ನವದೆಹಲಿ:ಭಾರತ ಸರ್ಕಾರದ ಮಹಾತ್ಮಾಕಾಂಕ್ಷೆಯ 'ಭಾರತ್ ಬಾಂಡ್ ಇಟಿಎಫ್' ಗುರುವಾರ ಸಾರ್ವಜನಿಕರ ಹೂಡಿಕೆ ಮುಕ್ತವಾಗಿದೆ. ಕನಿಷ್ಠ ₹ 1000 ಹೂಡಿಕೆಗೆ ಅವಕಾಶ ನೀಡಲಾಗಿದೆ.
ಕೇಂದ್ರೋದ್ಯಮ ಮತ್ತು ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಿಗೆ ಹೆಚ್ಚುವರಿ ಹಣಕಾಸು ನೆರವು ಒದಗಿಸುವ ಕಾರ್ಪೊರೇಟ್ ಬಾಂಡ್‌ಗಳ ಷೇರು ವಿನಿಮಯ ನಿಧಿ(ಇಟಿಎಫ್) ಇದಾಗಿದೆ. ಭಾರತ್ ಬಾಂಡ್ ಇಟಿಎಫ್ ಮೂಲಕ ₹ 15,000 ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದ್ದು,ಎಡೆಲ್ವಿಸ್ (Edelweiss) ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ (ಎಎಂಸಿ) ಬಾಂಡ್ ಹಂಚಿಕೆಯ ನಿರ್ವಹಣೆ ನಡೆಸುತ್ತಿದೆ.
ಡಿಸೆಂಬರ್ 12ರಿಂದ ಹೂಡಿಕೆಗೆ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಡಿಸೆಂಬರ್ 20ರ ವರೆಗೂ ಭಾರತ್ ಬಾಂಡ್ ಇಟಿಎಫ್‌ನಲ್ಲಿ ಹೂಡಿಕೆಅವಕಾಶನಿಗದಿಯಾಗಿದೆ. ಸಾರ್ವಜನಿಕರು ಕನಿಷ್ಠ ₹ 1000 ಹಾಗೂ ಗರಿಷ್ಠ ₹ 2,00,000 ಹೂಡಿಕೆ ಮಾಡಬಹುದಾಗಿದೆ.
ವಹಿವಾಟಿಗೆ ಒಳಪಡುವ ಬಾಂಡ್‌ಗಳು 3 ವರ್ಷ ಮತ್ತು 10 ವರ್ಷಗಳಪರಿಪಕ್ವ ದಿನ (ಮೆಚ್ಯುರಿಟಿ ಡೇಟ್) ಹೊಂದಿವೆ. ಮೂರು ವರ್ಷಗಳ ನಿಫ್ಟಿ ಭಾರತ್ ಬಾಂಡ್ ಇಂಡೆಕ್ಸ್–ಏಪ್ರಿಲ್ 2023, ಶೇ 6.69ರಷ್ಟು ಹಾಗೂ ಹತ್ತು ವರ್ಷಗಳನಿಫ್ಟಿ ಭಾರತ್ ಬಾಂಡ್ ಇಂಡೆಕ್ಸ್–ಏಪ್ರಿಲ್ 2030, ಶೇ 7.58 ಗಳಿಕೆ ನೀಡಲಿದೆ.
3 ವರ್ಷ ಅವಧಿಯ ಬಾಂಡ್‌ಗಳು ಒಟ್ಟು 13 ಸಂಸ್ಥೆಗಳಲ್ಲಿ ಹಾಗೂ 10 ವರ್ಷ ಅವಧಿಯ ಬಾಂಡ್‌ಗಳು ಒಟ್ಟು 12 ಸಂಸ್ಥೆಗಳಲ್ಲಿ ಹೂಡಿಕೆಯಾಗಲಿವೆ.
ಕೇಂದ್ರೋದ್ಯಮ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ 'ಎಎಎ' ಬಾಂಡ್‌ಗಳಲ್ಲಿ ಹಣ ಹೂಡಿಕೆಯಾಗಲಿದೆ. ಭಾರತದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಮ್ಯೂಚುವಲ್ ಫಂಡ್ ಪ್ರಾಡಕ್ಟ್ ಹಾಗೂ ಜಗತ್ತಿನಲ್ಲಿಯೇ ಅಗ್ಗದ ಬಾಂಡ್ ಇಟಿಎಫ್ ಎನ್ನಲಾಗಿದೆ. ಇದುದೇಶದ ಮೊದಲ ಕಾರ್ಪೊರೇಟ್ ಬಾಂಡ್ ಇಟಿಎಫ್ ಆಗಿದೆ.ಬಾಂಡ್ ಇಟಿಎಫ್‌ಗಳು ಸುರಕ್ಷತೆ, ದ್ರವ್ಯತೆ (ಷೇರುಪೇಟೆಯಲ್ಲಿ ವಹಿವಾಟು) ಮತ್ತು ತೆರಿಗೆ ಉಳಿತಾಯದ ಲಾಭ ಒದಗಿಸಲಿವೆ.
(3 ವರ್ಷ ಅವಧಿಯ ಬಾಂಡ್; ಹೂಡಿಕೆ ಒಳಗೊಂಡಿರುವಸಂಸ್ಥೆಗಳು)
ಡಿಮ್ಯಾಟ್ ಅಕೌಂಟ್ ಹೊಂದಿರುವವರು ನೇರವಾಗಿ ಹೂಡಿಕೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಡಿಮ್ಯಾಟ್ ಖಾತೆ ಹೊಂದಿರದವರಿಗೆ ಫಂಡ್ ಆಫ್ ಫಂಡ್ ಅವಕಾಶ ನೀಡಲಾಗಿದೆ.www.bharatbond.in ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ. ಡಿಸೆಂಬರ್ 31ರಿಂದ ಭಾರತ್ ಬಾಂಡ್ ಇಟಿಎಫ್ ವಹಿವಾಟಿಗೆ ತೆರೆದುಕೊಳ್ಳುವ ಸಾಧ್ಯತೆಯಿದೆ.
(10ವರ್ಷ ಅವಧಿಯ ಬಾಂಡ್; ಹೂಡಿಕೆ ಒಳಗೊಂಡಿರುವಸಂಸ್ಥೆಗಳು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.