ಬೆಂಗಳೂರು: ವಿಪ್ರೊ ಕಂಪನಿಯ ಅಧ್ಯಕ್ಷ ರಿಷದ್ ಪ್ರೇಮ್‌ಜಿ ಅವರು ತಮ್ಮ ಕಂಪನಿಯ ನೌಕರರು ಕೆಲವು ಸಮಯದವರೆಗೆ ಕಚೇರಿಯಿಂದ ಕೆಲಸ ಮಾಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದರು.
ನಾಸ್ಕಾಂ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೋವಿಡ್ ನಂತರದ ಸಂದರ್ಭದಲ್ಲಿ ಸಂಸ್ಥೆಯಲ್ಲಿ ತಾವೆಲ್ಲ ಒಂದಾಗಿದ್ದೇವೆ ಭಾವವನ್ನು ಮೂಡಿಸುವುದು ಸವಾಲಾಗಿತ್ತು ಎಂದು ನೆನಪಿಸಿಕೊಂಡರು.
‘ಹೊಸದಾಗಿ ನೇಮಕಗೊಂಡ ಹಲವರು ಕಂಪನಿಯಲ್ಲಿ ಕೆಲವರ ಜೊತೆ ಮಾತ್ರ ಒಡನಾಟ ಹೊಂದಿರುತ್ತಾರೆ’ ಎಂದು ಅವರು ಹೇಳಿದರು.
ನೌಕರರನ್ನು ಮತ್ತೆ ಕಚೇರಿಗೆ ಕರೆಸಲು ಯತ್ನಿಸುವ ಜೊತೆಯಲ್ಲೇ ಕಂಪನಿಯು ಒಂದಿಷ್ಟು ಹೊಂದಾಣಿಕೆಗಳನ್ನೂ ಮಾಡಿಕೊಳ್ಳಲಿದೆ ಎಂದು ಪ್ರೇಮ್‌ಜಿ ಹೇಳಿದರು.
‘ನಾವು ಒಂದಿಷ್ಟು ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬೇಕು. ಹೊಸ ಸಂದರ್ಭಕ್ಕೆ ನಾವು ಕೂಡ ಹೊಂದಿಕೊಳ್ಳಬೇಕು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.