ADVERTISEMENT

ತೆಲಂಗಾಣ ಸರ್ಕಾರದೊಂದಿಗೆ ಅದಾನಿ ಸಮೂಹದ ಮೆಗಾ ಒಪ್ಪಂದ: ₹12 ಸಾವಿರ ಕೋಟಿ ಹೂಡಿಕೆ!

ಏಜೆನ್ಸೀಸ್
Published 17 ಜನವರಿ 2024, 10:48 IST
Last Updated 17 ಜನವರಿ 2024, 10:48 IST
<div class="paragraphs"><p>ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ&nbsp;ಸಹಿ ಹಾಕಿದ ಒಡಂಬಡಿಕೆಗಳನ್ನು&nbsp;ಗೌತಮ್ ಅದಾನಿ ಹಾಗೂ ರೇವಂತ್ ರೆಡ್ಡಿ ಅವರು  ಪ್ರದರ್ಶಿಸಿದರು</p></div>

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಸಹಿ ಹಾಕಿದ ಒಡಂಬಡಿಕೆಗಳನ್ನು ಗೌತಮ್ ಅದಾನಿ ಹಾಗೂ ರೇವಂತ್ ರೆಡ್ಡಿ ಅವರು ಪ್ರದರ್ಶಿಸಿದರು

   

@IndianTechGuide ಎಕ್ಸ್‌ ಖಾತೆ ಚಿತ್ರ

ದಾವೋಸ್ (ಸ್ವಿಟ್ಜರ್ಲೆಂಡ್‌): ವಿಶ್ವ ಆರ್ಥಿಕ ವೇದಿಕೆ 2024 ರಲ್ಲಿ ತೆಲಂಗಾಣ ಸರ್ಕಾರದೊಂದಿಗೆ ಅದಾನಿ ಸಮೂಹವು ಒಟ್ಟು ₹12,400 ಕೋಟಿ ಮೊತ್ತದ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿದೆ.

ADVERTISEMENT

ಈ ಕುರಿತು ಅದಾನಿ ಸಮೂಹವು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಸಮ್ಮುಖದಲ್ಲಿ ಒಡಂಬಡಿಕೆ ನಡೆದಿದೆ. ಇದರಲ್ಲಿ ರಾಜ್ಯದಲ್ಲಿ ಹಸಿರು ಇಂಧನ, ಸುಸ್ಥಿರ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ’ ಎಂದೆನ್ನಲಾಗಿದೆ.

‘ಈ ಒಡಂಬಡಿಕೆ ಭಾಗವಾಗಿ ₹ 5 ಸಾವಿರ ಕೋಟಿ ವೆಚ್ಚದಲ್ಲಿ 100 ಮೆಗಾ ವ್ಯಾಟ್‌ ಸಾಮರ್ಥ್ಯದ ಮಾಹಿತಿ ಕೇಂದ್ರವನ್ನು ಮುಂದಿನ 5ರಿಂದ 7 ವರ್ಷಗಳಲ್ಲಿ ಸ್ಥಾಪಿಸಲಿದೆ. ಇದರಲ್ಲಿ ಸ್ಥಳೀಯ ಮಟ್ಟದ ಮಧ್ಯಮ, ಸಣ್ಣ, ಅತಿ ಸಣ್ಣ ಕೈಗಾರಿಕೆಗಳೊಂದಿಗೆ ಹಾಗೂ ಸ್ಟಾರ್ಟ್‌ಅಪ್‌ಗಳೊಂದಿಗೆ ಕೆಲಸ ಮಾಡಲಿದೆ. ಇದರಿಂದ ಸುಮಾರು 600 ಜನರಿಗೆ ನೇರ ನೌಕರಿ ಸಿಗಲಿದೆ’ ಎಂದಿದೆ.

‘ಇಂಧನ ಕ್ಷೇತ್ರದಲ್ಲಿ ಅದಾನಿ ಎನರ್ಜಿಯು ತೆಲಂಗಾಣದಲ್ಲಿ ₹ 5 ಸಾವಿರ ಕೋಟಿ ಹೂಡಿಕೆ ಮಾಡಲಿದೆ. ಅಂಬುಜಾ ಸಿಮೆಂಟ್‌ ತಯಾರಿಕೆಗೆ ₹ 1400 ಕೋಟಿ ಹೂಡಿಕೆ ಮಾಡಲಿದ್ದು, ವರ್ಷಕ್ಕೆ 60 ಲಕ್ಷ ಟನ್ ಸಿಮೆಂಟ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಇದು ಸುಮಾರು 4 ಸಾವಿರ ಉದ್ಯೋಗ ಸೃಷ್ಟಿಸಲಿದೆ ಎಂದು ಕಂಪನಿ ಹೇಳಿದೆ.

ಇದರೊಂದಿಗೆ ಡ್ರೋನ್ ಮತ್ತು ಕ್ಷಿಪಣಿ ವ್ಯವಸ್ಥೆಯ ಸಂಶೋಧನೆ, ಅಭಿವೃದ್ಧಿ ಹಾಗೂ ವಿನ್ಯಾಸ ಘಟಕವನ್ನು ₹1 ಸಾವಿರ ಕೋಟಿ ವೆಚ್ಚದಲ್ಲಿ ಸ್ಥಾಪಿಸುವ ಪ್ರಸ್ತಾವನೆಯೂ ಸೇರಿದಂತೆ ಇನ್ನೂ ಹಲವಾರು ಒಪ್ಪಂದಗಳು ಒಡಂಬಡಿಕೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.