ನವದೆಹಲಿ: ದೇಶದ ಪ್ರತಿ ಗ್ರಾಮವೂ 2024ರ ಒಳಗಾಗಿ 4ಜಿ ಸಂಪರ್ಕ ಪಡೆಯಲಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ರಾಜ್ಯ ಸಚಿವ ದೇವುಸಿಂಹ ಚೌಹಾಣ್ ಶನಿವಾರ ತಿಳಿಸಿದ್ದಾರೆ.
ಸರ್ಕಾರದ ಯೋಜನೆಗಳು ಮತ್ತು ಸೇವೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನದ ಮಾತು ಕಾರ್ಯಕ್ರಮವು ಉತ್ತೇಜನ ನೀಡುತ್ತದೆ. 4ಜಿ ಯೋಜನೆಯ ಕುರಿತು ಮಾತನಾಡುವುದಾದರೆ 38 ಸಾವಿರದಿಂದ 40 ಸಾವಿರ ಗ್ರಾಮಗಳಲ್ಲಿ ಸಿಗ್ನಲ್ ಇಲ್ಲ. 2024ರ ಒಳಗಾಗಿ ಈ ಗ್ರಾಮಗಳಿಗೂ 4ಜಿ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
4ಜಿ ನೆಟ್‌ವರ್ಕ್ ಇಲ್ಲದ ನಗರಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಸಾಮಾಜಿಕ ಆರ್ಥಿಕ ಪರಿವರ್ತನೆಗೆ ಕಾರಣವಾಗಲಿದೆ ಎಂದಿದ್ದಾರೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ 4ಜಿ ತಂತ್ರಜ್ಞಾನ ಬಳಸಿಕೊಂಡು ಬಿಎಸ್‌ಎನ್‌ಎಲ್ ಮೂಲಕ ದೇಶದಾದ್ಯಂತ 4ಜಿ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.