ADVERTISEMENT

ಕಾರ್ಪೊರೇಟ್ ಫಲಿತಾಂಶ ಪ್ರಭಾವ

ಕೆ.ಜಿ ಕೃಪಾಲ್
Published 5 ಮೇ 2013, 19:59 IST
Last Updated 5 ಮೇ 2013, 19:59 IST

ಹಿಂದಿನ ವಾರದ ಪ್ರಮುಖ ಬೆಳವಣಿಗೆಗಳಲ್ಲಿ ಹಿಂದೂಸ್ತಾನ್ ಯುನಿಲಿವರ್ ಕಂಪೆನಿಯ ಫಲಿತಾಂಶಕ್ಕೆ ಸ್ಪಂದಿಸಿದ ಷೇರುಪೇಟೆಯು ಷೇರಿನ ಬೆಲೆಯನ್ನು ರೂ 597 ವಾರ್ಷಿಕ ಗರಿಷ್ಠ ಮಟ್ಟಕ್ಕೆ ಕೊಂಡೊಯ್ದು ರೂ 572.40 ರಲ್ಲಿ ವಾರಾಂತ್ಯ ಕಂಡಿತು. ಹಾಗೆಯೇ ವಾರಾಂತ್ಯದಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಸಾಲ ನೀತಿ ಪ್ರಕಟವಾಗಿ, ನಿರೀಕ್ಷಿಸಿದಂತೆ 25 ಮೂಲಾಂಶಗಳ ರೆಪೊ ದರವನ್ನು ಕಡಿತಗೊಳಿಸಿತು.

ನಗದು ಮೀಸಲು ಅನುಪಾತವನ್ನು ಬದಲಾಯಿಸದೇ ಮುಂದುವರೆಸಿತು. ಈ ಕಾರಣದಿಂದಾಗಿ ಷೇರುಪೇಟೆಯಲ್ಲಿ ಸೂಕ್ಷ್ಮವಾಗಿ ಸ್ಪಂದಿಸುವ ವಲಯಗಳಾದ ರಿಯಲ್ ಎಸ್ಟೇಟ್ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಮಾರಾಟದ ಒತ್ತಡಕ್ಕೊಳಗಾದವು. ಕೆನರಾ ಬ್ಯಾಂಕ್‌ನ ಫಲಿತಾಂಶವು ಉತ್ತೇಜಕವಲ್ಲದ ಕಾರಣ ಇಳಿಕೆಯಲ್ಲಿದ್ದು ಆರ್‌ಬಿಐ ಪಾಲಿಸಿಯ ಪ್ರಕಟಣೆ ನಂತರ ಹೆಚ್ಚಿನ ಒತ್ತಡಕ್ಕೊಳಗಾಗಿ ರೂ 394ರ ಸುಮಾರಿಗೆ ಅಂತ್ಯಗೊಂಡಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್‌ಗಳು ಮಾರಾಟದ ಒತ್ತಡಕ್ಕೊಳಗಾದವು.

ಮೂಲಾಧಾರಿತ ಪೇಟೆಯ ವಹಿವಾಟು ಆರಂಭಿಸುವ ಕಾರಣ ಎಂಸಿಎಕ್ಸ್ ವಿನಿಮಯ ಕೇಂದ್ರದ ಅಂಗಸಂಸ್ಥೆಯಾದ ಮಲ್ಟಿ ಕಮಾಡಿಟೀಸ್ ಎಕ್ಸ್‌ಚೇಂಜ್ ಷೇರು ರೂ 992 ರವರೆಗೂ ಏರಿಕೆ ಕಂಡಿತು. ಐಡಿಯಾ ಸೆಲ್ಯುಲಾರ್ ಉತ್ತಮ ಫಲಿತಾಂಶಕ್ಕೆ ಸೂಕ್ತವಾಗಿ ಸ್ಪಂದಿಸಿದ ಪೇಟೆಯು ಷೇರಿನ ಬೆಲೆಯನ್ನು ವಾರ್ಷಿಕ ಗರಿಷ್ಠಮಟ್ಟ ರೂ 136.90ಕ್ಕೆ ಚಿಮ್ಮುವಂತೆ ಮಾಡಿತು. ಒಟ್ಟಿನಲ್ಲಿ ಹೆಚ್ಚಿನ ಕಂಪೆನಿಗಳು ಆಕರ್ಷಕ ಲಾಭಾಂಶ ಪ್ರಕಟಿಸಿವೆ. ಷೇರಿನ ಬೆಲೆಯಲ್ಲಿ ಕುಸಿತ ಕಂಡರೆ ಹೂಡಿಕೆದಾರರಿಗೆ ಆಕರ್ಷಕ ಇಳುವರಿ ದೊರೆಯುತ್ತದೆ.

