ADVERTISEMENT

ಷೇರುಪೇಟೆ: ಆರಂಭಿಕ ಏರಿಕೆ ಬಳಿಕ ಕುಸಿದ ಸೆನ್ಸೆಕ್ಸ್, ನಿಫ್ಟಿ

ಪಿಟಿಐ
Published 21 ಅಕ್ಟೋಬರ್ 2024, 5:05 IST
Last Updated 21 ಅಕ್ಟೋಬರ್ 2024, 5:05 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ವಾರದ ಆರಂಭಿಕ ವಹಿವಾಟಿನಲ್ಲೇ ಷೇರುಪೇಟೆಯಲ್ಲಿ ಹಾವುಏಣಿಯಾಟ ಶುರುವಾಗಿದೆ. ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬಳಿಕ ಕುಸಿದಿವೆ.

ನಿಫ್ಟಿ 124 ಅಂಶಗಳ ಏರಿಕೆಯೊಂದಿಗೆ 24,978ರಲ್ಲಿ ವಹಿವಾಟು ಆರಂಭಿಸಿದರೆ, ಬಿಎಸ್‌ಇ ಸೆನ್ಸೆಕ್ಸ್ 545 ಅಂಶಗಳ ಏರಿಕೆಯೊಂದಿಗೆ 81,770ರಲ್ಲಿ ವಹಿವಾಟು ಆರಂಭಿಸಿತ್ತು. ಬಳಿಕ ಸೆನ್ಸೆಕ್ಸ್ 136 ಮತ್ತು ನಿಫ್ಟಿ 100 ಅಂಶಗಳಷ್ಟು ಕುಸಿದವು.

ಸೋಮವಾರ ಸೆನ್ಸೆಕ್ಸ್‌ನ ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್, ಏಷಿಯನ್ ಪೇಟ್ಸ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಕಂಪನಿಯ ಷೇರುಗಳು ಲಾಭ ಗಳಿಸಿವೆ.

ADVERTISEMENT

ಸೆಪ್ಟೆಂಬರ್ ತ್ರೈಮಾಸಿಕ ನಿವ್ವಳ ಆದಾಯ ಹೆಚ್ಚಳವಾದ ಹಿನ್ನೆಲೆಯಲ್ಲಿ ಎಚ್‌ಡಿಎಫ್‌ಸಿ ಷೇರು ಬೆಲೆ ಶೇ 3ರಷ್ಟು ಏರಿಕೆ ದಾಖಲಿಸಿದೆ.

ಕೋಟಕ್ ಮಹೀಂದ್ರ ಬ್ಯಾಂಕ್, ಭಾರ್ತಿ ಏರ್‌ಟೆಲ್, ಇಂಡಸ್‌ಲ್ಯಾಮಡ್ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ ನತ್ತು ಎನ್‌ಟಿಪಿಸಿ ನಷ್ಟ ಕಂಡ ಕಂಪನಿಗಳಾಗಿವೆ.

ತ್ರೈಮಾಸಿಕ ವರದಿಯು ಹೂಡಿಕೆದಾರರ ಮನಗೆಲ್ಲುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕೋಟಕ್ ಶೇ 5ರಷ್ಟು ಕುಸಿದಿದೆ.

ಏಷ್ಯಾ ಷೇರುಪೇಟೆಗಳ ಪೈಕಿ ಸೋಲ್, ಟೋಕಿಯೊ, ಶಾಂಘೈ ಏರಿಕೆ ಕಂಡರೆ, ಹಾಂಗ್‌ಕಾಂಗ್‌ ೆೇಪಟೆ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.