ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು ಶುಕ್ರವಾರದ ಅಂತಿಮ ಕ್ಷಣಗಳಲ್ಲಿ 23,048 ಅಂಶಗಳನ್ನು ತಲುಪಿ ಹೊಸ ದಾಖಲೆ ನಿರ್ಮಿಸಿತು. ನಂತರ ದಿನದ ಅಂತ್ಯದಲ್ಲಿ ಸೂಚ್ಯಂಕ 22,994 ಅಂಶಗಳಿಗೆ ಬಂದಿತು. ಮೇ 16ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, 12 ರಿಂದ ಮತಗಟ್ಟೆ ಸಮೀಕ್ಷೆ ಹೊರಬರುವ ಕಾರಣ ಅತೀವ ಏರಿಳಿತಗಳು ಪ್ರದರ್ಶಿತವಾಗಲಿವೆ.
ಹಾಗಾಗಿ, ಹೂಡಿಕೆದಾರರು ಷೇರು ಖರೀದಿ, ಮಾರಾಟ ಚಟುವಟಿಕೆಯನ್ನು ಮಿತಗೊಳಿಸಿಕೊಳ್ಳಬೇಕು ಎಂದು ಹೆಚ್ಚಿನ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ, ಮೇ 16ರಂದು ಹಾಗೂ ನಂತರ ಉಂಟಾಗಬಹುದಾದ ಏರಿಳಿತಗಳನ್ನು ನಿಭಾಯಿಸಲು ನಿಯಂತ್ರಕರು ಹಾಗೂ ಷೇರು ವಿನಿಮಯ ಕೇಂದ್ರಗಳು ತಯಾರಿ ನಡೆಸಿವೆ. ಈ ಎಲ್ಲ ಹಿನ್ನೆಲೆಗಳಿಂದಾಗಿ ಶುಕ್ರವಾರ ದಿನದ ಆರಂಭದಿಂದಲೂ ಸಂವೇದಿ ಸೂಚ್ಯಂಕವು ಏಕಮುಖವಾಗಿ ಏರಿಕೆ ಕಂಡಿದ್ದುದು ಕಾಕತಾಳೀಯವೇ ಆಗಿರಬಹುದು. ಆದರೂ ಈ ಏರಿಕೆ ಗತಿ ನಿಯಂತ್ರಣ ವ್ಯವಸ್ಥೆಗೆ ಸವಾಲಾಗಿದೆ.
ಶುಕ್ರವಾರದ 650 ಅಂಶಗಳ ಏರಿಕೆಗೆ ಐಸಿಐಸಿಐ ಬ್ಯಾಂಕ್ ₨85ರ ಏರಿಕೆಯಿಂದ 290 ಅಂಶಗಳ ಕೊಡುಗೆ ನೀಡಿದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ₨38ರ ಏರಿಕೆಯೊಂದಿಗೆ 261 ಅಂಶಗಳ ಏರಿಕೆಗೆ ಕಾರಣವಾಗಿದೆ. ರಿಲಯನ್‌್ಸ ಇಂಡಸ್ಟ್ರೀಸ್ ₨37ರ ಏರಿಕೆಯಿಂದ 254 ಅಂಶಗಳ, ಎಚ್‌ಡಿಎಫ್‌ಡಿ 239 ಅಂಶ, ಲಾರ್ಸನ್ ಅಂಡ್ ಟೋಬ್ರೊ 218 ಅಂಶ, ಒಎನ್‌ಜಿಸಿ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಕ್ರಮವಾಗಿ 211 ಮತ್ತು 208 ಅಂಶಗಳ ಏರಿಕೆ ಕೊಡುಗೆ ನೀಡಿವೆ. ಏಳು ಕಂಪೆನಿಗಳು ಇಂತಹ ಬೃಹತ್ ಏರಿಕೆಗೆ ಕಾರಣವಾಗಿವೆ. ಸನ್‌ಫಾರ್ಮಾ, ಟಿಸಿಎಸ್ ಮತ್ತು ಡಾಕ್ಟರ್ ರೆಡ್ಡಿ ಲ್ಯಾಬ್ ಷೇರುಗಳು 174ರಿಂದ 176 ಅಂಶಗಳಷ್ಟು ಕುಸಿದ ಕಾರಣ ಸಂವೇದಿ ಸೂಚ್ಯಂಕವು ಒಟ್ಟಾರೆಯಾಗಿ 650 ಅಂಶಗಳ ಏರಿಕೆಗೆ ಸೀಮಿತವಾಯಿತು. ಇದು ಸಂವೇದಿ ಸೂಚ್ಯಂಕದ ಸ್ಥಿತಿಯಾದರೆ, ಬ್ಯಾಂಕಿಂಗ್ ವಲಯದ ಬ್ಯಾಂಕೆಕ್‌್ಸ ಸೂಚ್ಯಂಕವು ಭರ್ಜರಿ 796 ಅಂಶಗಳ ಏರಿಕೆಯೊಂದಿಗೆ 15,721ರಲ್ಲಿ ಕೊನೆಗೊಂಡಿತು. ಮಧ್ಯಾಂತರದಲ್ಲಿ ಇದು 15,801 ಅಂಶಗಳಷ್ಟು ವಾರ್ಷಿಕ ಗರಿಷ್ಠ ಮಟ್ಟವನ್ನು ದಾಖಲಿಸಿದೆ. ಇದು ಈವರೆಗಿನ ಗರಿಷ್ಠ ದಾಖಲೆಯೂ ಆಗಿದೆ.
