ನವದೆಹಲಿ: 2019-2022 ಅವಧಿಯಲ್ಲಿ ಯಾವುದೇ ₹2000 ಹೊಸ ನೋಟು ಮುದ್ರಣವಾಗಿಲ್ಲ ಎಂಬ ಸಂಗತಿಯು ಆರ್‌ಟಿಐನಿಂದ ಬಹಿರಂಗಗೊಂಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ನಿಗಮ 2016-17ರಲ್ಲಿ 3,542.991 ದಶಲಕ್ಷ ₹2000 ನೋಟು ಮುದ್ರಿಸಿತ್ತು. 2017–18ರಲ್ಲಿ 111.507 ದಶಲಕ್ಷ, 2018-19ರಲ್ಲಿ 46.690 ದಶಲಕ್ಷ ನೋಟು ಮುದ್ರಣವಾಗಿತ್ತು. ಅದಾದ ಬಳಿಕ ₹2000 ಯಾವುದೇ ಹೊಸ ನೋಟು ಮುದ್ರಣಗೊಂಡಿಲ್ಲ ಎಂಬುದು ಐಎಎನ್‌ಎಸ್ ಸಲ್ಲಿಸಿದ ಆರ್‌ಟಿಐ ಅರ್ಜಿಯ ಉತ್ತರದಲ್ಲಿ ಬಹಿರಂಗಗೊಂಡಿದೆ.
ಕೇಂದ್ರ ಸರ್ಕಾರ ನ.8,2016ರಂದು ₹500, 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ಅದಾದ ಬಳಿಕ ₹2000 ನೋಟುಗಳನ್ನು ಪರಿಚಯಿಸಲಾಗಿತ್ತು. 2016 ರಿಂದ 2020ರವರೆಗೆ ₹2000 ನಕಲಿ ನೋಟು ವಶ ಕೂಡ 2,272 ರಿಂದ 2,44,834 ಕ್ಕೆ ಹೆಚ್ಚಾಗಿದೆ ಎಂದು ಎನ್‌ಸಿಆರ್‌ಬಿ ದಾಖಲೆಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.