ADVERTISEMENT

₨ 107 ಲಕ್ಷ ಕೋಟಿ ಬಂಡವಾಳ

ಕೆ.ಜಿ ಕೃಪಾಲ್
Published 22 ಮಾರ್ಚ್ 2015, 19:30 IST
Last Updated 22 ಮಾರ್ಚ್ 2015, 19:30 IST

ವರ್ಷಾಂತ್ಯವು ಸಮೀಪಿಸುತ್ತಿರುವ ಈ ಸಮಯದಲ್ಲಿ  ವಹಿವಾಟುದಾರರ ಆಸಕ್ತಿ ಕ್ಷೀಣಿಸುತ್ತಿದ್ದು ವಿತ್ತೀಯ ಸಂಸ್ಥೆಗಳ ಗಜಗಾತ್ರದ ವಹಿವಾಟು, ನಿಶ್ಚೇಷ್ಟಿತವಾದ ಕಂಪನಿಗಳು ಸಹ ವಹಿವಾಟಿನಲ್ಲಿ ಭಾಗವಹಿಸಿ ವಹಿವಾಟು ಗಾತ್ರವನ್ನು ಹೆಚ್ಚಿಸುತ್ತಿವೆ.
ವಹಿವಾಟಿನ ಗಾತ್ರವು ಹೆಚ್ಚುತ್ತಿದ್ದು ಷೇರಿನ ಬೆಲೆಗಳು ಮಾತ್ರ ಇಳಿಕೆ ಕಾಣುತ್ತಿವೆ.

ಇತ್ತೀಚಿನ ದಿನಗಳಲ್ಲಿ ಬರುತ್ತಿದ್ದ ಸೆಕ್ಯುಲಾರ್ ಬುಲ್ ರನ್, ಮಲ್ಟಿ ಇಯರ್ ಬುಲ್ ರನ್  ಮುಂತಾದ ವರ್ಣರಂಜಿತ ವರ್ಣನೆಗಳು ಎಷ್ಟು ಸಹಜ ಎಂಬ ಭಾವನೆಗಳು ಮೂಡುವುದು ಸಹಜ.  ಆದರೆ ಈ ರೀತಿಯ ಚಿಂತನೆಗಳಿಗೆ ಮಾರು ಹೋಗುವ ಮುನ್ನ ವರ್ತಮಾನ ಪರಿಸ್ತಿತಿಯನ್ನೂ ಸಹ ಪರಿಗಣಿಸಿ ನಿರ್ಧರಿಸಿದಲ್ಲಿ ಉತ್ತಮವಾದ ಫಲಿತಾಂಶಗಳು ಒದಗಿ ಬರುವುದು ಸಾಧ್ಯ.

ಹೂಡಿಕೆಗೆ ಮುನ್ನ ವರ್ತಮಾನದಲ್ಲಿನ ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸುವುದು ಅತ್ಯವಶ್ಯಕ.

ಈ ವಾರ ಜಿಂದಾಲ್ ಸ್ಟೀಲ್  ಅಂಡ್ ಪವರ್ ಕಂಪೆನಿಯು ಒಂದೇ ದಿನ ₨187 ರಿಂದ ₨156 ರ ವರೆಗೂ ಕುಸಿದು ನಂತರ ₨174 ರ ಹಂತಕ್ಕೆ ಪುಟಿದೆದ್ದಿತು. ಎಸ್‌. ಡಿ. ಅಲ್ಯುಮಿನಿಯಂ  ಕಂಪೆನಿಯು  ಕಳೆದ ಒಂದು ವರ್ಷದಲ್ಲಿ  ₨700 ರಿಂದ ₨125 ರ ವರೆಗೂ ಸತತವಾಗಿ ಇಳಿಕೆ ಕಂಡಿದೆ.

ಈ ವಾರದಲ್ಲಿ ₨176ರಿಂದ ₨125 ರವರೆಗೂ ಕುಸಿದು ₨154ಕ್ಕೆ ಏರಿಕೆ ಕಂಡು ₨139 ರ ಸಮೀಪ ಕೊನೆ
ಗೊಂಡಿದೆ. ಸನ್ ಫಾರ್ಮ ಅಡ್ವಾನ್ಸ್ಡ್ ರಿಸರ್ಚ್ ಕಂಪನಿಯು ಶುಕ್ರವಾರದಂದು ₨545 ರಿಂದ ₨449 ಕ್ಕೆ ಕುಸಿದು ₨465 ರ ಸಮೀಪಕ್ಕೆ ಕೊನೆಗೊಂಡಿತು.