ಕಳೆದ ಆಗಸ್‌್ಟ 28ರಂದು ಬಿಎಸ್‌ಇ ಬ್ಯಾಂಕೆಕ್‌್ಸ ವಾರ್ಷಿಕ ಕನಿಷ್ಠ ಮಟ್ಟವಾದ 9,535 ಅಂಶಗಳಲ್ಲಿತ್ತು. ಇದು ಪೇಟೆಯ ರಭಸದ ಏರಿಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಹಿಂದೆ 2004ರ ಚುನಾವಣೆಯ ಸಮಯದಲ್ಲಿ ಫಲಿತಾಂಶದ ನಂತರ ಸಂವೇದಿ ಸೂಚ್ಯಂಕವು ಶೇ 16ರಷ್ಟು ಇಳಿಕೆ ಕಂಡಿದ್ದರೆ, 2009ರ ಚುನಾವಣಾ ಸಂದರ್ಭದಲ್ಲಿ ಶೇ 17ರಷ್ಟು ಏರಿಕೆ ಕಂಡಿತ್ತು. ಹಾಗಾಗಿ ಈ ಭಾರಿಯೂ ಚುನಾವಣೆ ಫಲಿತಾಂಶ ಘೋಷಣೆ ನಂತರ ಹೆಚ್ಚಿನ ಏರಿಳಿತದ ನಿರೀಕ್ಷೆ ಇದೆ.
ಆದರೆ ಫಲಿತಾಂಶಕ್ಕೂ ಮುಂಚಿನ ಈ ದಿನಗಳಲ್ಲಿ ಏರಿಕೆ ಕಾಣುತ್ತಿರುವುದನ್ನು ನೋಡಿದರೆ ಫಲಿತಾಂಶ ಘೋಷಣೆ ಸಮಯದಲ್ಲಿ ಸಮತೋಲದಲ್ಲಿದ್ದರೂ ಆಶ್ಚರ್ಯವೇನಿಲ್ಲ.
ವಾರದಲ್ಲಿ ಒಟ್ಟಾರೆ ಸಂವೇದಿ ಸೂಚ್ಯಂಕದಲ್ಲಿ 590 ಅಂಶಗಳ ಏರಿಕೆ ಕಂಡಿದ್ದರೆ, ಮಧ್ಯಮ ಶ್ರೇಣಿ ಸೂಚ್ಯಂಕ 88 ಅಂಶ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 60 ಅಂಶ ಏರಿಕೆ ಕಂಡಿದೆ. ಶುಕ್ರವಾರ ವಿದೇಶಿ ವಿತ್ತೀಯ ಸಂಸ್ಥೆಗಳ ₨1,268 ಕೋಟಿ ಹೂಡಿಕೆಯಿಂದ ಒಟ್ಟು ವಾರದಲ್ಲಿ ₨2,076 ಕೋಟಿ ಹೂಡಿಕೆ ಮಾಡಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ₨734 ಕೋಟಿ ಷೇರುಗಳನ್ನು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ₨75.08 ಲಕ್ಷ ಕೋಟಿಯಿಂದ ₨76.42 ಲಕ್ಷ ಕೋಟಿಗೆ ಏರಿಕೆ ಕಂಡಿದೆ.
