ADVERTISEMENT

ವೋಲ್ವೊ ಕಾರ್ ಕಂಪನಿಯ ಎಲ್ಲ ಸಿಬ್ಬಂದಿಗೆ 6 ತಿಂಗಳ ವೇತನ ಸಹಿತ ಪಾಲನಾ ರಜೆ

ಏಜೆನ್ಸೀಸ್
Published 30 ಮಾರ್ಚ್ 2021, 9:43 IST
Last Updated 30 ಮಾರ್ಚ್ 2021, 9:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸ್ಟಾಕ್‌ಹೋಮ್: ಸ್ವೀಡನ್ ಮೂಲದ ವಾಹನ ತಯಾರಿಕ ಸಂಸ್ಥೆ ವೋಲ್ವೊ, ಜಾಗತಿಕವಾಗಿ ತನ್ನ ಎಲ್ಲ 40,000 ಉದ್ಯೋಗಿಗಳಿಗೆ ಆರು ತಿಂಗಳ ವೇತನ ಸಹಿತ ಪಾಲನಾ ರಜೆಯನ್ನು ನೀಡುವುದಾಗಿ ಹೇಳಿದೆ.

ಲಿಂಗ ತಾರತಮ್ಯವನ್ನು ಹೋಗಲಾಡಿಸುವುದು ಮತ್ತು ಉದ್ಯೋಗಿಗಳಿಗೆ ಹೆಚ್ಚಿನ ಉತ್ತೇಜನ ಈ ಕ್ರಮ ಎಂದು ಕಂಪನಿ ಹೇಳಿದೆ.

ಏಪ್ರಿಲ್ 1ರಿಂದ ಅನ್ವಯವಾಗುವಂತೆ, ಕಂಪನಿಯಲ್ಲಿ ಕನಿಷ್ಠ 1 ವರ್ಷ ಕೆಲಸ ಮಾಡಿರುವ ಉದ್ಯೋಗಿಗಳು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗುತ್ತಾರೆ.

ADVERTISEMENT

ಅಲ್ಲದೆ, ಮಗುವಿನ ಜನನದ ಬಳಿಕ ಮೊದಲ ಮೂರು ವರ್ಷಗಳಲ್ಲಿ ಉದ್ಯೋಗಿಗಳು, ಬೇಕಾದ ಸಮಯದಲ್ಲಿ ಪಾಲನಾ ರಜೆ ಪಡೆದುಕೊಳ್ಳಬಹುದಾಗಿದೆ.

ಸ್ವೀಡನ್‌ನ ರಾಷ್ಟ್ರೀಯ ಪಾಲನಾ ರಜೆ ನೀತಿಗೆ ಅನುಸಾರ, ಈ ಯೋಜನೆಯನ್ನು ಕಂಪನಿ ಘೋಷಿಸಿದೆ.

ಎಲ್ಲ ಉದ್ಯೋಗಿಗಳಿಗೂ ಈ ಪ್ರಯೋಜನ ದೊರೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಇದನ್ನು ಬಳಸಿಕೊಳ್ಳುವಂತೆ ನಾವು ಉತ್ತೇಜನ ನೀಡಲಿದ್ದೇವೆ ಎಂದು ವೋಲ್ವೊ ಕಾರ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿರುವ ಹೆನ್ನಾ ಫೇಜರ್ ತಿಳಿಸಿದ್ದಾರೆ.

ವೋಲ್ವೊ ಕಾರ್ಸ್ ಕಂಪನಿಯಲ್ಲಿ ಶೇ 75 ಪುರುಷ ಉದ್ಯೋಗಿಗಳಿದ್ದಾರೆ. ಅಲ್ಲದೆ, 2019ರಿಂದ ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸಿದ್ದು, ಇದೀಗ ಎಲ್ಲ ಉದ್ಯೋಗಿಗಳಿಗೂ ವಿಸ್ತರಿಸಿರುವುದಾಗಿ ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.