ADVERTISEMENT

ಷೇರು ಸೂಚ್ಯಂಕಗಳು ಕುಸಿತ

ಪಿಟಿಐ
Published 21 ಫೆಬ್ರುವರಿ 2024, 16:38 IST
Last Updated 21 ಫೆಬ್ರುವರಿ 2024, 16:38 IST
   

ನವದೆಹಲಿ: ಸತತ ಆರು ದಿನಗಳಿಂದ ಏರಿಕೆ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಬುಧವಾರ ಇಳಿಕೆ ಕಂಡಿವೆ. 

ಹೂಡಿಕೆದಾರರು ಲಾಭ ಮಾಡಿಕೊಳ್ಳುವುದರತ್ತ ಗಮನ ಹರಿಸಿದ್ದರಿಂದ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 434 ಅಂಶ ಕುಸಿದು 72,623ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 141 ಅಂಶ ಇಳಿಕೆಯಾಗಿ 22,055ಕ್ಕೆ ಕೊನೆಗೊಂಡಿತು.

ಜೀ ಷೇರು ಕುಸಿತ: ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಜಿಇಇಎಲ್‌) ಷೇರಿನ ಮೌಲ್ಯ ಶೇ 15ರಷ್ಟು ಇಳಿಕೆಯಾಗಿದೆ.

ADVERTISEMENT

ಕಂಪನಿಯ ವಹಿವಾಟಿನಲ್ಲಿ ಅವ್ಯವಹಾರ ನಡೆದಿರುವುದರನ್ನು ಸೆಬಿ ಪತ್ತೆ ಹಚ್ಚಿದೆ ಎಂಬ ಸುದ್ದಿಯು ಷೇರುಗಳ ಕುಸಿತಕ್ಕೆ ಕಾರಣವಾಗಿದೆ. ಆದರೆ, ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಕಂಪನಿಯ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.

ಪೇಟಿಎಂ ಷೇರು ಏರಿಕೆ: ಪೇಟಿಎಂ ಷೇರುಗಳು ಸತತ ನಾಲ್ಕನೇ ದಿನವೂ ಶೇ 5ರಷ್ಟು ಏರಿಕೆ ಆಗಿವೆ. ಬಿಎಸ್‌ಇ ಮತ್ತು ಎನ್‌ಎಸ್‌ಇ ಷೇರಿನ ಬೆಲೆ ಕ್ರಮವಾಗಿ ₹395.25 ಮತ್ತು ₹395.05 ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.