ನವದೆಹಲಿ: ವಿಕ್ರಂ ಸೋಲಾರ್, ಆದಿತ್ಯ ಇನ್ಫೊಟೆಕ್, ವರಿಂದರಾ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ ಸೇರಿ 13 ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಅನುಮತಿ ಕೋರಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸೋಮವಾರ ಅರ್ಜಿ ಸಲ್ಲಿಸಿವೆ.
ಅಜಾಕ್ಸ್ ಎಂಜಿನಿಯರಿಂಗ್, ರಾಹೀ ಇನ್ಫ್ರಾಟೆಕ್, ವಿಕ್ರನ್ ಎಂಜಿನಿಯರಿಂಗ್, ಮಿಡ್ವೆಸ್ಟ್, ವೈನಿ ಕಾರ್ಪೊರೇಷನ್, ಸಂಭವ್ ಸ್ಟೀಲ್ ಟ್ಯೂಬ್ಸ್, ಜಾರೋ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಆ್ಯಂಡ್ ರಿಸರ್ಚ್, ಆಲ್ ಟೈಮ್ ಪ್ಲಾಸ್ಟಿಕ್ಸ್ ಲಿಮಿಟೆಡ್, ಸ್ಕೋಡಾ ಟ್ಯೂಬ್ಸ್ ಮತ್ತು ದೇವ್ ಆಕ್ಸಿಲರೇಟರ್ ಉಳಿದ ಕಂಪನಿಗಳಾಗಿವೆ.
ಐಪಿಒ ಮೂಲಕ ಈ ಕಂಪನಿಗಳು ₹8 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇದೆ. ಯೋಜನೆಗಳ ಮುಂದುವರಿಕೆ, ಸಾಲ ತೀರಿಸಲು ಇದನ್ನು ಬಳಸಿಕೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.