ನವದೆಹಲಿ: ಮುಂದಿನ ಐದರಿಂದ ಆರು ವರ್ಷಗಳಲ್ಲಿ ಒಟ್ಟು 10 ಸಾವಿರ ನವೋದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಅಲಕೇಶ್ ಕುಮಾರ್ ಶರ್ಮ ಹೇಳಿದ್ದಾರೆ.
‘ನವೋದ್ಯಮಗಳಿಗೆ ಬಂಡವಾಳ ಹೂಡಿಕೆ ದೊಡ್ಡ ವಿಷಯವೇ ಅಲ್ಲ. ನಾವು ಜೆನೆಸಿಸ್ ಯೋಜನೆಯ ಅಡಿಯಲ್ಲಿ 10 ಸಾವಿರ ನವೋದ್ಯಮಗಳಿಗೆ ಉತ್ತೇಜನ ನೀಡಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. ಜೆನೆಸಿಸ್ ಯೋಜನೆಯನ್ನು ಕೇಂದ್ರವು ಜುಲೈನಲ್ಲಿ ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.