ADVERTISEMENT

ಪ್ಯಾರಿಸ್‌ ಷೇರುಪೇಟೆ ಸೇರಲಿದೆ 'ಕ್ರಿಪ್ಟೊ ಬ್ಲಾಕ್‌ಚೈನ್‌ ಇಂಡಸ್ಟ್ರೀಸ್‌'

ರಾಯಿಟರ್ಸ್
Published 25 ಅಕ್ಟೋಬರ್ 2021, 12:46 IST
Last Updated 25 ಅಕ್ಟೋಬರ್ 2021, 12:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ಯಾರಿಸ್: ಜಗತ್ತಿನಾದ್ಯಂತ ಕ್ರಿಪ್ಟೊಕರೆನ್ಸಿಗಳ ಕುರಿತು ಆಸಕ್ತಿ ಹೆಚ್ಚುತ್ತಿದ್ದು, ಬಿಟ್‌ಕಾಯಿನ್‌ ರೀತಿಯ ಹಲವು ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮತ್ತು ವಹಿವಾಟು ಸಹ ನಡೆಯುತ್ತಿದೆ. ಇದರ ಬೆನ್ನಲ್ಲೇ ಫ್ರೆಂಚ್‌ ಕಂಪನಿ 'ಕ್ರಿಪ್ಟೊ ಬ್ಲಾಕ್‌ಚೈನ್‌ ಇಂಡಸ್ಟ್ರೀಸ್‌' ಷೇರುಪೇಟೆಯಲ್ಲಿ ಅಧಿಕೃತ ವಹಿವಾಟಿಗೆ ತೆರೆದುಕೊಳ್ಳಲು ಮುಂದಾಗಿದೆ.

ಪ್ಯಾರಿಸ್‌ನ 'ಯೂರೊನೆಕ್ಸ್ಟ್‌ ಗ್ರೋತ್‌' ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳ ಸಾಲಿಗೆ 'ಕ್ರಿಪ್ಟೊ ಬ್ಲಾಕ್‌ಚೈನ್‌ ಇಂಡಸ್ಟ್ರೀಸ್‌' ಸಹ ಸೇರ್ಪಡೆಯಾಗಲಿದೆ. ಕಂಪನಿಯು ಪ್ರತಿ ಷೇರಿಗೆ 2 ಯೂರೊ (ಸುಮಾರು ₹175) ನಿಗದಿ ಪಡಿಸುವುದಾಗಿ ಪ್ರಕಟಿಸಿದೆ.

ಷೇರುಗಳ ವಿತರಣೆಯಿಂದ ಕಂಪನಿಯು 38.7 ಮಿಲಿಯನ್‌ ಯೂರೊ (ಸುಮಾರು ₹338 ಕೋಟಿ) ಮಾರುಕಟ್ಟೆ ಮೌಲ್ಯ ಹೊಂದಲಿದೆ.

ADVERTISEMENT

ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಕ್ರಿಪ್ಟೊಕರೆನ್ಸಿ ಬಿಟ್‌ಕಾಯಿನ್‌, ಕಳೆದ ವಾರದ ವಹಿವಾಟಿನಲ್ಲಿ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿತ್ತು. ಪ್ರತಿ ಬಿಟ್‌ಕಾಯಿನ್‌ ಮೌಲ್ಯ 67,016 ಡಾಲರ್‌ (ಸುಮಾರು ₹50.28 ಲಕ್ಷ) ವರೆಗೂ ತಲುಪಿತ್ತು. ಇವತ್ತು ಪ್ರತಿ ಬಿಟ್‌ಕಾಯಿನ್‌ ಮೌಲ್ಯ ಸುಮಾರು ₹47.15 ಲಕ್ಷದಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.