ಇಂತಹ ತ್ವರಿತ, ಹರಿತ ಏರಿಳಿತಗಳ ಹಿಂದೆ ಕೇವಲ ಬೇಡಿಕೆ ಮತ್ತು ಪೂರೈಕೆಗಳ ಪ್ರಭಾವವೇ ಇರುತ್ತದೆಯೇ ಹೊರತು ಆಂತರಿಕವಾಗಿ

ವಾರದ ವಿಶೇಷ
ಗ್ರನ್ಯೂಲ್ಸ್ ಇಂಡಿಯಾ, ವೋಕಾರ್ಡ್ ಕಂಪೆನಿಗಳಲ್ಲಿ ಪರಿಶೀಲನೆ ನಡೆಸಿದ ಅಮೇರಿಕಾದ ಎಫ್.ಡಿ.ಎ. ಯು ಯಾವುದೇ ಲೋಪಗಳನ್ನು ಕಾಣದೆ, ಎಲ್ಲವೂ ಸುಸೂತ್ರವಾಗಿದೆ ಎಂಬ ಕಾರಣವು ಈ ಕಂಪೆನಿಗಳ ಷೇರುಗಳು ಗಗನಕ್ಕೆ ಚಿಮ್ಮಿದವು.
ಎರಡು ವರ್ಷಗಳ ಹಿಂದೆ ವೋಕಾರ್ಡ್ ಕಂಪೆನಿಯು ಎಫ್.ಡಿ.ಎ. ವೀಕ್ಷಣೆ ಕಾರಣ ₨2 ಸಾವಿರದವರೆಗೂ  ಹೆಚ್ಚಿದ್ದ ಷೇರಿನ ಬೆಲೆಯುು ಮುನ್ನೂರರೊಳಗೆ ಕುಸಿದಿದ್ದು ಈಗ ಅದೇ ಕಾರಣವು ಷೇರಿನ ಬೆಲೆಯನ್ನು ಮತ್ತೆ ₨2 ಸಾವಿರದ ಸಮೀಪಕ್ಕೆ ಕೊಂಡೊಯ್ದಿದೆ. 
ಹಾಗೆಯೆ ಹಿಂದೆ ಅರಬಿಂದೋ ಫಾರ್ಮಾ ಕಂಪೆನಿಯು ಸಹ ಯು.ಎಸ್. ಎಫ್.ಡಿ.ಎ  ಪ್ರಭಾವಕ್ಕೊಳಗಾಗಿ ಕಂಡ ಕುಸಿತದಿಂದ ಚೇತರಿಸಿಕೊಳ್ಳಲು ಸುಮಾರು ಎರಡುವರ್ಷ ಸಮಯ ಬೇಕಾಯಿತು. ಲುಪಿನ್ ಕಂಪೆನಿಯ ಉತ್ಪನ್ನಕ್ಕೆ  ಯು.ಎಸ್. ಎಫ್.ಡಿ.ಎ ಅನುಮತಿ ದೊರೆತಿದೆ ಎಂಬ ಕಾರಣಕ್ಕಾಗಿ ಗುರುವಾರದಂದು ಷೇರಿನ ಬೆಲೆಯು ಸುಮಾರು ₨75ರವರೆಗೂ ಏರಿಳಿತಕ್ಕೊಳಪಟ್ಟಿತು.
ಈ ರೀತಿಯ ಏರಿಳಿತಗಳ ಹಿಂದೆ ಯು ಎಸ್ ಎಫ್.ಡಿ.ಎ  ಪ್ರಭಾವವಿದೆ ಎಂದು ಅನಿಸಿದೆ ವಾಸ್ತವವಾಗಿ ವೋಕಾರ್ಡ್ ಕಂಪೆನಿಯು ಮೂಲಾಧಾರಿತ ಪೇಟೆಯಲ್ಲಿ ನಿಶೇದಕ್ಕೊಳಪಟ್ಟಿದ್ದು ಗುರುವಾರದಂದು ವಾರ್ಷಿಕ ಗರಿಷ್ಟಕ್ಕೆ ತಲುಪಿದೆ. ಈ ರೀತಿಯ ಬೆಳವಣಿಗೆಗಳನ್ನು ಸಹ ಗಮನಿಸಿದಲ್ಲಿ ನಿರ್ವಹಣೆ ಸುಸೂತ್ರವಾಗುತ್ತದೆ.

