ಬೆಂಗಳೂರು: ವೋಲ್ವೊ ಕಂಪನಿಯು ನಗರದ ಬಾಗಮನೆ ಟೆಕ್ ಪಾರ್ಕ್‌ನಲ್ಲಿ ತನ್ನ ‘ವೆಹಿಕಲ್ ಟೆಕ್‌ಲ್ಯಾಬ್’ ಸ್ಥಾಪನೆಗೆ ಗುರುವಾರ ಭೂಮಿಪೂಜೆ ನೆರವೇರಿಸಿದೆ. ಇದು ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ನೆರವಾಗಲಿದೆ.
‘ಕಂಪನಿಯ ಬೇರೆ ಬೇರೆ ತಂಡಗಳು ಒಂದೆಡೆ ಸೇರಿ, ಹೊಸ ಪರಿಕಲ್ಪನೆಗಳನ್ನು ಹಂಚಿಕೊಳ್ಳುವ, ಅವುಗಳನ್ನು ಅಭಿವೃದ್ಧಿಪಡಿಸುವ ಮತ್ತು ಉತ್ಪನ್ನ ಸಿದ್ಧಪಡಿಸುವ ವೇದಿಕೆಯನ್ನಾಗಿ ಈ ಟೆಕ್‌ಲ್ಯಾಬ್‌ಅನ್ನು ಬಳಸಿಕೊಳ್ಳುತ್ತೇವೆ’ ಎಂದು ವೋಲ್ವೊ ಗ್ರೂಪ್ ಟ್ರಕ್ಸ್ ಟೆಕ್ನಾಲಜಿಯ ಉಪಾಧ್ಯಕ್ಷ ಸಿ.ಆರ್. ವಿಶ್ವನಾಥ್ ಹೇಳಿದರು.
ವೆಹಿಕಲ್ ಟೆಕ್‌ಲ್ಯಾಬ್, ವೋಲ್ವೊ ಸಮೂಹದ ಪಾಲಿಗೆ ಸ್ವೀಡನ್ ಹೊರಗಡೆ ಆರಂಭವಾಗಲಿರುವ ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಲಿದೆ. ವೋಲ್ವೊ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.