ADVERTISEMENT

ಫ್ಯೂಚರ್‌ ರಿಟೇಲ್‌ನಲ್ಲಿದ್ದ ಷೇರು ಮಾರಿದ ಹೆರಿಟೇಜ್‌ ಫುಡ್ಸ್‌

ಪಿಟಿಐ
Published 9 ಡಿಸೆಂಬರ್ 2020, 12:09 IST
Last Updated 9 ಡಿಸೆಂಬರ್ 2020, 12:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಿಶೋರ್‌ ಬಿಯಾನಿ ನೇತೃತ್ವದ ಫ್ಯೂಚರ್‌ ರಿಟೇಲ್‌ನಲ್ಲಿ ಹೊಂದಿದ್ದ ಶೇಕಡ 3ರಷ್ಟು ಷೇರುಗಳನ್ನು ಮಾರಾಟ ಮಾಡಿರುವುದಾಗಿ ಹೆರಿಟೇಜ್‌ ಫುಡ್ಸ್‌ ಕಂಪನಿ ಬುಧವಾರ ತಿಳಿಸಿದೆ.

ಫ್ಯೂಚರ್‌ ರಿಟೇಲ್‌ನಲ್ಲಿ ಹೊಂದಿದ್ದ ಒಟ್ಟಾರೆ 1.78 ಕೋಟಿ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ₹ 131.94 ಕೋಟಿ ಸಂಗ್ರಹಿಸಲಾಗಿದೆ ಎಂದು ಹೆರಿಟೇಜ್ ಫುಡ್ಸ್ ಷೇರುಪೇಟೆಗೆ ಮಾಹಿತಿ ನೀಡಿದೆ. ಷೇರು ಮಾರಾಟದಿಂದ ಬಂದಿರುವ ಹಣವನ್ನು ಸಾಲ ತೀರಿಸಲು ಬಳಸುವುದಾಗಿ ಅದು ಹೇಳಿದೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರ ಕುಟುಂಬದ ಸದಸ್ಯರು ಹೆರಿಟೇಜ್‌ ಫುಡ್ಸ್‌ನ ಪ್ರವರ್ತಕರಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.