ಬೆಂಗಳೂರು: ದೇಶದ ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳ ಪೈಕಿ ಒಂದಾಗಿರುವ ಯೆಸ್ ಬ್ಯಾಂಕ್ ಎರಡು ಹೂಡಿಕೆ ಸಂಸ್ಥೆಗಳಿಂದ ಒಟ್ಟು ₹ 8,900 ಕೋಟಿ ಬಂಡವಾಳ ಸಂಗ್ರಹಿಸಲಿದೆ. ಕಾರ್ಲೈಲ್ ಮತ್ತು ಅಡ್ವೆಂಟ್ ಇಂಟರ್‌ನ್ಯಾಷನಲ್ ಸಂಸ್ಥೆಗಳು ಯೆಸ್ ಬ್ಯಾಂಕ್‌ನ ಒಟ್ಟು ಶೇಕಡ 10ರಷ್ಟು ಷೇರುಗಳನ್ನು ಖರೀದಿಸಲಿದೆ.
ಈ ಷೇರು ಖರೀದಿಗೆ ಯೆಸ್ ಬ್ಯಾಂಕ್ ಷೇರುದಾರರ ಅನುಮೋದನೆ ಸಿಗಬೇಕಿದೆ. ಬಂಡವಾಳ ಸಂಗ್ರಹದಿಂದಾಗಿ ಬ್ಯಾಂಕ್‌ನ ಬಂಡವಾಳ ಲಭ್ಯತೆಯು ಹೆಚ್ಚಾಗಲಿದೆ. ಮಧ್ಯಮಾವಧಿ ಹಾಗೂ ದೀರ್ಘಾವಧಿಯಲ್ಲಿ ಸುಸ್ಥಿರ ಅಭಿವೃದ್ಧಿಗೆ ನೆರವಾಗಲಿದೆ ಎಂದು ಯೆಸ್ ಬ್ಯಾಂಕ್ ಷೇರುಪೇಟೆಗೆ ಶುಕ್ರವಾರ ಮಾಹಿತಿ ನೀಡಿದೆ.
ಈ ಹೂಡಿಕೆಗೆ ಷೇರುದಾರರ ಒಪ್ಪಿಗೆ ದೊರೆತಲ್ಲಿ, ದೇಶದ ಖಾಸಗಿ ಬ್ಯಾಂಕೊಂದು ಮಾಡಿದ ಅತಿದೊಡ್ಡ ಖಾಸಗಿ ಬಂಡವಾಳ ಸಂಗ್ರಹಗಳಲ್ಲಿ ಇದೂ ಒಂದಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.