ADVERTISEMENT

ಕೃಷಿ–ತಂತ್ರಜ್ಞಾನ ವಲಯದ ನವೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳ

ಪ್ರತೀಕ್ ದೇಸಾಯಿ
Published 28 ಆಗಸ್ಟ್ 2022, 21:24 IST
Last Updated 28 ಆಗಸ್ಟ್ 2022, 21:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೃಷಿ ಮತ್ತು ಕೃಷಿ ಆಧಾರಿತ ತಂತ್ರಜ್ಞಾನ ವಲಯದ ನವೋದ್ಯಮಗಳು ಈ ವರ್ಷದಲ್ಲಿ ಒಟ್ಟು ₹ 10,556 ಕೋಟಿ ಬಂಡವಾಳ ಸಂಗ್ರಹ ಮಾಡಿವೆ. ಹಿಂದಿನ ವರ್ಷದಲ್ಲಿ ಆಗಿದ್ದ ಬಂಡವಾಳ ಸಂಗ್ರಹಕ್ಕೆ ಹೋಲಿಸಿದರೆ ಇದು ಆರು ಪಟ್ಟು ಹೆಚ್ಚು.

ಈ ವಲಯದಲ್ಲಿ ಮುಂದಿನ ದಿನಗಳಲ್ಲಿ ಬೆಳವಣಿಗೆಗೆ ಇನ್ನಷ್ಟು ಅವಕಾಶಗಳು ಇವೆ ಎಂದು ಉದ್ಯಮದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಂತ್ರಿಕವಾಗಿ ಆಗಿರುವ ಬೆಳವಣಿಗೆಗಳು ಹಾಗೂ ಡಿಜಿಟಲೀಕರಣಕ್ಕೆ ದೊರೆತಿರುವ ಒತ್ತಾಸೆಯು ಕೃಷಿ ನವೋದ್ಯಮಗಳ ಬೆಳವಣಿಗೆಗೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಕೋವಿಡ್‌ ಸಾಂಕ್ರಾಮಿಕವು ಐದು ವರ್ಷಗಳಲ್ಲಿ ಆಗಬಹುದಾಗಿದ್ದ ಬೆಳವಣಿಗೆಯನ್ನು ಎರಡು ವರ್ಷಗಳಲ್ಲಿ ಸಾಧ್ಯವಾಗಿಸಿದೆ ಎಂದು ಪಿಡಬ್ಲ್ಯೂಸಿ ಸಂಸ್ಥೆಯ ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಿಕಾಂತ ಸಿಂಗ್ ಹೇಳುತ್ತಾರೆ.

ADVERTISEMENT

‘ದೇಶದ ಕೃಷಿ ತಂತ್ರಜ್ಞಾನ ವಲಯದ ಸಾಮರ್ಥ್ಯದ ಬಗ್ಗೆ ಯಾವತ್ತೂ ಯಾವ ಅನುಮಾನವೂ ಇರಲಿಲ್ಲ. ಆದರೆ, ಈಗ ಈ ವಲಯದಲ್ಲಿ ಕಂಡುಬಂದಿರುವ ಚುರುಕಿನ ಬೆಳವಣಿಗೆಗೆ ಕಾರಣ ನೀತಿಗಳು ಪೂರಕವಾಗಿರುವುದು, ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್‌ಫೋನ್ ಹಾಗೂ ಇಂಟರ್ನೆಟ್ ಬಳಕೆ ಜಾಸ್ತಿಯಾಗುತ್ತಿರುವುದು’ ಎಂದು ಸಿಂಗ್ ತಿಳಿಸಿದರು.

ನಿರ್ದಿಷ್ಟ ವಲಯದಲ್ಲಿನ ಮೂಲಸೌಕರ್ಯಗಳ ಕೊರತೆ ಹಾಗೂ ಅಸಾಮರ್ಥ್ಯಗಳು ಅಲ್ಲಿಗೆ ಹೆಚ್ಚಿನ ಹೂಡಿಕೆಗಳು ಹರಿದುಬರುವಂತೆ ಮಾಡಿವೆ.

ಇದು ಆ ವಲಯವು ಹೂಡಿಕೆದಾರರು ಮತ್ತು ಉದ್ಯಮಿಗಳ ಪಾಲಿಗೆ ಫಲವತ್ತಾದ ನೆಲವಾಗಿ ‍ಪರಿವರ್ತನೆ ಕಾಣುವಂತೆ ಮಾಡಿವೆ ಎಂದು ನವೋದ್ಯಮ ಕಂಪನಿ ರೇಶಮಂಡಿ ಸಹಸಂಸ್ಥಾಪಕ ಸೌರಭ್ ಅಗರ್ವಾಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.