ADVERTISEMENT

ಎಫ್‌ಡಿ ಮಾಡೋದು ಹೇಗೆ? ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ? ಇಲ್ಲಿದೆ ಮಾಹಿತಿ

ಕಾಸು ಉಳಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2020, 7:48 IST
Last Updated 24 ಜೂನ್ 2020, 7:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಷೇರುಪೇಟೆ ಹೊಯ್ದಾಟ ಮತ್ತು ಆರ್ಥಿಕ ಅಸ್ಥಿರತೆಯಿಂದಾಗಿ ಇರುವ ನಾಲ್ಕು ಕಾಸು ಉಳಿಸಿಕೊಳ್ಳಲು ಮತ್ತು ತಕ್ಕಮಟ್ಟಿಗೆ ಬೆಳೆಸಿಕೊಳ್ಳಲು ಅವಧಿ ಠೇವಣಿಯತ್ತ (ಫಿಕ್ಸೆಡ್ ಡೆಪಾಸಿಟ್ - ಎಫ್‌ಡಿ) ಹಲವರ ಚಿತ್ತ ಹರಿದಿದೆ. ಎಫ್‌ಡಿ ಬಗ್ಗೆ ನೀವು ತಿಳಿಯಲು ಬಯಸುವ ಮಾಹಿತಿ ಇಲ್ಲಿದೆ.

ಎಲ್ಲಿ ಎಫ್‌ಡಿ ಮಾಡಬಹುದು?

ಎಲ್ಲ ವಾಣಿಜ್ಯ, ಸಹಕಾರಿ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮಾಡಬಹುದು.

ADVERTISEMENT

ಏನೆಲ್ಲಾ ದಾಖಲೆ ಕೇಳ್ತಾರೆ?

ನಿಮ್ಮ ಉಳಿತಾಯ ಖಾತೆಯಿರುವ ಬ್ಯಾಂಕ್‌ನಲ್ಲಾದರೆ ಎಫ್‌ಡಿ ಮಾಡಲು ಹೆಚ್ಚುವರಿ ದಾಖಲೆಗಳೇನೂ ಬೇಕಿಲ್ಲ. ಉಳಿತಾಯ ಖಾತೆ ಇಲ್ಲದಿದ್ದರೂ ಕೆವೈಸಿ (ಗ್ರಾಹಕರನ್ನು ಅರಿಯಿರಿ) ದಾಖಲೆಗಳನ್ನು ಒದಗಿಸಿ ಎಫ್‌ಡಿ ಆರಂಭಿಸಬಹುದು. ಪಾನ್ ಕಾರ್ಡ್‌ ಸಂಖ್ಯೆ ಲಿಂಕ್ ಆಗಿರಬೇಕು. ಇಲ್ಲದಿದ್ದರೆ ಟಿಡಿಎಸ್‌ ಹಿಡಿಯುತ್ತಾರೆ. ಫಾರಂ ನಂಬರ್ 16 ಕೊಟ್ಟರೆ ಇದು ತಪ್ಪುತ್ತದೆ. ಎಫ್‌ಡಿ ಆರಂಭಿಸುವಾಗ ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಿ.

ಕೆಲ ಸಹಕಾರಿ ಬ್ಯಾಂಕ್‌ಗಳಲ್ಲಿ ಬ್ಯಾಂಕ್‌ ಷೇರು ಖರೀದಿ ಕಡ್ಡಾಯ ಎಂದು ಹೇಳುತ್ತಾರೆ.

ಕನಿಷ್ಠ ಮತ್ತು ಗರಿಷ್ಠ ಎಷ್ಟು ಹಣಕ್ಕೆ ಎಫ್‌ಡಿ ಮಾಡಬಹುದು?

ಬಹುತೇಕ ಬ್ಯಾಂಕ್‌ಗಳಲ್ಲಿ ಕನಿಷ್ಠ 1000 ರೂಪಾಯಿಯಿಂದ ಎಫ್‌ಡಿ ಆರಂಭಿಸಬಹುದು. 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಎಫ್‌ಡಿ ತೆರೆಯಲು ಶಾಖಾ ವ್ಯವಸ್ಥಾಪಕರನ್ನು ಮುಖತಃ ಭೇಟಿಯಾಗಬೇಕು ಎಂದು ಕೆಲವು ಬ್ಯಾಂಕ್‌ಗಳು ತಿಳಿಸುತ್ತವೆ.

ಎಷ್ಟು ಅವಧಿಗೆ ಎಫ್‌ಡಿ ಮಾಡಬಹುದು?

ಕನಿಷ್ಠ 7 ದಿನಗಳಿಂದ ಗರಿಷ್ಠ 10 ವರ್ಷಗಳ ಅವಧಿಗೆ ಎಫ್‌ಡಿ ಮಾಡಬಹುದು. ಪರಿಪಕ್ವತೆಯ (ಮೆಚ್ಯುರಿಟಿ) ಅವಧಿ ಮುಟ್ಟಿದ ನಂತರ ಎಫ್‌ಡಿಯನ್ನು ಮುಂದುವರಿಸುವಂತೆ ಎಫ್‌ಡಿ ಆರಂಭಿಸುವಾಗಲೇ ಸೂಚನೆ ಕೊಡಲು ಅವಕಾಶವಿದೆ.

ಬ್ಯಾಂಕ್ ಶಾಖೆಗೆ ಭೇಟಿ ನೀಡುವುದು ಅನಿವಾರ್ಯವೇ?