ಲಾಭಾಂಶ
ಪೀರಮಲ್ ಎಂಟರ್‌ಪ್ರೈಸಸ್ ಪ್ರತಿ ಷೇರಿಗೆ ₨52.50, ಅಜಂತಾ ಪಾರ್ಮಾ ಪ್ರತಿ ಷೇರಿಗೆ ₨10 (ಮುಖಬೆಲೆ ₨5), ಬಿರ್ಲಾ ಕಾರ್ಪ್ ಪ್ರತಿ ಷೇರಿಗೆ ₨6, ‘ಸೆಂಚುರಿ ಎಂಕಾ’ ಪ್ರತಿ ಷೇರಿಗೆ ₨6, ಇಮಾಮಿ ಪ್ರತಿ ಷೇರಿಗೆ ₨4 (ಮು.ಬೆ. ₨1), ಎಚ್‌ಡಿಎಫ್‌ಸಿ ಪ್ರತಿ ಷೇರಿಗೆ ₨14 (ಮು.ಬೆ. ₨2), ಕೆನರಾ ಬ್ಯಾಂಕ್ ಪ್ರತಿ ಷೇರಿಗೆ ₨4.50, ಹಿಕಾಲ್ ಪ್ರತಿ ಷೇರಿಗೆ ₨4.50, ಜಿ.ಐ.ಸಿ ಹೌಸಿಂಗ್ ಪ್ರತಿ ಷೇರಿಗೆ ₨6, ಜಿ.ಇ. ಶಿಪ್ಪಿಂಗ್ ಪ್ರತಿ ಷೇರಿಗೆ ₨5, ಪನಾಸೋನಿಕ್ ಕಾರ್ಬನ್ ಪ್ರತಿ ಷೇರಿಗೆ ₨7, ಹಿಂದೂಸ್ಥಾನ್ ಮಿಲ್‌್ಸ ಪ್ರತಿ ಷೇರಿಗೆ ₨10, ಇಂಡೊನ್ಯಾಷನಲ್ ಪ್ರತಿ ಷೇರಿಗೆ ₨20, ಸೆಂಚುರಿ ಟೆಕ್‌್ಸಟೈಲ್ ಪ್ರತಿ ಷೇರಿಗೆ ₨5.50, ಮಹೀಂದ್ರಾ ಹಾಲಿಡೇಸ್ ಅಂಡ್ ರಿಸಾರ್ಟ್‌್ಸ ಪ್ರತಿ ಷೇರಿಗೆ ₨4, ಕಜಾರಿಯಾ ಸೆರಾಮಿಕ್‌್ಸ ಪ್ರತಿ ಷೇರಿಗೆ ₨3.50 (ಮು.ಬೆ. ₨2), ಲುಪಿನ್ ಪ್ರತಿ ಷೇರಿಗೆ ₨3 (ಮು.ಬೆ. ₨2), ಪ್ರೀಮಿಯರ್ ಪ್ರತಿ ಷೇರಿಗೆ ₨3, ವೊಲ್ಟಾಂಪ್ ಟ್ರಾನ್‌್ಸಫಾರ್ಮರ್‌್ಸ ಪ್ರತಿ ಷೇರಿಗೆ ₨10, ನ್ಯೂಕ್ಲಿಯಸ್ ಸಾಫ್‌್ಟವೇರ್ ಎಕ್‌್ಸಪೋರ್ಟ್‌್ಸ ಪ್ರತಿ ಷೇರಿಗೆ ₨3, ಸಿಂಡಿಕೇಟ್ ಬ್ಯಾಂಕ್ ಪ್ರತಿ ಷೇರಿಗೆ ₨3, ಇಂಗರ್‌ಸಾಲ್ ರ್‍ಯಾಂಡ್ ಪ್ರತಿ ಷೇರಿಗೆ ₨3, ಝುವಾರಿ ಆಗ್ರೊ ಕೆಂ. ಪ್ರತಿ ಷೇರಿಗೆ ₨3, ಟೊರೆಂಟ್ ಫಾರ್ಮ ಪ್ರತಿ ಷೇರಿಗೆ ₨5 (ಮು.ಬೆ. ₨ 5) ಬ್ಲೂಡಾರ್ಟ್ ಎಕ್‌್ಸಪ್ರೆಸ್ ಪ್ರತಿ ಷೇರಿಗೆ ₨15, ಗ್ಲಾಕ್ಸೊ ಸ್ಮಿತ್‌ಕ್ಲೈನ್ ಕನ್ಸೂಮರ್ಸ್ ಪ್ರತಿ ಷೇರಿಗೆ ₨45, ಎನ್‌ಐಐಟಿ ಟೆಕ್ ಪ್ರತಿ ಷೇರಿಗೆ ₨9, ಚೇವಿಯಟ್ ಪ್ರತಿ ಷೇರಿಗೆ ₨15 ಅಧಿಕ ಲಾಭಾಂಶ ಘೋಷಿಸಿದ ಕಂಪೆನಿಗಳಾಗಿವೆ.
