ADVERTISEMENT

Sensex: ಸತತ 2ನೇ ದಿನವೂ ಅದಾನಿ ಷೇರುಗಳ ಮೌಲ್ಯ ಕುಸಿತ

ಪಿಟಿಐ
Published 22 ನವೆಂಬರ್ 2024, 6:35 IST
Last Updated 22 ನವೆಂಬರ್ 2024, 6:35 IST
<div class="paragraphs"><p>ಅದಾನಿ ಸಮೂಹ, ಗೌತಮ್ ಅದಾನಿ</p></div>

ಅದಾನಿ ಸಮೂಹ, ಗೌತಮ್ ಅದಾನಿ

   

– ಪಿಟಿಐ ಚಿತ್ರಗಳು

ಮುಂಬೈ: ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧ ಅಮೆರಿಕದಲ್ಲಿ ಆರೋಪ ಹೊರಿಸಿದ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳ ಮೌಲ್ಯ ಸತತ ಎರಡನೇ ದಿನವೂ ಕುಸಿತ ಕಂಡಿವೆ.

ADVERTISEMENT

ಅದಾನಿ ಸಮೂಹದ 10 ಕಂಪನಿಗಳ ಪೈಕಿ ಎಂಟು ಷೇರುಗಳ ಮೌಲ್ಯ ಇಳಿಕೆ ಕಂಡಿವೆ.

ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಅದಾನಿ ಗ್ರೀನ್ ಎನರ್ಜಿ ಶೇ 10.95, ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ 8.57 ರಷ್ಟು ಕುಸಿತ ಕಂಡಿವೆ. ಆ ಮೂಲಕ 52 ವಾರಗಳಲ್ಲೇ ಷೇರುಗಳ ಮೌಲ್ಯ ಕನಿಷ್ಠ ಮಟ್ಟಕ್ಕೆ ತಲುಪಿವೆ.

ಅದಾನಿ ಎಂಟರ್‌ಪ್ರೈಸಸ್ ಶೇ 6.98, ಅದಾನಿ ಪವರ್ 6.38, ಅದಾನಿ ಟೋಟಲ್ ಗ್ಯಾಸ್ ಶೇ 6.11, ಅದಾನಿ ಪೋರ್ಟ್ಸ್ ಶೇ 5.31, ಅದಾನಿ ವಿಲ್ಮರ್ ಶೇ 5.17 ಮತ್ತು ಎನ್‌ಡಿಟಿವಿ ಶೇ 3.41ರಷ್ಟು ಕುಸಿತ ಕಂಡಿವೆ.

ಮತ್ತೊಂದೆಡೆ ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್ ಸ್ವಲ್ಪ ಚೇತರಿಕೆ ಕಂಡಿದ್ದು, ಶೇ 2ರಷ್ಟು ಏರಿಕೆ ಕಂಡಿವೆ.

ಗುರುವಾರ ಷೇರುಪೇಟೆ ವಹಿವಾಟಿನಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರಿನ ಮೌಲ್ಯ ಶೇ 20ರಷ್ಟು ಕುಸಿತ ಕಂಡಿತ್ತು. ಒಂದೇ ದಿನ ಮಾರುಕಟ್ಟೆ ಬಂಡವಾಳ ಮೌಲ್ಯ (ಎಂ–ಕ್ಯಾ‍ಪ್‌) ₹2.19 ಲಕ್ಷ ಕೋಟಿ ಕರಗಿತ್ತು.

ಷೇರು ಮಾರುಕಟ್ಟೆ ಚೇತರಿಕೆ...

ಏತನ್ಮಧ್ಯೆ ಇಂದಿನ (ಶುಕ್ರವಾರ) ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 781.02 ಅಂಶ ಏರಿಕೆ ಕಂಡು 77,936.81 ಅಂಶಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 228.90 ಅಂಶ ಏರಿಕೆಯಾಗಿ 23,578.80 ಅಂಶಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.