ಆನ್‌ಲೈನ್‌ ಅಕೌಂಟ್‌ ಮೂಲಕವೇ ಎಫ್‌ಡಿ ಮಾಡಿಕೊಳ್ಳಲು ಎಸ್‌ಬಿಐ ಸೇರಿದಂತೆ ಬಹುತೇಕ ಬ್ಯಾಂಕ್‌ಗಳು ಅವಕಾಶ ಮಾಡಿಕೊಟ್ಟಿವೆ. ಆನ್‌ಲೈನ್ ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳದವರುಶಾಖೆಗೆ ಭೇಟಿ ನೀಡಿ ಎಫ್‌ಡಿ ಮಾಡಿಸಬೇಕು.

ಮೆಚ್ಯುರಿಟಿ ಅವಧಿಗೆ ಮೊದಲೇ ಎಫ್‌ಡಿ ಕ್ಲೋಸ್ ಮಾಡಿದರೆನಷ್ಟವಾಗುತ್ತದೆಯೇ?

ಅವಧಿಗೆ ಮೊದಲು ಎಫ್‌ಡಿ ಖಾತೆ ಕ್ಲೋಸ್ ಮಾಡಿದರೆ ಬಹುತೇಕ ಬ್ಯಾಂಕ್‌ಗಳಲ್ಲಿ ಶೇ 1ರಷ್ಟು ದಂಡ ವಿಧಿಸಲಾಗುತ್ತದೆ. ಹಣದ ತುರ್ತು ಇದ್ದಾಗ ಅದೇ ಎಫ್‌ಡಿಮೇಲೆ ಮುಂಗಡ ಸಾಲ (ಓವರ್ ಡ್ರಾಫ್ಟ್‌) ತೆಗೆದುಕೊಳ್ಳಬಹುದು. ಇದು ಎಫ್‌ಡಿಗೆ ಬ್ಯಾಂಕ್‌ ನೀಡುವ ಬಡ್ಡಿಗಿಂತ ಶೇ 1ರಷ್ಟು ಹೆಚ್ಚಿನ ಬಡ್ಡಿ ಇರುತ್ತದೆ. ಎಫ್‌ಡಿಯ ಪರಿಪಕ್ವತೆಯ ಮೇಲೆ ಇದು ಪರಿಣಾಮ ಬೀರುವುದಿಲ್ಲ.

ಎಫ್‌ಡಿಗೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ ಸಿಗುತ್ತೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)

ಅವಧಿ ಬಡ್ಡಿ ದರ (ಸಾಮಾನ್ಯರಿಗೆ) ಬಡ್ಡಿ ದರ (ಹಿರಿಯ ನಾಗರಿಕರಿಗೆ
180 ದಿನಗಳಿಂದ 1 ವರ್ಷದ ಒಳಗೆ 4.40 4.90
1ರಿಂದ 3 ವರ್ಷ 5.10 5.60
3ರಿಂದ 5 ವರ್ಷ 5.30 5.80
5ರಿಂದ 10 ವರ್ಷ 5.40 6.20

ಎಚ್‌ಡಿಎಫ್‌ಸಿ

ಅವಧಿ ಬಡ್ಡಿ ದರ (ಸಾಮಾನ್ಯರಿಗೆ) ಬಡ್ಡಿ ದರ (ಹಿರಿಯ ನಾಗರಿಕರಿಗೆ
9 ತಿಂಗಳಿಂದ 1 ವರ್ಷದ ಒಳಗೆ 4.75 5.25
1ರಿಂದ 2 ವರ್ಷ 5.25 5.75
2ರಿಂದ 3 ವರ್ಷ 5.35 5.85
3ರಿಂದ 5 ವರ್ಷ 5.50 6
5ರಿಂದ 10 ವರ್ಷ 5.50 6.25

ಐಸಿಐಸಿಐ

ಅವಧಿ ಬಡ್ಡಿ ದರ (ಸಾಮಾನ್ಯರಿಗೆ) ಬಡ್ಡಿ ದರ (ಹಿರಿಯ ನಾಗರಿಕರಿಗೆ
185 ದಿನಗಳಿಂದ 289 ದಿನಗಳು 4.50 5
290 ದಿನಗಳಿಂದ 1 ವರ್ಷದ ಒಳಗೆ 4.75 5.25
1 ವರ್ಷದಿಂದ 18 ತಿಂಗಳ 5.15 5.65
1ರಿಂದ 3 ವರ್ಷ 5.35 5.85
3ರಿಂದ 5 ವರ್ಷ 5.50 6
5ರಿಂದ 10 ವರ್ಷ 5.50 6.30

ಕೆನರಾ ಬ್ಯಾಂಕ್

ಅವಧಿ ಬಡ್ಡಿ ದರ (ಸಾಮಾನ್ಯರಿಗೆ) ಬಡ್ಡಿ ದರ (ಹಿರಿಯ ನಾಗರಿಕರಿಗೆ
46ರಿಂದ 179 ದಿನ 4.30 4.30
180 ದಿನಗಳಿಂದ 1 ವರ್ಷದ ಒಳಗೆ 4.85 5.35
1ರಿಂದ 3 ವರ್ಷ 5.15 5.65
1ರಿಂದ 3 ವರ್ಷ 5.50 6
3ರಿಂದ 5 ವರ್ಷ 5.50 6
3ರಿಂದ 10 ವರ್ಷ 5.45 5.95

ಕರ್ಣಾಟಕ ಬ್ಯಾಂಕ್

ಅವಧಿ ಬಡ್ಡಿ ದರ (ಸಾಮಾನ್ಯರಿಗೆ) ಬಡ್ಡಿ ದರ (ಹಿರಿಯ ನಾಗರಿಕರಿಗೆ
91 ದಿನಗಳಿಂದ 364 ದಿನ 5.60
1ರಿಂದ 2 ವರ್ಷ 5.75 6.15
2ರಿಂದ 10 ವರ್ಷ 5.65 6.05

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.