ADVERTISEMENT

ಪೇಟೆಯಲ್ಲಿ ಸಟ್ಟಾ ವ್ಯಾಪಾರದ ಪ್ರಭಾವ

ಕೆ.ಜಿ ಕೃಪಾಲ್
Published 28 ಡಿಸೆಂಬರ್ 2014, 19:30 IST
Last Updated 28 ಡಿಸೆಂಬರ್ 2014, 19:30 IST

2014ರ ವರ್ಷಾಂತ್ಯದ ಕಾರಣ ಚಟು­ವಟಿ­ಕೆಯ ವ್ಯಾಪ್ತಿ ಕ್ಷೀಣಿತವಾಗಿದ್ದಲ್ಲದೆ, ಕ್ರಿಸ್‌ಮಸ್‌ ರಜೆಯ ಕಾರಣ ಕೇವಲ ನಾಲ್ಕು ದಿನಗಳ ವಹಿವಾಟಿನ ವಾರವಾಗಿದ್ದುದೂ ಸೇರಿ ಚಟುವಟಿಕೆಯು ನಿರುತ್ಸಾಹ­ಮಯವಾಗಿತ್ತು. ಅಗ್ರಮಾನ್ಯ ಕಂಪೆನಿಗಳು ಇಳಿಕೆಯತ್ತ  ತಿರುಗಿ­ದ್ದವು. ಬುಧವಾರದಂದು ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರದ ಕೊನೆಯ ದಿನವಾದ್ದರಿಂದ ಅಂದು ಪೇಟೆಗಳು ರೂ. 8.71 ಲಕ್ಷ ಕೋಟಿಯ ವಹಿವಾಟನ್ನು ದಾಖಲಿಸಿವೆ. ಇದರಲ್ಲಿ ಡೆಲಿವರಿ ಆಧಾರಿತ ವ್ಯವಹಾರದ ಅಂಶ ಅತ್ಯಲ್ಪವಾಗಿದೆ.

ಈ ವಾರದಲ್ಲಿ ಅಮೆರಿಕಾದ ಡೊಜೋನ್‌್ಸ ಪೇಟೆಯು ಪ್ರಥಮ ಬಾರಿಗೆ 18 ಸಾವಿರ ಅಂಶ­ಗಳನ್ನು ತಲುಪಿ ವಿಜೃಂಭಿಸಿದರೆ ಇದಕ್ಕೆ ವಿರುದ್ಧ­ವಾಗಿ ಅಂದು ಭಾರತೀಯ ಪೇಟೆಯ ಸಂವೇದಿ ಸೂಚ್ಯಂಕವು 298 ಅಂಶಗಳ ಕುಸಿತ ಕಂಡಿತು. ಸಾಮಾನ್ಯವಾಗಿ ಎಲ್ಲದಕ್ಕೂ ಪಾಶ್ಚಾತ್ಯ ಪೇಟೆ­ಗಳಲ್ಲಿನ ವಾತಾವರಣ ಅವಲಂಭಿಸಿ ಇಲ್ಲಿನ ಪೇಟೆಗಳು ಸ್ಪಂದಿಸುವುವು ಅದಕ್ಕೆ ವಿರುದ್ಧವಾದ ವಾತಾವರಣವು ಅತ್ಯಂತ ಹೆಚ್ಚಿನ ವಹಿವಾಟಿನ ಗಾತ್ರದೊಂದಿಗೆ ಕುಸಿತ ಕಂಡಿರುವುದು. ನಮ್ಮ ಪೇಟೆಗಳಲ್ಲಿನ ಸಟ್ಟಾ ವ್ಯಾಪಾರದ ಪ್ರಭಾವಕ್ಕೆ ಹಿಡಿದ ಕನ್ನಡಿಯಾಗಿದೆ.

