ನವದೆಹಲಿ: ಅಮೆರಿಕದ 12 ಕೋಟಿಗೂ ಅಧಿಕ ಖರೀದಿದಾರರಿಗೆ ಸೇವೆ ಒದಗಿಸುವ ಮಾರಾಟಗಾರರ ಸಮುದಾಯ ‘ವಾಲ್‌ಮಾರ್ಟ್ ಮಾರ್ಕೆಟ್‌ಪ್ಲೇಸ್’ ಸೇರುವಂತೆ ಭಾರತದ ಆಯ್ದ ಮಾರಾಟಗಾರರಿಗೆ ವಾಲ್‌ಮಾರ್ಟ್ ಕಂಪನಿಯು ಆಹ್ವಾನ ನೀಡಿದೆ.
ವಾಲ್‌ಮಾರ್ಟ್ ಅಂತಾರಾಷ್ಟ್ರೀಯ ಮಾರಾಟಗಾರರನ್ನು ಆಕರ್ಷಿಸಲು ಮತ್ತು ಮಾರುಕಟ್ಟೆ ಪ್ರದೇಶದ ಉತ್ಪನ್ನಗಳನ್ನು ವಿಸ್ತರಿಸಲು ಭಾರತದಲ್ಲಿ ಹೊಸ ಮಾರಾಟಗಾರರನ್ನು ಹುಡುಕುತ್ತಿದೆ. ಇದರಲ್ಲಿ ಭಾರತದ ಆಯ್ದ ಮಾರಾಟಗಾರರು ವಾಲ್‌ಮಾರ್ಟ್ ಪೂರೈಸುವ ಸೇವೆಗಳ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ.
ಭಾರತೀಯ ರಫ್ತುದಾರರೊಂದಿಗಿನ ಪಾಲುದಾರಿಕೆಯ ಮೂಲಕ, ವಾಲ್‌ಮಾರ್ಟ್ ಈಗ ಭಾರತೀಯ ವ್ಯಾಪಾರಿಗಳಿಗೆ ರಫ್ತು ಮಾಡುವ ಅವಕಾಶ ನೀಡುತ್ತಿದೆ. ಇದು ನಮ್ಮ ಜಾಗತಿಕ ಪೂರೈಕೆ ಸರಪಳಿ ಮೂಲಸೌಕರ್ಯವನ್ನು ಹೆಚ್ಚಿಸಲು ಎಂದು ವಾಲ್‌ಮಾರ್ಟ್ ಉಪಾಧ್ಯಕ್ಷ ಮಿಚೆಲ್ ಮಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.