ಮುಂಬೈ: ಹಣಕಾಸು ವಲಯದ ಷೇರುಗಳ ಉತ್ತಮ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳಲ್ಲಿ ಗುರುವಾರ ಸಕಾರಾತ್ಮಕ ವಹಿವಾಟು ನಡೆಯಿತು.
ಜಾಗತಿಕ ಷೇರುಪೇಟೆಗಳ ವಹಿವಾಟು ಇಳಿಮುಖವಾಗಿದ್ದರೂಎಚ್‌ಡಿಎಫ್‌ಸಿ, ರಿಲಯನ್ಸ್ ಇಂಡಸ್ಟ್ರಿಸ್, ಕೋಟಕ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳ ಉತ್ತಮ ಗಳಿಕೆಯು ಸೂಚ್ಯಂಕಗಳ ಏರಿಕೆಗೆ ಕಾರಣವಾದವು.
ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 700 ಅಂಶಗಳಷ್ಟು ಜಿಗಿತ ಕಂಡು 34,208 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 210 ಅಂಶ ಹೆಚ್ಚಾಗಿ 10,091ಅಂಶಗಳಿಗೆ ಏರಿಕೆಯಾಗಿದೆ.
ಬಜಾಜ್ ಫೈನಾನ್ಸ್ ಕಂಪನಿಯ ಷೇರು ಶೇ 5ರಷ್ಟು ಗರಿಷ್ಠ ಏರಿಕೆ ಕಂಡಿತು. ಕೋಟಕ್ ಬ್ಯಾಂಕ್, ಎಸ್‌ಬಿಐ, ಪವರ್‌ಗ್ರಿಡ್, ಆ್ಯಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳೂ ಏರಿಕೆ ಕಂಡಿವೆ.
ಏಷ್ಯಾದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗಲಿದೆ ಎಂದು ಎಡಿಬಿ ಹೇಳಿಕೆ ನೀಡಿರುವುದು ಏಷ್ಯಾದ ಷೇರುಪೇಟೆಗಳಲ್ಲಿ ನಕಾರಾತ್ಮಕ ಚಟುವಟಿಕೆ ನಡೆಯುವಂತೆ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.