ಬೆಂಗಳೂರು: ಐ.ಟಿ. ಸೇವೆಗಳ ರಫ್ತು ಕಂಪನಿ ವಿಪ್ರೊ ಲಿಮಿಟೆಡ್, ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ₹2,870 ಕೋಟಿ ನಿವ್ವಳ ಲಾಭ ಗಳಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹2,563 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದಲ್ಲಿ ಶೇ 12ರಷ್ಟು ಹೆಚ್ಚಳ ಕಂಡುಬಂದಿದೆ.
ಕಂಪನಿಯ ಕಾರ್ಯಾಚರಣಾ ವರಮಾನ ಶೇ 6ರಷ್ಟು ಏರಿಕೆ ಕಂಡು ₹22,831 ಕೋಟಿಗೆ ತಲುಪಿದೆ.
ದೊಡ್ಡ ಮೊತ್ತದ ಒಪ್ಪಂದಗಳು, ಹೊಸ ಕಂಪನಿಗಳಿಂದ ಸೇವೆಗಳಿಗೆ ಬೇಡಿಕೆ ಹಾಗೂ ಉತ್ತಮ ಗಳಿಕೆಯ ಕಾರಣಗಳಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಬಲಿಷ್ಠ ಫಲಿತಾಂಶ ಸಾಧ್ಯವಾಗಿದೆ ಎಂದು ಕಂಪನಿಯ ಸಿಇಒ ಥಿಯರಿ ಡೆಲಾಪೋರ್ಟ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.