ಒಟ್ಟಾರೆ 288 ಅಂಶಗಳಷ್ಟು ಏರಿಕೆಯನ್ನು, ಹಿಂದಿನ ವಾರದಲ್ಲಿ, ಪ್ರದರ್ಶಿಸಿದ ಸಂವೇದಿ ಸೂಚ್ಯಂಕವು ತನ್ನೊಂದಿಗೆ ಮಧ್ಯಮಶ್ರೇಣಿ ಸೂಚ್ಯಂಕವನ್ನು 100 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿತು. ಕೆಳಮಧ್ಯಮ ಶ್ರೇಣಿಯ ಸೂಚ್ಯಂಕವು 8 ಅಂಶಗಳಷ್ಟು ಏರಿಕೆ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಕೊಳ್ಳುವಿಕೆಯಿಂದ ರೂ 3,881 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿ ಹಿಡಿದು ಒಟ್ಟು ರೂ 2,405 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಷೇರುಪೇಟೆ ಬಂಡವಾಳೀಕರಣ ಮೌಲ್ಯವು ರೂ 65.67 ಲಕ್ಷ ಕೋಟಿಯಿಂದ ರೂ 66.70 ಲಕ್ಷ ಕೋಟಿಗೆ ಜಿಗಿದಿತ್ತು.

ಹೊಸ ಷೇರಿನ ವಿಚಾರ
ಸ್ಕೌಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪೆನಿಯ ಆರಂಭಿಕ ಷೇರು ವಿತರಣೆಯು 25 ರಿಂದ 29 ರವರೆಗೂ ಪ್ರತಿ ಷೇರಿಗೆರೂ130 ರಿಂದರೂ132ರ ಅಂತರದಲ್ಲಿದ್ದಿತು. ಈ ವಿತರಣೆ ಸೂಕ್ತ, ಅಗತ್ಯವಾದ ಸ್ಪಂದನ ದೊರೆಯದ ಕಾರಣ ಕಂಪೆನಿಯು ವಿತರಣೆ ಬೆಲೆಯನ್ನುರೂ118 ರಿಂದ 120ರ ಗರಿಷ್ಠ ಮಟ್ಟಕ್ಕೆ ಇಳಿಸಿ, ಅಂತಿಮ ದಿನವನ್ನು ಮೇ 3 ರವರೆಗೂ ವಿಸ್ತರಿಸಿದೆ.

ಬೋನಸ್ ಷೇರಿನ ವಿಚಾರ

  •  ಟ್ರಾನ್ಸ್‌ಫರ‌್ಮರ್ಸ್ ಅಂಡ್ ರೆಕ್ಟಿಫೈಯರ್ಸ್ (ಇಂಡಿಯಾ) ಲಿ. ಕಂಪೆನಿಯು 1:9 ರಂತೆ ಬೋನಸ್ ಷೇರು ವಿತರಿಸಲಿದೆ. ಈ ಕಾರ್ಪೊರೇಟ್ ಫಲವನ್ನು ಪ್ರವರ್ತಕರ ಹೊರತಾಗಿ ಸಾರ್ವಜನಿಕ ಷೇರುದಾರರಿಗೆ ಮಾತ್ರ ನೀಡಲಿದ್ದು ಈ ಮೂಲಕ ಸಾರ್ವಜನಿಕ ಹೂಡಿಕೆಯ ಕನಿಷ್ಠ ಮಟ್ಟ ಶೇ 25ಕ್ಕೆ ಅವಕಾಶವಾಗಲಿದೆ.
  • ಎಮಾಮಿ ಲಿ. ಕಂಪೆನಿ 6 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.
  • ಎಂ ಸನ್ಸ್ ಇಂಟರ್‌ನ್ಯಾಶನಲ್ ವಿತರಿಸುವ 1:1ರ ಬೋನಸ್‌ಗೆ ಮೇ 9 ನಿಗದಿತ ದಿನವಾಗಿದೆ.