ಅಥವಾ ಕಂಪನಿಗೆ ಸಂಬಂಧಿತ ಬೆಳವಣಿಗೆಗಳಂತೂ ಅಲ್ಲ. ಕಂಪನಿಯು ಉತ್ತಮವೇ ಇರಬಹುದು. ಆದರೆ ಪೇಟೆ ನೋಡುವ ದೃಷ್ಟಿಯೇ ಬೇರೆ ರೀತಿ. ಹಾಗಾಗಿ ವ್ಯಾಲ್ಯೂ ಪಿಕ್‌ಗೆ ಹತ್ತಾರು ಅವಕಾಶ ಗಳನ್ನು ಒದಗಿಸುವುದರೊಂದಿಗೆ ಅದಕ್ಕೂ ಹೆಚ್ಚಿನ ಪ್ರಾಫಿಟ್ ಬುಕಿಂಗ್‌ಗ ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ  ದಿನ ನಿತ್ಯ ಸಂವೇದಿ ಸೂಚ್ಯಂಕ  ನಾಲ್ಕೈದು  ನೂರು ಅಂಶಗಳಷ್ಟು ಏರಿಳಿತ ಪ್ರದರ್ಶಿಸುತ್ತಿರುವುದು  ಪೂರಕ ಅಂಶವಾಗಿದೆ.

ಒಟ್ಟಾರೆ ಹಿಂದಿನ ವಾರ 242 ಅಂಶಗಳ ಇಳಿಕೆ ದಾಖಲಿಸಿದರೆ, ಮದ್ಯಮ ಶ್ರೇಣ ಸೂಚ್ಯಂಕ 169 ಅಂಶಗಳ, ಕೆಳ ಮದ್ಯಮ ಶ್ರೇಣಿ ಸೂಚ್ಯಂಕ  349 ಅಂಶಗಳ ಇಳಿಕೆ ಕಂಡಿದೆ.

ವಿದೇಶಿ ವಿತ್ತೀಯ ಸಂಸ್ಥೆಗಳು ₨828 ಕೋಟಿ ಮೌಲ್ಯದ ಷೇರು ಖರೀದಿ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ₨1,133ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಗಜಗಾತ್ರದ ವಹಿವಾಟಿನ ಕಾರಣ ಪೇಟೆಯ ಬಂಡವಾಳ ಮೌಲ್ಯವು ಗುರುವಾರದಂದು ₨107 ಲಕ್ಷ ಕೋಟಿ ಮೀರಿ ಸರ್ವಕಾಲೀನ ದಾಖಲೆ ಮಟ್ಟಕ್ಕೆ ತಲುಪಿತು.

ಹೊಸ ಷೇರು
* ನೀಲ್ ಇಂಡಸ್ಟ್ರೀಸ್  ಕಂಪೆನಿ ಕಲ್ಕತ್ತಾ ಮತ್ತು ಯು ಪಿ ಷೇರು ವಿನಮಯ ಕೇಂದ್ರಗಳಲ್ಲಿ ವಹಿವಾಟಾ
ಗುತ್ತಿರುವ ಕಂಪೆನಿಯಾಗಿದ್ದು ಮಾರ್ಚ್ 20 ರಿಂದ ಡಿ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
* ಚೆನ್ನೈ ಫೆರ್ರೋಸ್ ಇಂಡಸ್ಟ್ರೀಸ್ ಕಂಪೆನಿಯು ಕನಿಷ್ಕ್ ಸ್ಟೀಲ್  ಇಂಡಸ್ಟ್ರೀಸ್ ನ ಸ್ಪಾಂಜ್ ಐರನ್ ವಿಭಾಗವನ್ನು ಬೇರ್ಪಡಿಸಿ ವಿಲೀನಗೊಳಿಸಿಕೊಂಡಿರುವ ಕಂಪೆನಿಯಾಗಿದ್ದು ಮಾ. 18 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ
ಯಾಗಿದೆ.
* ಮೆಗ್ರಿ ಸಾಫ್ಟ್ ಕಂಪೆನಿಯು ದೆಹಲಿ ಮತ್ತು ಲುಧಿಯಾನ ಷೇರು ವಿನಿಮಯ ಕೇಂದ್ರದಗಳಲ್ಲಿ ವಹಿವಾಟಾ
ಗುತ್ತಿದ್ದು, 18 ರಿಂದ ಡಿ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
*  ಕಲ್ಪ ಕಮರ್ಷಿಯಲ್ ಕಂಪೆನಿಯು ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿದ್ದು 18 ರಿಂದ ಡಿ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. 