ಹೊಸ ಷೇರು
*ವಂಡರ್‌ಲಾ ಹಾಲಿಡೇಸ್ ಲಿ. ಕಂಪೆನಿ ಇತ್ತೀಚೆಗೆ ಪ್ರತಿ ಷೇರಿಗೆ ₨125 ರಂತೆ ಸಾರ್ವಜನಿಕ ವಿತರಣೆ ಮಾಡಿದೆ. ಮೇ 9ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ‘ಟಿ’ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
*ಕೊಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿದ್ದ ಹೈದರಾಬಾದ್‌ನ ರೆಸ್ಪಾನ್‌್ಸ ಇನ್ಫಾರ್ಮೆಟಿಕ್‌್ಸ ಲಿ. ಕಂಪೆನಿಯ ಷೇರುಗಳು ಇದೇ 12ರಿಂದ ಬಿಎಸ್‌ಇಯ ‘ಟಿ’ ಗುಂಪಿನಲ್ಲಿ ಬಿಡುಗಡೆಯಾಗಲಿವೆ.
ಬೋನಸ್ ಷೇರು
ಜಿ.ಎಂ. ಬ್ರ್ಯುವರೀಸ್ ಲಿ. ಕಂಪೆನಿ ವಿತರಿಸಲಿರುವ 1:4ರ ಅನುಪಾತದ ಬೋನಸ್ ಷೇರಿಗೆ ಮೇ 20 ನಿಗದಿತ ದಿನವಾಗಿ ಪ್ರಕಟಿಸಲಾಗಿದೆ.
ಬಂಡವಾಳ ಕಡಿತ
ನಾತ್ ಪಲ್ಸ್ ಅಂಡ್ ಪೇಪರ್ ಮಿಲ್ಸ್ ಲಿ.ನಲ್ಲಿ ಪ್ರವರ್ತಕರು ಶೇ 16.88ರಷ್ಟು ಪಾಲುದಾರಿಕೆ ಹೊಂದಿದ್ದಾರೆ. ಉಳಿದ ಶೇ 83.12ರಷ್ಟು ಷೇರುಪಾಲನ್ನು ಸಾರ್ವಜನಿಕರು, ವಿತ್ತೀಯ ಸಂಸ್ಥೆಗಳು ಹೊಂದಿವೆ. ಈಗ ಕಂಪೆನಿಯ ಬಂಡವಾಳವನ್ನು ಶೇ 95ರಷ್ಟು ಕಡಿತ ಮಾಡುವುದರೊಂದಿಗೆ ಷೇರಿನ ಈಗಿನ ಮುಖಬೆಲೆ ₨10ರಿಂದ 50 ಪೈಸೆಗೆ ಕಡಿತವಾಗಿದೆ. ನಂತರ ಹೊಸ ರೂಪದ 20 ಷೇರುಗಳನ್ನು ಕ್ರೋಢೀಕರಿಸಿ ಒಂದು ಷೇರು ನೀಡಲಾಗುವುದು. ಅಂದರೆ ಈಗಿನ 100 ಷೇರುಗಳಿಗೆ, ನಿಗದಿತ ದಿನ ಮೇ 12ರ ನಂತರ ಅದು 20 ಷೇರುಗಳಿಗೆ ಇಳಿಕೆಯಾಗುವುದು.
ಹಕ್ಕಿನ ಷೇರು
*ಎವರಾನ್ ಎಜುಕೇಷನ್ ಲಿ. ಕಂಪೆನಿ ಮೇ 15ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.
