ಮುಂಬೈ:ಕೇಂದ್ರ ಮಧ್ಯಂತರ ಬಜೆಟ್ ಮೇಲಿನ ನಿರೀಕ್ಷೆಯೊಂದಿಗೆ ಶುಕ್ರವಾರ ಬೆಳಿಗ್ಗೆ ಷೇರುಪೇಟೆಯಲ್ಲಿ ವಹಿವಾಟು ಚೇತರಿಕೆ ಕಂಡಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಧ್ಯಾಹ್ನ 12.15ರ ವೇಳೆಗೆ121.40 ಅಂಶ ಏರಿಕೆ ದಾಖಲಿಸಿ36,378.09ರಷ್ಟಾಗಿದೆ. ನಿಫ್ಟಿ 34.10 ಅಂಶ ಏರಿಕೆಯಾಗಿ10,865.05 ಆಗಿದೆ. ದಿನ ಆರಂಭದ ವಹಿವಾಟಿನ ವೇಳೆ ಸೆನ್ಸೆಕ್ಸ್ 160 ಅಂಶ ಏರಿಕೆಯೊಂದಿಗೆ 36,448.30 ಆಗಿತ್ತು. ನಿಫ್ಟಿ ಸಹ 57 ಅಂಶ ಏರಿಕೆ ಕಂಡು, 10,869 ಆಗಿತ್ತು.
ಇವತ್ತಿನ ವಹಿವಾಟಿನಲ್ಲಿ ದೇಶೀಯ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮವಾಗಿ ಭಾರತೀಯ ಷೇರುಗಳ ಮೌಲ್ಯವೂ ಹೆಚ್ಚಾಗಿದೆ.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಷೇರುಗಳ ವಹಿವಾಟು ಹೆಚ್ಚಾಗಿದ್ದು, ಮೌಲ್ಯವೂ ಏರಿಕೆ ದಾಖಲಿಸಿದೆ. ಆಟೋಮೊಬೈಲ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳ ಷೇರುಗಳಿಗೆ ಬೇಡಿಕೆ ಕಂಡುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.