ನವದೆಹಲಿ: ವಿತ್ತೀಯ ಒಳಗೊಳ್ಳುವಿಕೆಗಾಗಿ ಆಧಾರ್ ಮತ್ತು ಯುಪಿಐ ಸೇರಿದಂತೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (ಡಿಪಿಐ) ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿರುವ ಭಾರತದ ಕ್ರಮವನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ.
ಡಿಪಿಐ ಪ್ರಭಾವವು ವಿತ್ತೀಯ ಒಳಗೊಳ್ಳುವಿಕೆಯಷ್ಟೇ ಅಲ್ಲದೆ, ಆರೋಗ್ಯ, ಶಿಕ್ಷಣ ಮತ್ತು ಸುಸ್ಥಿರತೆಯನ್ನೂ ಬೆಂಬಲಿಸುತ್ತದೆ ಎಂದು ವಿಶ್ವಬ್ಯಾಂಕ್ ಸಿದ್ಧಪಡಿಸಿರುವ ವರದಿಯು ಹೇಳಿದೆ.
ಡಿಪಿಐ ಮೂಲಕ ಕೇವಲ ಆರು ವರ್ಷಗಳಲ್ಲಿ ಭಾರತವು ಶೇ 80ರಷ್ಟು ವಿತ್ತೀಯ ಒಳಗೊಳ್ಳುವಿಕೆ ದರವನ್ನು ಸಾಧಿಸಿದೆ. ಡಿಪಿಐ ಇಲ್ಲದೇ ಇದ್ದಿದ್ದರೆ ಈ ಸಾಧನೆ ಮಾಡಲು ಸುಮಾರು ಐದು ದಶಕಗಳೇ ಬೇಕಾಗುತ್ತಿತ್ತು ಎಂದು ಹೇಳಿದೆ.
ಭಾರತದ ಡಿಜಿಟಲ್ ಐಡಿ ವ್ಯವಸ್ಥೆ ಆಧಾರ್, ಡಿಜಿಟಲ್ ಪಾವತಿ ವ್ಯವಸ್ಥೆ ಯುಪಿಐ, ದತ್ತಾಂಶ ಸಂಗ್ರಹ ಮತ್ತು ವಿನಿಮಯ ವೇದಿಕೆ ಡಿಜಿಲಾಕರ್ ಡಿಪಿಐಗೆ ವಿಶೇಷ ಉದಾಹರಣೆಗಳಾಗಿವೆ. ಹಲವು ದೇಶಗಳಲ್ಲಿ ವಿತ್ತೀಯ ಒಳಗೊಳ್ಳುವಿಕೆಗೆ ಇವೆಲ್ಲವೂ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.