ಮುಂಬೈ: ಕೋಟಕ್ ಮಹೀಂದ್ರ ಬ್ಯಾಂಕ್ ನಿವ್ವಳ ಲಾಭವು 2023ರ ಮಾರ್ಚ್ ತ್ರೈಮಾಸಿಕದಲ್ಲಿ ಶೇ 14.29ರಷ್ಟು ಹೆಚ್ಚಾಗಿ ₹4,566 ಕೋಟಿಗೆ ಏರಿಕೆ ಆಗಿದೆ.
ನಿವ್ವಳ ಬಡ್ಡಿ ವರಮಾನ ₹4,521 ಕೋಟಿಯಿಂದ ₹6,1–3 ಕೋಟಿಗೆ ಏರಿಕೆ ಆಗಿದೆ ಎಂದು ಹೇಳಿದೆ. ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಶೇ 2.34 ರಿಂದ ಶೇ 1.78ಕ್ಕೆ ಇಳಿಕೆ ಕಂಡಿದೆ.
2022–23ನೇ ಹಣಕಾಸು ವರ್ಷಕ್ಕೆ ಬ್ಯಾಂಕ್‌ನ ನಿವ್ವಳ ಲಾಭ ಶೇ 23ರಷ್ಟು ಹೆಚ್ಚಾಗಿ ₹14,925 ಕೋಟಿಗೆ ಏರಿಕೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.