ನವದೆಹಲಿ: ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ಜಿಇಇಎಲ್), ವೆಚ್ಚ ಕಡಿತದ ಭಾಗವಾಗಿ ಶೇ 15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
ಕಂಪನಿಯ ಬ್ರಾಡ್‌ಕಾಸ್ಟ್, ಡಿಜಿಟಲ್, ಸಿನಿಮಾ ಹಾಗೂ ಸಂಗೀತ ವಿಭಾಗವನ್ನು ಗ್ರಾಹಕರ ಹತ್ತಿರ ಮತ್ತಷ್ಟು ಕೊಂಡೊಯ್ಯಬೇಕಿದೆ. ಹಾಗಾಗಿ, ತಂಡದ ದಕ್ಷತೆ ಹೆಚ್ಚಿಸುವ ಮೂಲಕ ಕಂಪನಿಯ ಗುರಿ ಸಾಧನೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪುನಿತ್ ಗೋಯೆಂಕಾ ಅವರು, ಷೇರುಪೇಟೆಗೆ ಮಾಹಿತಿ ನೀಡಿದ್ದಾರೆ.
2022–23ನೇ ಸಾಲಿನ ವಾರ್ಷಿಕ ವರದಿ ಅನ್ವಯ ಕಂಪನಿಯಲ್ಲಿ 3,437 ಕಾಯಂ ಉದ್ಯೋಗಿಗಳು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.