ನವದೆಹಲಿ: ಆಹಾರ ಪದಾರ್ಥಗಳ ಬೆಲೆಯಲ್ಲಿನ ಹೆಚ್ಚಳದಿಂದಾಗಿಸಗಟು ಹಣದುಬ್ಬರವು ನವೆಂಬರ್‌ನಲ್ಲಿ ಶೇ 0.58ಕ್ಕೆ ಏರಿಕೆಯಾಗಿದೆ.
ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರುವಅಕ್ಟೋಬರ್‌ನಲ್ಲಿ ಶೇ 0.16ರಷ್ಟಿತ್ತು. 2018ರ ನವೆಂಬರ್‌ನಲ್ಲಿ ಶೇ 4.47ರಷ್ಟಿತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಈ ಮಾಹಿತಿ ನೀಡಿದೆ.
ಆಹಾರ ಪದಾರ್ಥಗಳ ಹಣದುಬ್ಬರ ಶೇ 9.80 ರಿಂದ ಶೇ 11ಕ್ಕೆ ಏರಿಕೆಯಾಗಿದೆ. ಅದರಲ್ಲಿಯೂ ಮುಖ್ಯವಾಗಿ ಈರುಳ್ಳಿ ಶೇ 172ಕ್ಕೂ ಅಧಿಕ ಏರಿಕೆ ಕಂಡಿದೆ.
ಕೆಲವು ಮಾರುಕಟ್ಟೆಗಳಲ್ಲಿ ಈರುಳ್ಳಿ ಧಾರಣೆ ಕೆ.ಜಿಗೆ ₹ 150 ರಿಂದ ₹ 200ರಂತೆ ಮಾರಾಟವಾಗಿತ್ತು. ಸದ್ಯ ಕೆ.ಜಿಗೆ ₹ 100ರ ಆಸುಪಾಸಿನಲ್ಲಿದೆ. ಆಮದು ಮತ್ತು ಹೊಸ ಬೆಳೆ ಮಾರುಕಟ್ಟೆಗೆ ಬರಲಿದ್ದು, ಇದರಿಂದ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಆಗಲಿದೆ ಎಂದು ಸರ್ಕಾರ ತಿಳಿಸಿದೆ.
ಆಹಾರೇತರ ಉತ್ಪನ್ನಗಳ ಬೆಲೆ ಶೇ 2.35 ರಿಂದ ಶೇ 1.93ಕ್ಕೆ ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.