ADVERTISEMENT

ಎಸ್‌ಎಂಇಗಳ ಐಪಿಒ: ₹3,540 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2023, 14:14 IST
Last Updated 22 ಅಕ್ಟೋಬರ್ 2023, 14:14 IST
<div class="paragraphs"><p>ಐಪಿಒ ಸಂಗ್ರಹ</p></div>

ಐಪಿಒ ಸಂಗ್ರಹ

   

ನವದೆಹಲಿ (‍ಪಿಟಿಐ): ಸಣ್ಣ ಮತ್ತು  ಮಧ್ಯಮ ಉದ್ಯಮಗಳ (ಎಸ್‌ಎಂಇ) ಐಪಿಒಗಳ (ಆರಂಭಿಕ ಷೇರು ಮಾರಾಟ) ಮೇಲೆ ಹೆಚ್ಚಿನ ಆಸಕ್ತಿ ಕಾಣಿಸಿಕೊಳ್ಳುತ್ತಿದೆ. 2023ರಲ್ಲಿ ಈವರೆಗೆ 139 ಎಸ್‌ಎಂಇಗಳು ಒಟ್ಟು ₹3,540 ಕೋಟಿ  ಮೊತ್ತವನ್ನು ಸಂಗ್ರಹಿಸಿವೆ. ಉದ್ಯಮಿಗಳ ಕುಟುಂಬಗಳು ಮತ್ತು ಶ್ರೀಮಂತ ಹೂಡಿಕದಾರರು ಎಸ್ಎಂಇಗಳಲ್ಲಿ ಆಸಕ್ತಿ ತೋರಿ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿರುವುದು ಇದಕ್ಕೆ ಕಾರಣ. 

2022ರಲ್ಲಿ 109 ಎಸ್‌ಎಂಇಗಳು  ₹1,875 ಕೋಟಿಯನ್ನಷ್ಟೇ ಸಂಗ್ರಹಿಸಲು ಸಾಧ್ಯವಾಗಿತ್ತು ಎಂದು ಪ್ರೈಮ್‌ಡಾಟಾಬೇಸ್‌ ಡಾಟ್‌ಕಾಂ ಹೇಳಿದೆ. 

ADVERTISEMENT

ಮುಂದಿನ ದಿನಗಳಲ್ಲಿ ಕೂಡ ಎಸ್‌ಎಂಇಗಳ ಐಪಿಒ ವಿಚಾರದಲ್ಲಿ ಅನುಕೂಲಕರ ವಾತಾವರಣವೇ ಮುಂದುವರಿಯಬಹುದು ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. 

‘ನಿರ್ದಿಷ್ಟ ವಲಯಗಳ ಬೆಳವಣಿಗೆ ಸಾಮರ್ಥ್ಯ, ಮಾರುಕಟ್ಟೆಯಲ್ಲಿ ಹಣದ ಹರಿವು, ಹೂಡಿಕೆದಾರರ ಮನೋಭಾವ, ನಿಯಮಗಳಲ್ಲಿ ಆಗಬಹುದಾದ ಬದಲಾವಣೆಗಳು ಮಾರುಕಟ್ಟೆಯ ಪ್ರವೃತ್ತಿಯನ್ನು ಮುಖ್ಯವಾಗಿ ನಿರ್ಧರಿಸುವ ಅಂಶಗಳು. ಈ ಎಲ್ಲ ಅಂಶಗಳು ಅನುಕೂಲಕರವಾಗಿಯೇ ಇರುವುದರಿಂದ ಮುಂದಿನ ದಿನಗಳಲ್ಲಿ ಎಸ್‌ಎಂಇಗಳ ಐಪಿಒ ಮೇಲೆ ಹೂಡಿಕೆ ಸಮೃದ್ಧವಾಗಿ ನಡೆಯಬಹುದು’ ಎಂದು ಅರಿಹಂತ್‌ ಕ್ಯಾಪಿಟಲ್‌ ಮಾರ್ಕೆಟ್ಸ್‌ ಲಿ.ನ ಸಂಶೋಧನನಾ ವಿಭಾಗದ ಮುಖ್ಯಸ್ಥ ಅಭಿಷೇಕ್‌ ಜೈನ್‌ ಹೇಳಿದ್ದಾರೆ. 

ಸೆಪ್ಟೆಂಬರ್‌ ತಿಂಗಳಲ್ಲಿ 37 ಎಸ್‌ಎಂಇಗಳು ಐಪಿಒ ಬಿಡುಗಡೆ ಮಾಡಿವೆ. ಸ್ಪೆಕ್ಟ್ರಮ್‌ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ₹105 ಕೋಟಿ ಬಂಡವಾಳ ಸಂಗ್ರಹಿಸಿದೆ. ಸಿಎಫ್‌ಎಫ್‌ ಫ್ಲುಯಿಡ್‌ ಕಂಟ್ರೋಲ್‌ ₹86 ಕೋಟಿ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.