ADVERTISEMENT

ಕಾಫಿ ಡೇ ಷೇರು ಕುಸಿತ: ಕರಗಿದ ₹1,723 ಕೋಟಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:28 IST
Last Updated 1 ಆಗಸ್ಟ್ 2019, 20:28 IST
   

ನವದೆಹಲಿ: ಕಾಫಿ ಡೇ ಎಂಟರ್‌ಪ್ರೈಸಸ್‌ನ ಷೇರು ಬೆಲೆ ಸತತ ಮೂರನೇ ದಿನವೂ ಕುಸಿತ ಕಂಡಿದೆ.

ಕಂಪನಿಗೆ ಸಂಬಂಧಿಸಿದ ಹಲವಾರು ನಕಾರಾತ್ಮಕ ಸುದ್ದಿಗಳಿಂದಾಗಿ ಷೇರು ಬೆಲೆ ಮೂರು ದಿನಗಳಿಂದ ಕುಸಿಯುತ್ತಲೇ ಇದೆ. ಗುರುವಾರದ ವಹಿವಾಟಿನಲ್ಲಿ ಪ್ರತಿ ಷೇರಿನ ಬೆಲೆ ಶೇ 10ರಷ್ಟು ಕಡಿಮೆಯಾಗಿ ₹ 110.95ಕ್ಕೆ ಇಳಿದಿದೆ. ಇದು 52 ವಾರಗಳಲ್ಲಿಯ ಅತಿ ಕಡಿಮೆ ಮಟ್ಟವಾಗಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿಯೂ ₹ 110.50ಕ್ಕೆ ಕುಸಿದಿದೆ.

ಮೂರು ದಿನಗಳಲ್ಲಿ ಷೇರಿನ ಬೆಲೆಯು ಶೇ 42ರಷ್ಟು ಕುಸಿತ ಕಂಡಿದೆ. ಇದರಿಂದ ಮಾರುಕಟ್ಟೆ ಮೌ‌ಲ್ಯದ ಲೆಕ್ಕದಲ್ಲಿ ಸಂಸ್ಥೆಯ ಸಂಪತ್ತು ₹ 1,723 ಕೋಟಿಗಳಷ್ಟು ಕರಗಿದೆ. ಸದ್ಯಕ್ಕೆ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ₹ 2,343.84 ಕೋಟಿಗಳಷ್ಟಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.