10 ನಿಮಿಷಗಳಲ್ಲಿ ಆಹಾರ ಡೆಲಿವರಿ ಮಾಡುವ ಹೊಸ ಸೇವೆಯನ್ನು ಜೊಮ್ಯಾಟೊ ಶೀಘ್ರದಲ್ಲಿ ಪರಿಚಯಿಸುತ್ತಿದೆ ಎಂದು ಕಂಪನಿಯ ಸ್ಥಾಪಕ ದೀಪಿಂದರ್ ಗೋಯಲ್ ತಿಳಿಸಿದ್ದಾರೆ.
ಹೆಚ್ಚಿನ ಬೇಡಿಕೆ ಇರುವ ಪ್ರದೇಶಗಳಲ್ಲಿ, ಗರಿಷ್ಠ ಸಂಖ್ಯೆಯ ಡೆಲಿವರಿ ಏಜೆಂಟ್‌ಗಳ ಮೂಲಕ ನಿಗದಿತ ಸಮಯದಲ್ಲಿ ಆಹಾರ ಡೆಲಿವರಿ ಸೇವೆ ನೀಡಲಾಗುತ್ತದೆ. ಆದರೆ ಅದಕ್ಕಾಗಿ, ಡೆಲಿವರಿ ಮಾಡುವವರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಅವರು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಜನರು ಕಡಿಮೆ ಸಮಯದಲ್ಲಿ ಸಿದ್ಧ ಆಹಾರ ಒದಗಿಸಲು ಹೆಚ್ಚಿನ ಬೇಡಿಕೆ ಇಡುತ್ತಿದ್ದಾರೆ. ಅವರು ಆಹಾರಕ್ಕಾಗಿ ಅಧಿಕ ಸಮಯ ಕಾಯುವುದಿಲ್ಲ, ಅಲ್ಲದೆ, ಕಡಿಮೆ ಸಮಯದಲ್ಲಿ ಸಿದ್ಧ ಆಹಾರ ಒದಗಿಸುವ ರೆಸ್ಟೋರೆಂಟ್‌ಗಾಗಿ ಜೊಮ್ಯಾಟೊ ಆ್ಯಪ್‌ನಲ್ಲಿ ಹೆಚ್ಚಿನ ಗ್ರಾಹಕರು ಹುಡುಕಾಟ ನಡೆಸುತ್ತಾರೆ. ಆದ್ದರಿಂದ, ಅಂತಹ ಗ್ರಾಹಕರ ಅಗತ್ಯತೆ ಪೂರೈಸಲು ಜೊಮ್ಯಾಟೊ ಹೊಸ ಸೇವೆ ಪರಿಚಯಿಸುತ್ತಿದೆ ಎಂದು ಗೋಯಲ್ ಹೇಳಿದ್ದಾರೆ.
ಆಹಾರ ಒದಗಿಸುವುದು ತಡವಾದರೆ, ಡೆಲಿವರಿ ಏಜೆಂಟ್‌ಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ದಂಡ ವಿಧಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಗುರುಗ್ರಾಮದಲ್ಲಿ ಮುಂದಿನ ತಿಂಗಳು ಈ ಯೋಜನೆಯನ್ನು ಪರೀಕ್ಷಾರ್ಥ ಕೈಗೊಂಡು, ನಂತರ ಇತರ ನಗರಗಳಿಗೆ ಜೊಮ್ಯಾಟೊ ವಿಸ್ತರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.