ADVERTISEMENT

ಜೊಮಾಟೊದಿಂದ ಪೇಟಿಎಂನ ಮನರಂಜನಾ ವಿಭಾಗದ ಸ್ವಾಧೀನ

ಪಿಟಿಐ
Published 21 ಆಗಸ್ಟ್ 2024, 17:42 IST
Last Updated 21 ಆಗಸ್ಟ್ 2024, 17:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆನ್‌ಲೈನ್‌ನಲ್ಲಿ ಆಹಾರ ಪದಾರ್ಥ ವಿತರಿಸುವ ಕಂಪನಿಯಾದ ಜೊಮಾಟೊ, ಪೇಟಿಎಂನ ಮನರಂಜನಾ ಟಿಕೆಟ್‌ ವಿತರಣಾ ವ್ಯವಹಾರ ವಿಭಾಗವನ್ನು ₹2,048 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. 

ಇದರಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪೇಟಿಎಂಗೆ ವರದಾನವಾಗಲಿದೆ. ಅಲ್ಲದೆ, ಕೋರ್‌ ಬ್ಯಾಕಿಂಗ್‌ ಮತ್ತು ಹಣಕಾಸು ಸೇವೆಯನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪೇಟಿಎಂನ ಈ ವಿಭಾಗದಲ್ಲಿ ಸಿನಿಮಾ, ಕ್ರೀಡೆಗಳು ಮತ್ತು ವಿವಿಧ ಕಾರ್ಯಕ್ರಮಗಳಿಗೆ ಟಿಕೆಟ್‌ ಖರೀದಿಸುವ ವ್ಯವಸ್ಥೆಯಿದೆ. 

ADVERTISEMENT

ಈ ಸ್ವಾಧೀನ ಪ್ರಕ್ರಿಯೆಯ ಒಪ್ಪಂದಕ್ಕೆ ಜೊಮಾಟೊ ಮತ್ತು ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯೂನಿಕೇಷನ್‌ ಲಿಮಿಟೆಡ್‌ನ ಆಡಳಿತ ಮಂಡಳಿಗಳು ಅನುಮೋದನೆ ನೀಡಿವೆ. 

ಜೊಮಾಟೊ ಕಂಪನಿಯು ಈ ಹೊಸ ವ್ಯವಹಾರವನ್ನು ‘ಡಿಸ್ಟಿಕ್ಟ್‌’ ಹೆಸರಿನ ಆ್ಯಪ್‌ ಮೂಲಕ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.