ಸುಧಾರಣಾ ಕ್ರಮ
ಈ ವಾರದಲ್ಲಿ ಕೇಂದ್ರ ಸರ್ಕಾರವು ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮತ್ತು ಕಲ್ಲಿದ್ದಲು ನಿಕ್ಷೇಪಗಳ ಆಕ್ಷನ್‌ಗಾಗಿ ರಾಷ್ಟ್ರಪತಿ ಅಂಕಿತದೊಂದಿಗೆ ಆರ್ಡಿನನ್‌್ಸ ಮಾರ್ಗದಲ್ಲಿ ಜಾರಿಗೊಳಿಸಲು ಮುಂದಾ­ಗಿದೆ. ಆದರೂ ಈ ವಲಯಗಳ ಷೇರುಗಳಲ್ಲಿ ಉತ್ಸಾಹ ಕಂಡುಬರಲಿಲ್ಲ. ಬದಲಾಗಿ ಮ್ಯಾಕ್‌್ಸ ಇಂಡಿಯಾ ಪ್ರವರ್ತಕರು ತಮ್ಮ ಭಾಗಿತ್ವ­ವನ್ನು ಒತ್ತೆ ಇಟ್ಟಿರುವರೆಂಬ ಸುದ್ದಿಯು ಪ್ರಚಲಿತ­ವಾಗಿ ಸ್ವಲ್ಪಮಟ್ಟಿನ ಒತ್ತಡದಲ್ಲಿತ್ತು.

ರಿಲೈಯನ್‌್ಸ ಕ್ಯಾಪಿಟಲ್‌, ವಿದೇಶಿ ಬ್ಯಾಂಕ್‌ಗೆ ಆಧ್ಯತೆ ಷೇರು ವಿತರಿಸಲಿದೆ ಎಂಬ ಸುದ್ದಿಯು ಚುರುಕಾಗಿಸಿತು. ಒಟ್ಟಾರೆ ಸಂವೇದಿ ಸೂಚ್ಯಂಕವು 130 ಅಂಶಗಳ ಇಳಿಕೆ ಕಂಡಿದೆ. ಮಧ್ಯಮಶ್ರೇಣಿ ಸೂಚ್ಯಂಕ 115 ಅಂಶ ಏರಿಕೆ ಕಂಡು ಅಚ್ಚರಿ ಮೂಡಿಸಿದರೆ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 27 ಅಂಶ ಕುಸಿತ ಕಂಡಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ರೂ. 3548 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ.1831 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಪೇಟೆಯ ಬಂಡವಾಳ ಮೌಲ್ಯವು ರೂ. 96.75 ಲಕ್ಷ ಕೋಟಿಯಲ್ಲಿದೆ.

ಬಿಜಿಎಸ್‌ಇ ನಿರ್ಗಮನ
ನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರು ಷೇರು ವಿನಿಮಯ (ಬಿಜಿಎಸ್‌ಇ) ಕೇಂದ್ರವು, ಇತರೆ ಎಲ್ಲಾ ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳಂತೆ ನಿಶ್ಕ್ರಿಯ­ವಾಗಿದ್ದು, ಸೆಬಿಯ ನಿಯಮದಂತೆ ಒಂದು ಸಾವಿರ ಕೋಟಿ ರೂಪಾಯಿಗಳ ವಹಿವಾಟು ದಾಖಲಿಸಲು ಸಾಧ್ಯವಾಗದ ಕಾರಣ ನಿರ್ಗಮನ ಪ್ರಕ್ರಿಯೆಗೆ ಮುಂದಾಗಿದ್ದು ಇದಕ್ಕೆ ಸೆಬಿ ಅಂಗೀಕಾರ ನೀಡಿದೆ. ಆದರೆ ಬಿಜಿಎಸ್‌ಇಯ ಅಂಗಸಂಸ್ಥೆ, ಬಿಜಿಎಸ್‌ಇ ಫೈನಾನ್ಶಿಯಲ್‌ ಲಿ. ಮೂಲಕ ಎನ್‌ಎಸ್‌ಇ ಮತ್ತು ಬಿಎಸ್‌ಇಗಳಲ್ಲಿ ವಹಿವಾಟಿಗೆ ವೇದಿಕೆ ಒದಗಿಸಲಾಗಿದ್ದು ಅಲ್ಲಿ ನಡೆಯುವ ಗ್ರಾಹಕರ ಸೇವೆಗಳಾದ ಟ್ರೇಡಿಂಗ್‌, ಡಿ–ಮ್ಯಾಟ್‌ ಸೇವೆಗಳು, ಮುಂತಾದವು ನಿರಂತರವಾಗಿ ಮುಂದುವರೆ­ಯುವುವು.