*ವಿಂಟ್ಯಾಕ್ ಲಿ. ₨35 ಕೋಟಿಗಳಷ್ಟು ಮೌಲ್ಯದ ಹಕ್ಕಿನ ಷೇರುಗಳನ್ನು ವಿತರಣೆ ಮಾಡಲಿದೆ. ವಿತರಣೆಯ ಅನುಪಾತ, ದರ ಮೊದಲಾದ ಅಂಶಗಳನ್ನು ಇನ್ನಷ್ಟೇ ನಿರ್ಧರಿಸಬೇಕಾಗಿದೆ.
ಮುಖ ಬೆಲೆ ಸೀಳಿಕೆ
ಆಲೈಲ್ ಅಮೈಸ್ ಲಿ. ಇದೇ 15ರಂದು ಮುಖಬೆಲೆ ಸೀಳಿಕೆ ವಿಚಾರ ಪರಿಶೀಲಿಸಲಿದೆ.
ವಾರದ ವಿಶೇಷ
‘ಐಪಿಒ’ಗಳಿಲ್ಲದೆ ಹೂಡಿಕೆದಾರರಲ್ಲಿ ಆಸಕ್ತಿ ಕ್ಷೀಣ
ಹೊಸ ಕಾರುಗಳ ಉತ್ಪಾದನೆಯು ಸ್ಥಗಿತಗೊಂಡು, ಕೇವಲ ಪೂರ್ವ ಮಾಲಿಕತ್ವದ ಕಾರುಗಳು (Used Cars) ಮಾತ್ರ ಲಭ್ಯವಿದ್ದಲ್ಲಿ ಕಾರುಗಳನ್ನು ಖರೀದಿಸುವ ಅಥವಾ ಹೊಂದುವ ಭಾವನೆಯು ಕ್ಷೀಣವಾಗುತ್ತದೆ. ಪೇಟೆಯು ಸೀಮಿತವಾಗಿರುತ್ತದೆ. ಅದೇ ರೀತಿ ಇಂದಿನ ಷೇರುಪೇಟೆ ಕಳಾಹೀನವಾಗಿರಲು ಕಾರಣ, ಹೊಸ ಆರಂಭಿಕ ಷೇರು ವಿತರಣೆ (ಐ.ಪಿ.ಒ) ಇಲ್ಲದೇ ಇರುವುದು ಪ್ರಮುಖವಾಗಿದೆ.
ಹೊಸ ಷೇರುಗಳು ವಿತರಣೆಯಾಗಿರದ ಕಾರಣ ಹೂಡಿಕೆದಾರರ ಒಂದು ಸಮೂಹ ಪೇಟೆಯಿಂದ ದೂರಸರಿದಿದೆ. ಪೇಟೆಯಲ್ಲಿ 2008ರಲ್ಲಿ ಹೆಚ್ಚಿನವರು ಅಂದಿನ ಪೇಟೆಯ ಚಟುವಟಿಕೆಯ ಪರಿಯನ್ನು ಆಧರಿಸಿ ಇನ್ನು ಏರಿಕೆ ಕಾಣಬಹುದೆಂಬ ಆಸೆಯಿಂದ ಮಧ್ಯಮ ಮತ್ತು ಕೆಳಮಧ್ಯಮ ವಲಯದ ಷೇರುಗಳನ್ನು ಖರೀದಿಸಿದ್ದರು. ಖರೀದಿಸಿದ ಬೆಲೆಗೂ ಕೂಡ ಆ ಷೇರಿನ ಈಗಿನ ಮೌಲ್ಯ ತಲುಪದೇ ಇರುವುದರಿಂದ ಐಪಿಒ ಆಸಕ್ತಿಯ ಹೂಡಿಕೆದಾರರ ಸಮೂಹ ಬೇಸರಗೊಂಡು ಷೇರುಪೇಟೆಯಿಂದ ಹಿಂದೆ ಸರಿದಿದೆ. ಮತ್ತೊಂದು ವರ್ಗದ ಅಂದರೆ ನ್ಯಾಷನಲ್ ಸ್ಪಾಟ್ ಎಕ್ಸ್ ಚೇಂಜ್‌ನ, ಇ ಸೀರಿಸ್ ಹೂಡಿಕೆದಾರರು ‘ಎನ್.ಎಸ್.ಇ.ಎಲ್’ ಮೂಲಕ ಇ ಗೋಲ್ಡ್, ಇ ಸಿಲ್ವರ್ ಮೊದಲಾದವುಗಳಲ್ಲಿ ಹೂಡಿಕೆ ಮಾಡಿ ಹಣವನ್ನು ನಿಷ್ಕ್ರಿಯಗೊಳಿಸಿಕೊಂಡಿರುವುದು ಸಹ ಪೇಟೆಯಲ್ಲಿ ಸಣ್ಣ ಹೂಡಿಕೆದಾರರ ಕೊರತೆಗೆ ಕಾರಣವಾಗಿದೆ.
