ADVERTISEMENT

ಸೇವಾ ವೆಚ್ಚ ಪಾವತಿಸದ 10 ಆ್ಯಪ್‌ಗಳ ವಿರುದ್ಧ ಕ್ರಮಕ್ಕೆ ಮುಂದಾದ ಗೂಗಲ್

ರಾಯಿಟರ್ಸ್
Published 1 ಮಾರ್ಚ್ 2024, 5:41 IST
Last Updated 1 ಮಾರ್ಚ್ 2024, 5:41 IST
<div class="paragraphs"><p>ಸಾಂರ್ದರ್ಭಿಕ ಚಿತ್ರ</p></div>

ಸಾಂರ್ದರ್ಭಿಕ ಚಿತ್ರ

   

ಬೆಂಗಳೂರು: ಅಲ್ಫಾಬೆಟ್‌ ಒಡೆತದ ಸರ್ಚ್‌ ಎಂಜಿನ್‌ 'ಗೂಗಲ್‌', ತನ್ನ ಆ್ಯಪ್‌ ಸ್ಟೋರ್‌ ವೇದಿಕೆಯಲ್ಲಿನ ಕಾರ್ಯಾಚರಣೆಗೆ ಸೇವಾ ವೆಚ್ಚ ಪಾವತಿಸದ 10 ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.

ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆಯುವುದಾಗಿಯೂ ಹೇಳಿರುವ ಗೂಗಲ್‌, ಕಂಪನಿಗಳ ಹೆಸರುಗಳನ್ನು ಉಲ್ಲೇಖಿಸಿಲ್ಲ.

ADVERTISEMENT

'ಸುಸ್ಥಿತಿಯಲ್ಲಿರುವವುಗಳೂ ಸೇರಿದಂತೆ 10 ಕಂಪನಿಗಳು ನ್ಯಾಯಾಲಯದಿಂದ ಮಧ್ಯಂತರ ರಕ್ಷಣೆಯನ್ನು ಪಡೆದುಕೊಂಡಿವೆ. ಅದರೊಂದಿಗೆ ಕಂಪನಿಗಳು ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಅಪಾರ ಮೊತ್ತ ಪಡೆದರೂ, ಸೇವಾ ವೆಚ್ಚ ಪಾವತಿಸದಿರಲು ನಿರ್ಧರಿಸಿವೆ' ಎಂದು ಟೆಕ್‌ ದೈತ್ಯ 'ಗೂಗಲ್' ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.