ಲಾಭಾಂಶ ವಿಚಾರ
ಆಂಧ್ರ ಬ್ಯಾಂಕ್ ಶೇ 50, ಅಲ್‌ಸ್ತೋಮ್ (ಇಂಡಿಯಾ) ಲಿ. ಶೇ 100, ಅಲೆಂಬಿಕ್ ಶೇ 125 (ಮು.ಬೆ.ರೂ2), ಅಸ್ಟ್ರಾ ಮೈಕ್ರೊವೇವ್ ಪ್ರಾಡಕ್ಟ್ಸ್ ಶೇ 40, ಅಜಂತಾಫಾರ್ಮ ಶೇ 125 (ಮು.ಬೆ.ರೂ5), ಅಲ್‌ಸ್ತೋಮ್ ಟಿ.ಡಿ. ಶೇ 90 (ಮು.ಬೆ.ರೂ2), ಅಲಿಕಾನ್ ಕ್ಯಾಸ್ಟ್ ಅಲ್ಲಾಯ್ ಶೇ 40 (ಮು.ಬೆ.ರೂ5), ಅಕ್ಸಲ್ಯ ಕಾಳೇ ಸೊಲೂಷನ್ಸ್ ಶೇ 300, ಬ್ಯಾಂಕ್ ಆಫ್ ಮಹಾರಾಷ್ಟ್ರ ಶೇ 23, ಬ್ಲೂಡಾರ್ಟ್ ಎಕ್ಸ್‌ಪ್ರೆಸ್ ಶೇ 710, ಬನಾರಸ್ ಹೋಟೆಲ್ಸ್ ಶೇ 200, ಭಾರತಿ ಏರ್‌ಟೆಲ್ ಶೇ 20 (ಮು.ಬೆ.ರೂ5), ಕಾರ್ಬೊರ‌್ಯಾಂಡಮ್ ಯೂನಿವರ್ಸಲ್ ಶೇ 75 (ಮು.ಬೆ.ರೂ2), ಚಂಬಲ್ ಫರ್ಟಿಲೈಸರ್ಸ್ ಶೇ 19, ಕೆನರಾ ಬ್ಯಾಂಕ್ ಶೇ 300, ಡಾಲ್ಫಿನ್ ಆಫ್‌ಶೋರ್ ಶೇ 15, ಡಾಬರ್ ಇಂಡಿಯಾ 85 (ಮು.ಬೆ.ರೂ1), ಡಿ-ಲಿಂಕ್ (ಇಂಡಿಯಾ) ಶೇ 25 (ಮು.ಬೆ.ರೂ2), ಎಕ್ಸೈಡ್ ಇಂಡಸ್ಟ್ರೀಸ್ ಶೇ 60 (ಮು.ಬೆ.ರೂ1), ಎಂಕೊ ಎಲೆಕಾನ್ ಶೇ 40, ಜಾಮೆಟ್ರಿಕ್ ಶೇ 85 (ಮು.ಬೆ.ರೂ2), ಗ್ರೀವ್ಸ್ ಕಾಟನ್ ಶೇ 25 (ಮು.ಬೆ.ರೂ2), ಗಾಡ್ರೆಜ್ ಕನ್ಯೂಮರ್ಸ್‌  ಪ್ರಾ ಡಕ್ಟ್ಸ್ ಶೇ 200 (ಮು.ಬೆ.ರೂ 1), ಗುಜರಾತ್ ಆಟೊಮೊಟೀವ್ ಗೇರ್ಸ್‌ ಶೇ 30, ಹೆಕ್ಸಾವೇರ್ ಟೆಕ್ನಾಲಜಿ ಶೇ 60 (ಮು.ಬೆ.ರೂ2), ಐಎನ್‌ಜಿ ವೈಶ್ಯ ಶೇ 55, ಇಂಡಿಯನ್ ಓವರ್ಸಿಸ್ ಬ್ಯಾಂಕ್ ಶೇ 20, ಐಎಲ್‌ಅಂಡ್ ಎಫ್.ಎಸ್. ಇನ್ವೆಸ್ಟ್ ಮ್ಯಾನೇಜರ್ಸ್‌ ಶೇ 75 (ಮು. ಬೆ.ರೂ2), ಕಿರ್ಲೊಸ್ಕರ್ ಇಂಡಸ್ಟ್ರೀಸ್ ಶೇ 40, ಕಿರ್ಲೊಸ್ಕರ್ ಫೆರೊ ಇಂಡಸ್ಟ್ರೀಸ್ ಶೇ 25 (ಮು. ಬೆ.ರೂ5), ಕಜಾರಿಯಾ ಸಿರಾಮಿಕ್ಸ್ ಶೇ 150 (ಮು. ಬೆ.ರೂ2), ಕೊಲ್ಟೆಪಾಟಿಲ್ ಶೇ 15, ಹಿಂದೂಸ್ಥಾನ್ ಯುನಿಲೀವರ್ ಶೇ 600 (ಮು. ಬೆ.ರೂ1), ಮ್ಯಾರಿಕೊ ಶೇ 50 (ಮು. ಬೆ.ರೂ1) ಎಲ್.ಜಿ..ಬಿ. ಬ್ರದರ್ಸ್ ಶೇ 20, ಬಿ.ಎ.ಎಸ್.ಎಫ್. ಶೇ 40, ಐ.ಡಿ.ಎಫ್.ಸಿ. ಶೇ 26, ಮಂಗಳಂ ಸಿಮೆಂಟ್ ಶೇ 60, ನವೀನ್ ಪ್ಲೊರಿನ್ ಶೇ 150 (ಮು. ಬೆ.ರೂ5), ಓರಿಯಂಟಲ್ ಬ್ಯಾಂಕ್ ಶೇ 92, ಪ್ರಿಮಿಯರ್ ಶೇ 70, ಪೆಟ್ರೊನೆಟ್ ಎಲ್.ಎನ್.ಜಿ. ಶೇ 25, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ ಶೇ 26.8, ಆರ್.ಎಸ್.ಡಬ್ಲು.ಎಂ. ಶೇ 100, ಶ್ರೀ ಸೀಮೆಂಟ್ಸ್ ಶೇ 80, ಶಾಂತಿಗೇರ್ಸ್‌ ಶೇ 60 (ಮು. ಬೆ.ರೂ1) ಸ್ಟೆರ್ಲೈಟ್ ಇಂಡಸ್ಟ್ರೀಸ್ ಶೇ 120 (ಮು. ಬೆ.ರೂ1), ಸಿಂಡಿಕೇಟ್ ಬ್ಯಾಂಕ್ ಶೇ 67, ಪಾಪರ್ ಸ್ಟಾಪ್ ಶೇ 15 (ಮು. ಬೆ.ರೂ5), ತಾಜ್ ಜಿ.ವಿ.ಕೆ. ಹೋಟೆಲ್ಸ್ ಶೇ 25 (ಮು. ಬೆ.ರೂ2), ಟಿ.ವಿ.ಎಸ್. ಮೋಟಾರ್ಸ್ ಶೇ 60 (ಮು. ಬೆ.ರೂ1), ಟ್ಯೂಬ್ ಇನ್ವೆಸ್ಟ್‌ಮೆಂಟ್ಸ್ ಶೇ 25 (ಮು. ಬೆ.ರೂ 2).