ಷೇರುಪೇಟೆಯ ಸಂವೇದಿ ಸೂಚ್ಯಂಕ, ಬ್ಯಾಂಕೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿ ವಿಜೃಂಭಿಸುತ್ತಿವೆ. ಆದರೆ 2010 ರಲ್ಲಿ ಪ್ರತಿ ಷೇರಿಗೆ ₨355ರಂತೆ ವಿತರಣೆ ಮಾಡಿದ ಟೆಕ್‌ಪ್ರೊ ಸಿಸ್ಟಮ್ಸ್ ಈಗ ₨13ರ ಸಮೀಪ ವಹಿವಾಟಾಗುತ್ತಿದೆ. ಇದಕ್ಕೆ ಆಗ 415ರ ರೇಟಿಂಗ್ ನೀಡಲಾಗಿತ್ತು.
2011 ರಲ್ಲಿ ಸಾರ್ವಜನಿಕ ವಿತರಣೆ ಮಾಡಿದ ತಕ್ಷಿಲ್ ಸೊಲೂಷನ್ಸ್ (ಪ್ರತಿ ಷೇರಿಗೆ ₨ 155 ರಂತೆ ವಿತರಿಸಿದ್ದು) ಈಗ ₨3ರ ಸಮೀಪವಿದೆ. ಹಾಗೆಯೇ ₨36 ರಂತೆ ವಿತರಿಸಿದ ಎನ್‌ಎಚ್‌ಪಿಸಿ ₨19ರ ಸಮೀಪ ವಹಿವಾಟಾಗುತ್ತಿವೆ. ಶಿಪ್ಲಿಂಗ್ ಕಾರ್ಪೊರೇಷನ್ ಷೇರು ₨140ರಲ್ಲಿ ವಿತರಿಸಿದ್ದು ಈಗ ₨40ರ ಸಮೀಪ ವಹಿವಾಟಾಗುತ್ತಿದೆ. ಮೈಕ್ರೊಸೆಕ್ ಫೈನಾನ್ಷಿಯಲ್‌್ಸ, ತಿರುಪತಿ ಇಂಕ್ಸ್, ರಾಮ್‌ಕಿ ಇನ್‌ಫ್ರಾಸ್ಟ್ರಕ್ಚರ್, ಎಸ್‌ಕೆಎಸ್ ಮೈಕ್ರೊ ಮುಂತಾದ ಅನೇಕ ಕಂಪೆನಿಗಳು ಹೂಡಿಕೆದಾರರ ಬಂಡವಾಳವನ್ನು ಕರಗಿಸಿರುವುದರಿಂದ ಪೇಟೆಯಲ್ಲಿ ಸಣ್ಣ ಹೂಡಿಕೆದಾರರ ಕೊರತೆ ಕಾಣಬರುತ್ತಿದೆ.
ಪ್ರವರ್ತಕರ ಹಣದ ದಾಹ, ಮರ್ಚಂಟ್ ಬ್ಯಾಂಕರ್‍್ಸಗಳ ಅಪಕ್ವ ಆಲೋಚನೆಗಳೇ ಇಂದಿನ ಪೇಟೆಯ ದುರವಸ್ತೆಗೆ ಕಾರಣವಾಗಿವೆ. ಈ ನ್ಯೂನತೆಗಳನ್ನು ಸರಿಪಡಿಸಿ ಆರಂಭಿಕ ಷೇರು ವಿತರಣೆ ಮೂಲಕ ಷೇರುಪೇಟೆಯನ್ನು ಹೂಡಿಕೆದಾರರ ಸ್ನೇಹಿಯನ್ನಾಗಿಸುವವರೆಗೂ ಪೇಟೆ ಚೇತರಿಕೆ ಸಹಜವಾಗಿ ಇರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.