ಬಿಜಿಎಸ್‌ಇ ಆರಂಭಿಸಿದ್ದ ಹೂಡಿಕೆದಾರರ ಜಾಗೃತ ಕಾರ್ಯಕ್ರಮವೂ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಅದರ ಅಂಗಸಂಸ್ಥೆ ಬಿಜಿಎಸ್‌ಇ ಫೈನಾನ್ಶಿಯಲ್‌್ಸ ಮುಂದುವರೆಸಿಕೊಂಡು ಸಾಗಿದೆ. ಬಿಜಿಎಸ್‌ಇಯ ಹೆಸರಲ್ಲಿ ಸ್ಟಾಕ್‌ ಎಕ್‌್ಸಚೇಂಜ್‌ ಎಂಬ ಹೆಸರಿಗೆ ಬದಲಾಗಿ ಬೇರೆ ಹೆಸರಲ್ಲಿ ಸಂಸ್ಥೆ ಮುಂದುವರೆಯಬಹುದಾಗಿದೆ.

ಬೋನಸ್‌
* ಸಾರ್ವಜನಿಕ ವಲಯದ ಎನ್‌ಟಿಪಿಸಿ ಕಂಪೆನಿ ತನ್ನ ಷೇರುದಾರರಿಗೆ 1:1ರ ಅನುಪಾತದ ರೂ.12.50ರ ಮುಖಬೆಲೆಯ ಅಪರಿವರ್ತನೀಯ ಡಿಬೆಂಚರ್‌ಗಳನ್ನು ಬೋನಸ್‌ ರೂಪದಲ್ಲಿ ವಿತರಿಸಲಿದೆ.

* ಗಾದ್ರೇಜ್‌ ಇಂಡಸ್ಟ್ರೀಸ್‌ ಕಂಪೆನಿ ಪ್ರತಿ 1,250 ಷೇರುಗಳಿಗೆ ಒಂದರಂತೆ ವಿತರಿಸಲಿರುವ ಬೋನಸ್‌ ಷೇರಿಗೆ ಜ. 6 ನಿಗದಿತ ದಿನವಾಗಿದೆ.

ಅಮಾನತು
ಟ್ವಿಲೈಟ್‌ ಲಿಟಾರ್‌ ಫಾರ್ಮಾ ಲಿ. ಕಂಪೆನಿಯು  ಉಚ್ಚ ನ್ಯಾಯಾಲಯದಿಂದ ಸಮಾಪನಗೊಳ್ಳಲು ಆದೇಶ ಪಡೆದಿರುವ ಕಾರಣ, ಹೂಡಿಕೆದಾರರ ಗೊಂದಲ ನಿವಾರಿಸಲು ಜನವರಿ 2 ರಿಂದ ಈ ಷೇರುಗಳನ್ನು ವಹಿವಾಟಿನಿಂದ ಅಮಾನತು­ಗೊಳಿಸಲಾಗಿದೆ.

ವಾರದ ವಿಶೇಷ
ರೂ. 8.71 ಲಕ್ಷ ಕೋಟಿ ದಾಖಲೆ ವಹಿವಾಟು

ಬುಧವಾರ ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರದ ಕಡೆಯ ದಿನವಾದ ಕಾರಣ ಅಂದು ಷೇರು ವಿನಿಮಯ ಕೇಂದ್ರಗಳ ವಹಿವಾಟು ರೂ. 8.71 ಲಕ್ಷ ಕೋಟಿಯಷ್ಟು ತಲುಪಿ ಹೊಸ ದಾಖಲೆ ನಿರ್ಮಿಸಿದೆ. ಆದರೆ ಇದರಲ್ಲಿ ಮೂಲಾಧಾರಿತ ಪೇಟೆಗಳದ್ದೇ ಸಿಂಹಪಾಲು. ಕ್ಯಾಶ್‌ ಪೇಟೆಯ ವಹಿವಾಟು ಅತ್ಯಂತ ಅಲ್ಪ ಪ್ರಮಾಣದ್ದಾಗಿದೆ. ಶುಕ್ರವಾರ ಹೊಸ ಚುಕ್ತಾ ಚಕ್ರದಲ್ಲಿ ವಹಿವಾಟಿನ ಗಾತ್ರ 1.42 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿದಿರುವುದು ಅಚ್ಚರಿ ಸಂಗತಿಯಾಗಿದೆ. ಈ ಅಂಶವು ಪೇಟೆಯಲ್ಲಿ ನಡೆಯುತ್ತಿರುವ ಸಟ್ಟಾ ಪೇಟೆಯ ಪ್ರಮಾಣವನ್ನು ತಿಳಿಸುತ್ತದೆ.