ವಿಶೇಷ ವಹಿವಾಟು
ಸಮಾನಂತರವಾಗಿ ಕಾರ್ಯನಿರ್ವಹಿಸುತ್ತಿರುವ ಆಪತ್ತುಗೊಳಗಾದಾಗ ಪುನರ್ ವಶಮಾಡಿಕೊಳ್ಳಲು ಸ್ಥಾಪಿಸಿರುವ ಘಟಕದ ಪರೀಕ್ಷಾರ್ಥವಾಗಿ ಶನಿವಾರ 11 ರಂದು ಮುಂಬೈ ಷೇರು ವಿನಿಮಯ ಕೇಂದ್ರವು ಅಲ್ಪಕಾಲೀನ ವಹಿವಾಟಿನ ಮೂಲಕ ಘಟಕದ ಯಶಸ್ಸನ್ನು ದೃಢೀಕರಿಸಿಕೊಳ್ಳಲು ಮುಂದಾಗಿದೆ. ಮುಂಜಾನೆ 11-15 ರಿಂದ ಮಧ್ಯಾಹ್ನ 12-45ರ ವರೆಗೂ ವಹಿವಾಟು ನಡೆಯಲಿದೆ.

ಮುಖಬೆಲೆ ಸೀಳಿಕೆ ವಿಚಾರ
ಅಶೋಕ ಬ್ಯುಲ್ಡ್‌ಕಾನ್ ಕಂಪೆನಿಯು 10 ರಂದು ಷೇರಿನ ಮುಖ ಬೆಲೆ ಸೀಳಿಕೆ ಪರಿಶೀಲಿಸಲಿದೆ.ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್‌ನಿಂದ ಬಡ್ಡಿ ದರದ ಇಳಿಕೆಯ ಕಾರಣ ಜಾಗತಿಕ ಪೇಟೆಗಳು ಚುರುಕಾದವು. ಹಿಂದಿನ ತಿಂಗಳು ಬ್ಯಾಂಕ್ ಆಫ್ ಜಪಾನ್ 1.4 ಸಾವಿರ ಕೋಟಿ ಡಾಲರ್ ಹಣವನ್ನು ಪೇಟೆಗೆ ಬಿಡುಗಡೆ ಮಾಡಿ ಆರ್ಥಿಕ ಬೆಳವಣಿಗೆಗೆ ಚುರುಕು ಮಾಡಿಸಿದೆ.

