ADVERTISEMENT

ಫ್ಲಿಪ್‌ಕಾರ್ಟ್‌ ಸಂಸ್ಥೆ ಸ್ವಾಧೀನ ಅಂತಿಮ: ವಾಲ್‌ಮಾರ್ಟ್‌

ಪಿಟಿಐ
Published 18 ಆಗಸ್ಟ್ 2018, 19:30 IST
Last Updated 18 ಆಗಸ್ಟ್ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ಫ್ಲಿಪ್‌ಕಾರ್ಟ್‌ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ 77ರಷ್ಟು ಷೇರುಗಳನ್ನು ಖರೀದಿಸಲಾಗಿದೆ ಎಂದು ವಾಲ್‌ಮಾರ್ಟ್‌ ಶನಿವಾರ ತಿಳಿಸಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಸದ್ಯ ಇರುವ ವ್ಯವಸ್ಥಾಪಕ ತಂಡವೇ ಮುಂದುವರಿಯಲಿದೆ. ಎರಡು ಕಂಪನಿಗಳು ತಮ್ಮದೇ ಆದ ಪ್ರತ್ಯೇಕ ಬ್ರ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸಲಿವೆ ಎಂದು ವಾಲ್‌ಮಾರ್ಟ್ ಹೇಳಿದೆ.

‘ನಮ್ಮ ಹೂಡಿಕೆಯಿಂದಭಾರತದಲ್ಲಿನ ಗ್ರಾಹಕರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಸರಕುಗಳನ್ನು ಪೂರೈಸಲು ಸಾಧ್ಯವಾಗಲಿದೆ. ಇದರ ಜತೆಗೆ ಹೊಸ ಕೌಶಲ ಇರುವ ಉದ್ಯೋಗಗಳ ಸೃಷ್ಟಿಯಾಗಲಿವೆ. ಪೂರೈಕೆದಾರರಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿವೆ’ ಎಂದು ವಾಲ್‌ಮಾರ್ಟ್‌ ಇಂಟರ್‌ನ್ಯಾಷನಲ್‌ನ ಅಧ್ಯಕ್ಷ ಜುಡಿಚ್‌ ಮೆಕೆನ್ನಿ ಹೇಳಿದ್ದಾರೆ.

ADVERTISEMENT

ಫ್ಲಿಪ್‌ಕಾರ್ಟ್‌ನೊಂದಿಗೆ ಕೆಲಸ ಮಾಡುತ್ತಾ ಭಾರತದ ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡು ಬೆಳೆಯಲು ಉತ್ಸುಕರಾಗಿದ್ದೇವೆ. ಭಾರತವು ಜಾಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಕರ್ಷಕ ಚಿಲ್ಲರೆ ಮಾರುಕಟ್ಟೆಯಾಗಿದೆ’ ಎಂದಿದ್ದಾರೆ.

‘ವಾಲ್‌ಮಾರ್ಟ್‌ ಜತೆಗೂಡಿ ಭಾರತದಲ್ಲಿ ಮುಂದಿನ ಹಂತದ ಚಿಲ್ಲರೆ ವಹಿವಾಟು ನಡೆಸುವ ವಿಶ್ವಾಸವಿದೆ ’ ಎಂದು ಫ್ಲಿಪ್‌ಕಾರ್ಟ್‌ ಸಹ ಸ್ಥಾಪಕ ಬಿನ್ನಿ ಬನ್ಸಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.