ ವಿನ್ಯಾಸ, ಬಾಳ್ವಿಕೆ, ಆರಾಮ ಮತ್ತು ಸುರಕ್ಷತೆಯ ದೃಷ್ಟಿಯಿಂದ ಭಿನ್ನವಾಗಿ ಗುರುತಿಸಿಕೊಳ್ಳಲಿವೆ ಎಂದು ಕಂಪನಿಯ ಬಸ್ ವಿಭಾಗದ ಅಧ್ಯಕ್ಷ ಆಕಾಶ್ ಪಸ್ಸೆ ಹೇಳಿದರು.
15-ಮೀಟರ್ ಸ್ಲೀಪರ್ ಬಸ್ ಬಾಡಿ ಪ್ಲಾಟ್‌ಫಾರ್ಮ್ ಅನ್ನು 12-ಮೀಟರ್ ಮತ್ತು 13.5 ಮೀಟರ್ ಚಾಸಿಸ್ ಅನ್ನು ಒಳಗೊಂಡಿರುವ ವೋಲ್ವೊ ಬಿ8ಆರ್ ಶ್ರೇಣಿಗೆ ಅಳವಡಿಸಬಹುದು ಎಂದು ಕಂಪನಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.