ADVERTISEMENT

ಭಾರತದ ಜಿಡಿಪಿ ಶೇ 7.5ರಷ್ಟು ಪ್ರಗತಿ: ವಿಶ್ವಬ್ಯಾಂಕ್‌

ಪಿಟಿಐ
Published 3 ಏಪ್ರಿಲ್ 2024, 15:04 IST
Last Updated 3 ಏಪ್ರಿಲ್ 2024, 15:04 IST
<div class="paragraphs"><p> ವಿಶ್ವ ಬ್ಯಾಂಕ್</p></div>

ವಿಶ್ವ ಬ್ಯಾಂಕ್

   

ವಾಷಿಂಗ್ಟನ್‌: ಭಾರತದ ಆರ್ಥಿಕತೆಯು 2023–24ನೇ ಆರ್ಥಿಕ ವರ್ಷದಲ್ಲಿ ಶೇ 7.5ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವ ಬ್ಯಾಂಕ್‌ ತಿಳಿಸಿದೆ.

ಈ ಮೊದಲು ಜಿಡಿಪಿಯು ಶೇ 6.3ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿತ್ತು. ಬುಧವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಇದನ್ನು ಪರಿಷ್ಕರಿಸಲಾಗಿದೆ. 

ADVERTISEMENT

ಭಾರತದಲ್ಲಿ ಹೂಡಿಕೆ ಹಾಗೂ ಉಪಭೋಗದ ಹೆಚ್ಚಳವಾಗಿದೆ. ಇದು ಆರ್ಥಿಕತೆಯ ವಿಸ್ತರಣೆಗೆ ಸಹಕಾರಿಯಾಗಿದೆ. ಅಲ್ಲದೆ, ಸೇವಾ ಮತ್ತು ಕೈಗಾರಿಕಾ ವಲಯದ ಬೆಳವಣಿಗೆಯು ಈ ಸಾಧನೆಗೆ ನೆರವಾಗಲಿವೆ ಎಂದು ತಿಳಿಸಿದೆ.

ಭಾರತದ ಆರ್ಥಿಕತೆಯು ನಿರೀಕ್ಷೆಗೂ ಮೀರಿ ಬೆಳವಣಿಗೆ ದಾಖಲಿಸಲಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾದ ಆರ್ಥಿಕತೆಯು ಚೇತರಿಕೆ ಹಾದಿಯಲ್ಲಿವೆ. ಹಾಗಾಗಿ, ದಕ್ಷಿಣ ಏಷ್ಯಾದ ಜಿಡಿಪಿ ಬೆಳವಣಿಗೆಯು ಶೇ 6.0ರಷ್ಟು ದಾಖಲಾಗಿದೆ ಎಂದು ತಿಳಿದಿದೆ.

ಅಲ್ಲದೇ, ಮುಂದಿನ ಎರಡು ವರ್ಷಗಳಲ್ಲಿ ದಕ್ಷಿಣ ಏಷ್ಯಾ ಭಾಗದ ಆರ್ಥಿಕತೆಯು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣಲಿದೆ. 2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 6.1ರಷ್ಟು ಪ್ರಗತಿ ಕಾಣಲಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.