ಗಜಗಾತ್ರದ ವಹಿವಾಟು:
* ಫ್ರಾಂಕ್ಲಿನ್ ಟೆಂಪಲ್ಟನ್ ಇನ್ವೆಸ್ಟ್ ಮೆಂಟ್ ಫಂಡ್ಸ್ 16ರಂದು 26.18 ಲಕ್ಷ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಷೇರನ್ನು ಖರೀದಿಸಿದೆ.
* ಎಚ್ ಡಿ ಎಫ್ ಸಿ ಮ್ಯುಚುಯಲ್ ಫಂಡ್ 16ರಂದು 30 ಲಕ್ಷ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಷೇರನ್ನು ಮಾರಾಟ ಮಾಡಿದೆ.
* ಗಲ್ಫ್ ಆಯಿಲ್ ಇಂಟರ್ ನ್ಯಾಷನಲ್ ಮಾರಿಷಸ್ 17 ರಂದು 2.97 ಕೋಟಿ ಗಲ್ಫ್ ಆಯಿಲ್ ಕಾರ್ಪ್ ಷೇರುಗಳನ್ನು ಮಾರಾಟ ಮಾಡಿದೆ.

* ಹಿಂದುಜಾ ಪವರ್ 17 ರಂದು 2.97 ಕೋಟಿ ಗಲ್ಫ್ ಆಯಿಲ್ ಕಾರ್ಪ್ ಷೇರುಗಳನ್ನು  ಖರೀದಿಸಿದೆ.
* ಇಂಡಿಯಾ ಕ್ಯಾಪಿಟಲ್ ಫಂಡ್ 17 ರಂದು 4.88ಕೋಟಿ ಸೌತ್ ಇಂಡಿಯನ್ ಬ್ಯಾಂಕ್ ಷೇರನ್ನು ಮಾರಾಟ ಮಾಡಿದೆ.
* ಕೋಟಕ್ ಮಹಿಂದ್ರಾ ಇಂಟರ್ ನ್ಯಾಷನಲ್  17 ರಂದು 2.85 ಕೋಟಿ ಸೌತ್ ಇಂಡಿಯನ್ ಬ್ಯಾಂಕ್ ಷೇರನ್ನು ಖರೀದಿಸಿದೆ.
* ಎಲ್ ಐ ಸಿ ಆಫ್ ಇಂಡಿಯಾ 18 ರಂದು 28.82 ಲಕ್ಷ ಕೇರ್ ರೇಟಿಂಗ್ ಷೇರನ್ನು ಖರೀದಿಸಿದೆ.
* ಐ ಡಿ ಬಿ ಐ ಬ್ಯಾಂಕ್ 18 ರಂದು 29 ಲಕ್ಷ ಕೇರ್ ರೇಟಿಂಗ್ ಷೇರನ್ನು ಮಾರಾಟ ಮಾಡಿದೆ.
* ಆರೇಂಜ್ ಮಾರಿಷಸ್ ಇನ್ವೆಸ್ಟ್ ಮೆಂಟ್ಸ್ 18 ರಂದು 2.75 ಲಕ್ಷ ಲಾಯ್ಡ್ಸ್ ಎಲೆಕ್ ಟ್ರಿಕ್ ಇಂಜಿನೀರಿಂಗ್ ಷೇರುಗಳನ್ನು ಖರೀದಿಸಿದೆ.
* ಗೋಲ್ಡ್ ಮ್ಯಾನ್ ಸಾಕ್ಸ್ ಸಿಂಗಾಪುರ್ 20 ರಂದು 44.50 ಲಕ್ಷ ಹಾತವೇ ಷೇರುಗಳನ್ನು ಖರೀದಿಸಿದೆ.

ಬೋನಸ್ ಷೇರು
* ಆರತಿ ಡ್ರಗ್ಸ್ ಕಂಪೆನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 25 ನಿಗದಿತ ದಿನವಾಗಿದೆ.
* ವಾ ಟೆಕ್ ವಾಬಾಗ್ ಕಂಪೆನಿಯು ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಮಾರ್ಚ್ 27 ನಿಗದಿತ ದಿನವಾಗಿದೆ.
* ಚಾಣಕ್ಯ ಇನ್ವೆಸ್ಟ್ ಮೆಂಟ್ಸ್ ಕಂಪೆನಿಯು 2:1 ರ ಅನುಪಾತದೆ ಬೋನಸ್ ಷೇರು ಪ್ರಕಟಿಸಿದೆ .
* ವಿಎಚ್‌ ಸಿ ಎಲ್ ಇಂಡಸ್ಟ್ರೀಸ್ ಕಂಪೆನಿ ವಿತರಿಸಲಿರುವ 3:1 ರ ಅನುಪಾತದೆ ಬೋನಸ್ ಷೇರಿಗೆ ಮಾರ್ಚ್ 27 ನಿಗದಿತ ದಿನವಾಗಿದೆ.
* ಕಂಪು ಏಜ್ ಇನ್ಫೋಕಾಮ್ ಕಂಪೆನಿಯು 28 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಸಂಪರ್ಕಕ್ಕೆ ಮೊ: 9886313380 (ಸಂಜೆ 4.30ರ ನಂತರ)

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.