ADVERTISEMENT

Zomato ಆಹಾರ ಇನ್ನಷ್ಟು ದುಬಾರಿ: ಪ್ರತಿ ಆರ್ಡರ್‌ಗೆ ₹10 ಶುಲ್ಕ ಹೆಚ್ಚಳ!

ಪಿಟಿಐ
Published 24 ಅಕ್ಟೋಬರ್ 2024, 9:07 IST
Last Updated 24 ಅಕ್ಟೋಬರ್ 2024, 9:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆನ್‌ಲೈನ್‌ನಲ್ಲಿ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಕಂಪನಿಯು ತನ್ನ ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್‌ಫಾರ್ಮ್‌ ಫೀ) ₹10 ಹೆಚ್ಚಳ ಮಾಡಿದೆ. 

ಹಬ್ಬಗಳ ಸಂದರ್ಭದಲ್ಲಿ ಆರ್ಡರ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಶುಲ್ಕವನ್ನು ಏರಿಕೆ ಮಾಡಲಾಗಿದ್ದು, ಸದ್ಯ ದೆಹಲಿಯಲ್ಲಿ ₹10 ಹೆಚ್ಚು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಬೇರೆ ಬೇರೆ ನಗರದಲ್ಲಿ ಶುಲ್ಕದ ದರ ಬದಲಾಗಲಿದೆ ಎಂದಿರುವ ಕಂಪನಿ ಯಾವ ನಗರದಲ್ಲಿ ಎಷ್ಟು ಶುಲ್ಕ ಇರಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.

ADVERTISEMENT

ಕಳೆದ ಏಪ್ರಿಲ್‌ ತಿಂಗಳಿನಲ್ಲಿಯೂ ಜೊಮಾಟೊ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು ₹4 ಏರಿಕೆ ಮಾಡಿತ್ತು. ಈಗ ಮತ್ತೆ ದರ ಏರಿಸಿ ಪ್ರಕಟಣೆ ಹೊರಡಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.