ADVERTISEMENT

ವಾರದ ವಿಶೇಷ
ಹಿಂದೂಸ್ಥಾನ್ ಯೂನಿಲಿವರ್ ಕಂಪೆನಿಯ ಪ್ರವರ್ತಕರಾದ ಯೂನಿಲೀವರ್ ಸಮೂಹವು ಸ್ವಯಂ ಪ್ರೇರಣೆಯಿಂದ ಸಾರ್ವಜನಿಕರಿಂದ 48,70,04,772 ಷೇರುಗಳನ್ನು ಅಂದರೆ ಶೇ 22.52 ರಷ್ಟು ಕಂಪೆನಿಯ ಭಾಗಿತ್ವವನ್ನು ಪ್ರತಿ ಷೇರಿಗೆರೂ 600 ರಂತೆ ತೆರೆದ ಕರೆಯ ಮೂಲಕ ಕೊಳ್ಳುವ ಪ್ರಕಟಣೆಯು ಷೇರಿನ ಬೆಲೆಯನ್ನುರೂ 597ರ ವರೆಗೂ, ಹಿಂದಿನ ದಿನದರೂ497ರ ಹಂತದಿಂದ ಚಿಮ್ಮುವಂತೆ ಮಾಡಿರೂ583ರ ಸಮೀಪ ಅಂತ್ಯಗೊಂಡಿದೆ. ಯೂನಿಲಿವರ್ ಸಮೂಹದ ಇತರೆ ಆಸಿಕ್ತಿಯಲ್ಲಿ ಕಳೆದ ಜನವರಿಯಲ್ಲಿ ಹಿಂದೂಸ್ತಾನ್ ಯೂನಿಲೀವರ್ ಕಂಪೆನಿಯು ಪ್ರವರ್ತಕರಿಗೆ ಸಧ್ಯ ನೀಡುತ್ತಿರುವ ಒಟ್ಟು ವಹಿವಾಟಿನ ಶೇ 1.4ರ ಸ್ವಾಮ್ಯ ಶುಲ್ಕವನ್ನು ಹಂತಹಂತವಾಗಿ ಶೇ 3.15ಕ್ಕೆ ಮಾರ್ಚ್ 2018 ರೊಳಗೆ ಹೆಚ್ಚಿಸುವ ಒಪ್ಪಂದ ಮಾಡಿಕೊಂಡಿದೆ. ಸಧ್ಯ ಪ್ರವರ್ತಕರು ಶೇ 52.48 ರಷ್ಟು, ವಿದೇಶಿ ವಿತ್ತೀಯ ಸಂಸ್ಥೆಗಳು ಶೇ 22.11, ಸ್ಥಳೀಯ ವಿತ್ತೀಯ ಸಂಸ್ಥೆಗಳು ಶೇ 8.07, ಸಾರ್ವಜನಿಕರು ಶೇ 17.34 ರಷ್ಟು ಷೇರು ಹೊಂದಿದ್ದು, ಈಗ ಪ್ರವರ್ತಕರು ಶೇ 22.52 ರಷ್ಟು ಷೇರುಗಳನ್ನು ಸ್ವಯಂ ಪ್ರೇರಿತವಾಗಿ ಕೊಳ್ಳಲು ಮುಂದಾಗಿರುವುದು. ಮುಂದೆ ಕಂಪೆನಿಯನ್ನು ಡಿ- ಲೀಸ್ಟ್ ಮಾಡುವ ಉದ್ದೇಶವಿದೆಯೆ? ಕಾದು ನೋಡಬೇಕು.

ಹಿಂದೂಸ್ತಾನ್ ಯುನಿಲಿವರ್ ಕಂಪೆನಿಯ ಫಲಿತಾಂಶದ ಹಿಂದೆ ಅಡಕವಾಗಿರುವುದು ನಮ್ಮ ದೇಶದ ಅಪಾರ ಜನ ಸಂಪತ್ತಿನ ಬೆಂಬಲ ವಿಶ್ವದಾದ್ಯಂತ ಹೆಚ್ಚಿನ ದೇಶಗಳು ಆರ್ಥಿಕ ಒತ್ತಡವಿದ್ದು, ನಮ್ಮ ದೇಶದಲ್ಲಿಯೂ ಕಾರ್ಪೊರೇಟ್ ವಲಯ ಹಿಂಜರಿತದ ಗುಂಗಿನಲ್ಲಿರುವಾಗ, ಈ ಕಂಪೆನಿಯು ಅನಿರೀಕ್ಷಿತವಾದ ಮಟ್ಟದಲ್ಲಿ ಉತ್ತಮ ಫಲಿತಾಂಶ ಪ್ರಕಟಿಸಿರುವುದು ಈ ಕಾರಣದಿಂದಾಗಿ ಪ್ರವರ್ತಕ ಕಂಪೆನಿ ಶೇ 22.52ರ ಭಾಗಿತ್ವವನ್ನು ತೆರೆದ ಕರೆಗೆ ಮುಂದಾಗಿದ್ದು ಇಂದು ವಿದೇಶಿ ವಿನಿಮಯದ ಒಳಹರಿವಿಗೆ ದಾರಿಯಾಗಿದೆ. ಸ್ಥಳೀಯರು, ಜನಸಾಮಾನ್ಯರು ಆರ್ಥಿಕ ಸಬಲತೆ ಪಡೆದಾಗ ಕಾರ್ಪೊರೇಟ್ ವಲಯ ಸಂವೃದ್ಧವಾಗುತ್ತದೆ. ಸರ್ಕಾರದ ಮೇಲಿನ ಒತ್ತಡಗಳು ಕಡಿಮೆಯಾಗಿ ಆರ್ಥಿಕ ಸುವ್ಯವಸ್ಥೆಗೆ ದಾರಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.