ADVERTISEMENT

IT ದೈತ್ಯ Wipro ಕಂಪನಿಗೆ ಬೆಂಗಳೂರು ಐಐಎಸ್ಸಿ ಪ್ರತಿಭೆ ಶ್ರೀನಿ ಪಲ್ಲಿಯಾ ಹೊಸ CEO

ಬೆಂಗಳೂರು ಮೂಲದ ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿ ವಿಪ್ರೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2024, 10:10 IST
Last Updated 7 ಏಪ್ರಿಲ್ 2024, 10:10 IST
<div class="paragraphs"><p>ಶ್ರೀನಿ ಪಲ್ಲಿಯಾ</p></div>

ಶ್ರೀನಿ ಪಲ್ಲಿಯಾ

   

ವಿಪ್ರೊ

ಬೆಂಗಳೂರು: ಬೆಂಗಳೂರು ಮೂಲದ ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿ ವಿಪ್ರೊದ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಶ್ರೀನಿವಾಸ್‌ ಅಲಿಯಾಸ್ ಶ್ರೀನಿ ಪಲ್ಲಿಯಾ ನೇಮಕವಾಗಿದ್ದಾರೆ.

ADVERTISEMENT

ಆಡಳಿತ ಮಂಡಳಿಯ ಸಭೆಯು ಶ್ರೀನಿವಾಸ್‌ ಅವರ ನೇಮಕಕ್ಕೆ ಒಪ್ಪಿಗೆ ನೀಡಿದೆ. ಇಂದಿನಿಂದಲೇ ಅಂದರೆ ಏಪ್ರಿಲ್ 7ರಿಂದಲೇ ಅವರು ಹೊಸ ಸಿಇಒ ಹಾಗೂ ಎಂ.ಡಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

1992ರಲ್ಲಿ ವಿಪ್ರೊ ಕಂಪನಿ ಸೇರಿರುವ ಶ್ರೀನಿ ಪಲ್ಲಿಯಾ ಅವರು ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಕಂಪನಿ ಬೆಳವಣಿಗೆಗೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಅವರು ಅಮೆರಿಕಾಸ್ 1 (ವಿಪ್ರೊ ಒಡೆತನದ ಕಂಪನಿ) ಎಂಬ ಕಂಪನಿಗೂ ಈ ಮೊದಲು ಸಿಇಒ ಆಗಿದ್ದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಎಂಬಿಎ ಮಾಡಿರುವ ಶ್ರೀನಿ ಅವರು ಹಾರ್ವರ್ಡ್ ಬಿಜಿನಸ್ ಸ್ಕೂಲ್‌ನಲ್ಲಿಯೂ ಅಧ್ಯಯನ ಮಾಡಿದ್ದಾರೆ. ಸದ್ಯ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ.

ಮುಂದಿನ ಐದು ವರ್ಷಗಳ ಕಾಲ ಶ್ರೀನಿ ಅವರು ವಿಪ್ರೊ ಸಿಇಒ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹೊಸ ಸಿಇಒ ಶ್ರೀನಿ ಅವರಿಗೆ ವಿಪ್ರೊ ಅಧ್ಯಕ್ಷ ರಿಷದ್ ಪ್ರೇಮ್‌ಜಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಕಳೆದ ಏಪ್ರಿಲ್ 5ರಂದು ಥಿಯರಿ ಡೆಲಾಪೋರ್ಟ್ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.