ಅತ್ಯಂತ ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸುತ್ತಿರುವ ಈಗಿನ ಪೇಟೆಗಳತ್ತ ಸಣ್ಣ ಹೂಡಿಕೆದಾರರನ್ನು ತಮ್ಮತ್ತ ಸೆಳೆಯಲು ಕೆಲವು ಬ್ರೋಕಿಂಗ್‌ ಸಂಸ್ಥೆಗಳು, ಗ್ರಾಹಕರಿಗೆ ಲಾಭ ಗಳಿಸಿದರೆ ಮಾತ್ರ ಬ್ರೋಕರೇಜ್‌ ಕೊಡಿ ಎಂಬ ಹೊಸ ಯೋಜನೆಯನ್ನು ರೂಪಿಸಿದ್ದಾರೆಂಬ ವರದಿಯು ಮಾಧ್ಯಮದಲ್ಲಿ ಪ್ರಚಾರ ಪಡೆದಿದ್ದು ಗಮನಾರ್ಹ ಅಂಶವಾಗಿದೆ. ಇದು ಬ್ರೋಕರೇಜ್‌ ಸಂಸ್ಥೆಗಳ ವಹಿವಾಟಿನ ಗಾತ್ರ ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಿದೆ.

ಆದರೆ ಸಹಜವಾಗಿ ಸಣ್ಣ ಹೂಡಿಕೆದಾರರಿಗೆ ಅಪಾಯದ ವಿಚಾರವಾಗಿರುತ್ತದೆ. ಬ್ರೋಕರೇಜ್‌ ಎಂಬುದು ಬ್ರೋಕರ್‌ ಒದಗಿಸಿದ ಸೇವೆಗಳಿಗೆ ನೀಡಬಹುದಾದ ಶುಲ್ಕವಾದರೂ, ಇದು ಸಣ್ಣ ಹೂಡಿಕೆ­ದಾರರು ತಮ್ಮ ಚಟುವಟಿಕೆಯನ್ನು ಅಡ್ಡಾದಿಡ್ಡಿ ನಡೆಸದೆ ಸರಿಯಾದ ಮಾರ್ಗದಲ್ಲಿ ನಡೆಸಲು ಸುರಕ್ಷಾ ವ್ಯವಸ್ಥೆಯೂ ಆಗಿರುತ್ತದೆ. ಹೂಡಿಕೆದಾರರು ನಡೆಸುವ ಚಟುವಟಿಕೆಗೆ ನೀಡಬಹುದಾದ ಬ್ರೋಕರೇಜ್‌ ಹೆಚ್ಚಾಗಿದ್ದರೆ ವಹಿವಾಟಿನ ಗಾತ್ರ ಮಿತಿಯಾಗಿರುತ್ತದೆ ಇದು ಸ್ವನಿಯಂತ್ರಣಕ್ಕೆ ಸುಗಮ ಹಾದಿಯಾಗುತ್ತದೆ.

ಬ್ರೋಕರೇಜ್‌ ಕಡಿಮೆ ಅಥವಾ ಇಲ್ಲವೆಂದಾದಲ್ಲಿ ಚಟುವಟಿಕೆಯ ಗಾತ್ರ, ಕಡಿವಾಣವಿಲ್ಲದೆ ಬೆಳೆಯುವು­ದರಿಂದ ಬ್ರೋಕರೇಜ್‌ ಉಳಿದರೂ ಬಂಡವಾಳವು ಅಪಾಯದ ಅಂಚಿನಲ್ಲಿರುವ ಸಾಧ್ಯತೆ ಇರುತ್ತದೆ. ಹಣಕಾಸು ಮಾರುಕಟ್ಟೆಯಲ್ಲಿ ನಡೆಯುವ ಡೆಲಿವರಿ ಆಧಾರಿತ ವ್ಯವಹಾರ ಕ್ಷೀಣಿತ­ವಾಗಿರುವುದರಿಂದ, ಹೆಚ್ಚಿನ ವ್ಯಾಪಾರ ಡೆರಿವೆಟಿವ್‌್ಸ ವಿಭಾಗದಲ್ಲಾಗುವುದರಿಂದ, ಬ್ರೋಕರ್‌ ಸಂಸ್ಥೆಗೆ ಅಪಾಯದ ಮಟ್ಟ ಕಡಿಮೆ ಹೂಡಿಕೆದಾರರಿಗೆ ಗಾತ್ರ ಹೆಚ್ಚಿಸಿಕೊಳ್ಳುವುದರಿಂದ ಬಂಡವಾಳವು ಅಸುರಕ್ಷಿತವೆನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT