ADVERTISEMENT

ಜೊಮಾಟೊ, ಸ್ವಿಗ್ಗಿ ಆರ್ಡರ್‌ ಶುಲ್ಕ ಏರಿಕೆ

ಪಿಟಿಐ
Published 24 ಅಕ್ಟೋಬರ್ 2024, 13:54 IST
Last Updated 24 ಅಕ್ಟೋಬರ್ 2024, 13:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆನ್‌ಲೈನ್‌ ಮೂಲಕ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಮತ್ತು ಸ್ವಿಗ್ಗಿ ಕಂಪನಿಯು ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್‌ಫಾರ್ಮ್‌ ಫೀ) ಏರಿಕೆ ಮಾಡಿವೆ.

ಈ ಮೊದಲು ದೆಹಲಿಯಲ್ಲಿ ಪ್ರತಿ ಆರ್ಡರ್‌ಗೆ ₹6 ಶುಲ್ಕ ವಿಧಿಸಲಾಗುತ್ತಿತ್ತು. ಸದ್ಯ ಹಬ್ಬದ ಋತುವಿನ ಮಧ್ಯದಲ್ಲಿ ಇದನ್ನು ₹10ಕ್ಕೆ ಹೆಚ್ಚಿಸಿವೆ. 

ಹಬ್ಬದ ಋತುವಿನಲ್ಲಿ ಆಹಾರ ವಿತರಣೆಗೆ ವಿಪರೀತ ಬೇಡಿಕೆ ಹೆಚ್ಚಿದೆ. ಶುಲ್ಕ ಏರಿಕೆಯು ನಗರದಿಂದ ನಗರಕ್ಕೆ ವ್ಯತ್ಯಾಸ ಇರುತ್ತದೆ. ಇದು ವಹಿವಾಟಿನ ಭಾಗವಾಗಿದ್ದು, ಕಾಲಕಾಲಕ್ಕೆ ಏರಿಕೆ ಮಾಡಲಾಗುತ್ತಿದೆ ಎಂದು ಜೊಮಾಟೊ ಕಂಪನಿ ತಿಳಿಸಿದೆ. 

ADVERTISEMENT

ಸ್ವಿಗ್ಗಿ ಕಂಪನಿಯು ಜೂನ್‌ನಲ್ಲಿ ₹5 ಇದ್ದ ಆರ್ಡರ್‌ ಶುಲ್ಕವನ್ನು ₹6ಕ್ಕೆ ಹೆಚ್ಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.